ಹಾವೇರಿ: ರೈತರು ಜಿಲ್ಲಾ ಆಸ್ಪತ್ರೆಯ ರೋಗಿಗಳಿಗೆ ಹಣ್ಣು ಹಂಪಲನ್ನು ವಿತರಿಸುವ ಮೂಲಕ ರೈತ ದಿನಾಚಾರಣೆಯನ್ನು ಆಚರಿಸಿದ್ದಾರೆ.
ನಗರದ ಜಿಲ್ಲಾ ಆಸ್ಪತ್ರೆಗೆ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಜಿಲ್ಲಾ ರೈತ ಮುಖಂಡನಾದ ಸುರೇಶ್ ಚಲವಾದಿ ಭೇಟಿ ನೀಡಿದ್ದರು. ಅಲ್ಲದೇ ಅಲ್ಲಿನ ರೋಗಿಗಳಿಗೆ ಹಣ್ಣುಗಳನ್ನು ವಿತರಿಸುವ ಮೂಲಕ ರೈತ ದಿನಾಚರಣೆಯನ್ನು ಆಚರಣೆ ಮಾಡಿದ್ದಾರೆ.
Advertisement
ಈ ವೇಳೆ ಮಾತನಾಡಿದ ಸುರೇಶ್ ಚಲವಾದಿ, ಜಗತ್ತಿನ ನಾಗರಿಕತೆ ಆರಂಭದಿಂದ ಹಿಡಿದು ಪೂರ್ವಜರ ಕಾಲಕ್ಕೂ ಮತ್ತು ಇಂದಿಗೂ ಈ ಜೀವನ ನಿಂತಿರುವುದು ವ್ಯವಸಾಯದಿಂದ. ನಾವೆಲ್ಲಾ ಬದುಕಿ ಬೆಳೆದಿದ್ದು ರೈತರಿಂದ, ನಾವಿಲ್ಲದೇ ದೇಶದಲ್ಲಿ ಯಾವ ಒಂದು ಶಕ್ತಿ ಕೂಡ ಮುಂದುವರಿಯಲೂ ಸಾಧ್ಯವಿಲ್ಲ ಎಂದರು.
Advertisement
Advertisement
ಈ ದೇಶದ ಇತ್ತೀಚಿನ ಆಡಳಿತ ಹುನ್ನಾರದಿಂದ ರೈತರಿಗೆ ಅನ್ಯಾಯವಾಗುತ್ತಿದೆ. ಇದಕ್ಕೆಲ್ಲಾ ರೈತರ ತಾಳ್ಮೆ , ಮುಗ್ಧತೆ, ಒಗ್ಗಟ್ಟಿನ ಕೊರತೆ ಕಾರಣ. ಆದ್ದರಿಂದ ರೈತರು ಇನ್ನಾದರೂ ಎಚ್ಚೆತ್ತುಕೊಂಡು ದೇಶದಲ್ಲಿ ರೈತಪರ ನಾಯಕರನ್ನು ಆಯ್ಕೆ ಮಾಡಬೇಕು. ಇಲ್ಲದಿದ್ದರೇ ಬ್ರಿಟಿಷರ ಕಾಲದಲ್ಲಿದ್ದ ಗುಲಾಮಗಿರಿ ಮರಳಿ ಬಂದರೆ ಆಶ್ವರ್ಯ ಪಡಬೇಕಿಲ್ಲ ಎಂದು ಈಗಿನ ಸರ್ಕಾರಕ್ಕೆ ಎಚ್ಚರಿಕೆ ನೀಡಿದರು.
Advertisement
ಈ ಸಂದರ್ಭದಲ್ಲಿ ನ್ಯಾಯವಾದಿಗಳಾದ ಜಾವಗಲ್ಲ, ಶಿವಬಸಪ್ಪ ಗೋವಿ, ಹಾಲೇಶ ಕೇರೂಡಿ, ಸೇರಿದಂತೆ ಇನ್ನೂ ಮುಂತಾದವರು ಭಾಗವಹಿಸಿದ್ದರು.