ಮಡಿಕೇರಿ: ಮಳೆ ಬರಲೆಂದು ಸೋಮವಾರಪೇಟೆ ತಾಲೂಕಿನ ಕೂಡಿಗೆ ಗ್ರಾಮ ಪಂಚಾಯ್ತಿ ವ್ಯಾಪ್ತಿಯ ಮಲ್ಲೇನಹಳ್ಳಿ ಗ್ರಾಮಸ್ಥರು ಕಪ್ಪೆಗಳಿಗೆ ಮದುವೆ ಮಾಡಿಸಿದ್ದಾರೆ.
ಜಿಲ್ಲೆಯಲ್ಲಿ ಬರಗಾಲದ ಛಾಯೆ ಎದ್ದು ಕಾಣುತ್ತಿದ್ದು ರೈತರು ವರುಣನ ಕೃಪೆಗಾಗಿ ಕಪ್ಪೆಗಳ ಮದುವೆ ಮಾಡಿ ಪ್ರಾರ್ಥನೆ ಸಲ್ಲಿಸಿದ್ದಾರೆ. ಗ್ರಾಮದ ಸಮೀಪದ ಹಳ್ಳದಿಂದ ಗಂಡು ಮತ್ತು ಹೆಣ್ಣುಕಪ್ಪೆಯನ್ನು ಹಿಡಿದು ತಂದ ರೈತರು ಜಮೀನೊಂದರ ಕೆಳಭಾಗದಲ್ಲಿ ಚಪ್ಪರ ನಿರ್ಮಿಸಿ ಸಿಂಗರಿಸಿ, ಎರಡು ಕಪ್ಪೆಗಳಿಗೆ ಶಾಸ್ತ್ರೋಕ್ತವಾಗಿ ಮದುವೆ ಮಾಡಿಸಿದರು. ಇದನ್ನೂ ಓದಿ: ಮಳೆಗಾಗಿ ಉಡುಪಿಯಲ್ಲಿ ಬ್ಯಾಂಡ್, ವಾದ್ಯ, ತಾಳ ಮೇಳಗಳೊಂದಿಗೆ ಕಪ್ಪೆ ಮದುವೆ – ವಿಡಿಯೋ ನೋಡಿ
Advertisement
Advertisement
ಕಪ್ಪೆಗಳ ಮದುವೆಗೂ ಊಟದ ವ್ಯವಸ್ಥೆ ಮಾಡಲಾಗಿತ್ತು. ಕಪ್ಪೆಗಳ ಮದುವೆ ಮಾಡಿದ ನಂತರ ರೈತರು ಮಳೆಗಾಗಿ ಪ್ರಾರ್ಥಿಸಿದರು. ಜಿಲ್ಲೆಯಲ್ಲಿ ಕಳೆದ ಬಾರಿ ಜಲಪ್ರಳಯ ಸೃಷ್ಟಿಯಾಗಿ ಜನರ ಬದುಕು ಅತಂತ್ರವಾಗಿತ್ತು. ಇದೀಗ ಮಳೆ ಇಲ್ಲದೇ ಜಿಲ್ಲೆಯಲ್ಲಿ ಬಿಸಿಲಿನ ವಾತಾವರಣ ಕಂಡು ಬರುತ್ತಿದೆ.
Advertisement
Advertisement
ಮಳೆ ಬರಲೆಂದು ಜನತೆ ಜಿಲ್ಲೆಯ ಹಲವೆಡೆ ವಿಶೇಷ ಪೂಜೆ, ಹೋಮಗಳನ್ನು ಮಾಡಿಸಿ ಪ್ರಾರ್ಥಿಸುತ್ತಿದ್ದಾರೆ.