ರಾಯಚೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ಮಾಡಿರುವ ರೈತರ ಸಾಲ ಮನ್ನಾದಿಂದ ರೈತರಿಗೆ ಅನುಕೂಲಕ್ಕಿಂತ ತೊಂದರೆಯೇ ಜಾಸ್ತಿಯಾಗಿದೆ.
50 ಸಾವಿರ ರೂಪಾಯಿ ಸಾಲ ಮನ್ನಾ ಘೋಷಣೆಯಾದ್ರೂ ಸಹಕಾರಿ ಬ್ಯಾಂಕ್‍ಗಳು ಮಾತ್ರ ಬಾಕಿ ಪ್ರಮಾಣಪತ್ರ ಕೊಡ್ತಿಲ್ಲ. ಇದರಿಂದ ರೈತರಿಗೆ ಹೊಸ ಸಾಲನೂ ಸಿಗ್ತಿಲ್ಲ. ಹಳೆ ಸಾಲಗಾರರನ್ನ ಹೊಸ ಪಟ್ಟಿಗೆ ಸೇರಿಸುತ್ತಿಲ್ಲ.
Advertisement
Advertisement
ಸಾಲ ಸಿಗದೇ ರೈತರು ಹೆಚ್ಚು ಬಡ್ಡಿಗೆ ಖಾಸಗಿ ಸಾಲದ ಶೂಲದಲ್ಲಿ ಸಿಲುಕುತ್ತಿದ್ದಾರೆ. ಬಡ್ಡಿರಹಿತವಾಗಿ 3 ಲಕ್ಷದವರೆಗೆ ಸಾಲ ಕೊಡಬೇಕಾದ ಬ್ಯಾಂಕ್‍ಗಳು ಮೊದಲ ಬಾರಿ ಸಾಲ ಪಡೆಯುವವರಿಗೆ ಕೇವಲ 10 ಸಾವಿರ ರೂಪಾಯಿ ಮಾತ್ರ ನೀಡ್ತಿವೆ. ರಾಯಚೂರು, ಕೊಪ್ಪಳ ಜಿಲ್ಲೆ ಸೇರಿ 89 ಸಾವಿರದ 513 ಜನ ರೈತರ 272 ಕೋಟಿ ಸಾಲ ಮನ್ನಾ ಆಗಿದೆ. ಆದ್ರೆ ಈ ಎಲ್ಲಾ ರೈತರಿಗೆ ಈ ಬಾರಿ ಸಾಲವನ್ನೇ ನೀಡಿಲ್ಲ.
Advertisement
40 ಕೋಟಿಗೆ ಕ್ರಿಯಾ ಯೋಜನೆ ಸಿದ್ದಪಡಿಸಿದೆ. ಡಿಸೆಂಬರ್ ಬಳಿಕ ಸಾಲ ಕೊಡುವುದಾಗಿ ರಾಯಚೂರು ಜಿಲ್ಲಾ ಕೇಂದ್ರ ಸಹಕಾರ ಬ್ಯಾಂಕ್ ನಿಯಮಿತ ಹೇಳಿದೆ ಎಂದು ತಿಳಿದುಬಂದಿದೆ.