– ತುಮಕೂರಿನಲ್ಲಿ ಚಿರತೆ ಓಡಾಟ – ಕತ್ತಲಾಗುತ್ತಿದ್ದಂತೆ ಮನೆ ಸೇರಿಕೊಳ್ತಿದ್ದಾರೆ ಜನ
ಬೆಂಗಳೂರು: ರಾಜ್ಯದ ಕೆಲವು ಜಿಲ್ಲೆಗಳಲ್ಲಿ ದಿನೇ ದಿನೇ ಕಾಡಾನೆಗಳ (Wild Elephant) ಉಪಟಳ ಹೆಚ್ಚಾಗುತ್ತಿದೆ. ಹಾಸನದಲ್ಲೂ ಗಜಡಪೆ ಉಪಟಳ ಮಿತಿಮೀರಿದೆ. ಸುಮಾರು 60ಕ್ಕೂ ಹೆಚ್ಚು ಕಾಡಾನೆಗಳು ಪ್ರತ್ಯೇಕವಾಗಿ ಬೀಡುಬಿಟ್ಟಿವೆ. ಪ್ರತಿನಿತ್ಯವೂ ಅಪಾರ ಪ್ರಮಾಣದ ಬೆಳೆ ನಾಶ ಮಾಡುತ್ತಿದ್ದು ರೈತರು ಹಾಗೂ ಕಾಫಿ ಬೆಳೆಗಾರರು ಇನ್ನಿಲ್ಲದ ನಷ್ಟ ಅನುಭವಿಸುತ್ತಿದ್ದಾರೆ. ಅತ್ತ ಆಂಧ್ರ-ತಮಿಳುನಾಡಿಗೆ ಹೊಂದಿಕೊಂಡಿರುವ ಗಡಿ ಗ್ರಾಮಗಳ ರೈತರ (Farmers) ನಿದ್ದೆಗೆಡಿಸಿರುವ ಗಜ ಪಡೆ, ಲಕ್ಷಾಂತರ ರೂಪಾಯಿ ಬೆಳೆ ನಾಶ ಮಾಡಿದೆ. ಆನೆಗಳ ತೊಂದ್ರೆ ಒಂದೆಡೆಯಾದ್ರೆ ತುಮಕೂರಿನಲ್ಲಿ ಚಿರತೆಗಳ (Leopard) ಓಡಾಟದ ದೃಶ್ಯ ಸಖತ್ ವೈರಲ್ ಆಗಿ ಜನ ಆತಂಕದಲ್ಲೇ ಜೀವನ ಸಾಗಿಸ್ತಿದ್ದಾರೆ.
Advertisement
ಸೈರನ್ ಮೂಲಕ ಬೆಳೆ ರಕ್ಷಣೆ ಹರಸಾಹಸ:
ಹಾಸನದ ಬೇಲೂರು ತಾಲ್ಲೂಕಿನಲ್ಲಿ ಕಾಡಾನೆಗಳ ಉಪಟಳಕ್ಕೆ ಬ್ರೇಕ್ ಹಾಕುವಲ್ಲಿ ಸರ್ಕಾರ ಹಾಗೂ ಅರಣ್ಯ ಇಲಾಖೆ ಸಂಪೂರ್ಣ ವಿಫಲವಾದ ಹಿನ್ನೆಲೆ ಇದೀಗ ರೈತರೇ ತಮ್ಮ ಬೆಳೆಗಳನ್ನು ರಕ್ಷಿಸಿಕೊಳ್ಳಲು ಮುಂದಾಗಿದ್ದಾರೆ. ಹಗಲು ವೇಳೆ ಕಾಫಿ ತೋಟಗಳಲ್ಲಿ ಸೈರನ್ ಹಾಕುವ ಮೂಲಕ ಕಾಡಾನೆಗಳು ಬಾರದಂತೆ ಕ್ರಮ ಕೈಗೊಂಡಿದ್ದಾರೆ. ರಾತ್ರಿ ವೇಳೆ ತಮ್ಮ ಜಮೀನಿನ ಹಲವೆಡೆ ಬೆಂಕಿ ಹಾಕಿ ಕಾಡಾನೆಗಳಿಂದ ಬೆಳೆಗಳನ್ನು ರಕ್ಷಿಸಿಕೊಳ್ಳಲು ಹೆಣಗಾಡುತ್ತಿದ್ದಾರೆ. ಮಲೆನಾಡಿನ ಜನರು ಹಗಲಿನಲ್ಲಿ ಕಾಫಿ ತೋಟಗಳಲ್ಲಿ ಚಾರ್ಜಬಲ್ ಮೈಕ್‌ಗಳನ್ನು ಅಳವಡಿಸುತ್ತಿದ್ದು ಅದರಿಂದ ವಿವಿಧ ರೀತಿಯ ಹತ್ತು ಮಾದರಿಯ ಶಬ್ದ ಬರುತ್ತಿದೆ. ಈ ಶಬ್ದದಿಂದಾಗಿ ಕಾಡಾನೆಗಳ ಹಾವಳಿ ಕೊಂಚ ನಿಯಂತ್ರಣವಾಗುತ್ತಿದೆ. ಇದನ್ನೂ ಓದಿ: ಬೆಂಗಳೂರು – ತುಮಕೂರು ಹೆದ್ದಾರಿಯಲ್ಲಿ ಟ್ರಾಫಿಕ್ ಜಾಮ್ ನಿಯಂತ್ರಣಕ್ಕೆ ಬಿಬಿಎಂಪಿ ಪ್ಲ್ಯಾನ್
Advertisement
Advertisement
ತಮಿಳುನಾಡಿನಿಂದ ರಾಜ್ಯಕ್ಕೆ ಕಾಡಾನೆ ಎಂಟ್ರಿ:
ಕೋಲಾರ ಜಿಲ್ಲೆ ಬಂಗಾರಪೇಟೆ ತಾಲ್ಲೂಕಿನ ಕಾಮಸಮುದ್ರ ಸುತ್ತಮುತ್ತ ಕಾಡಾನೆ ಹಾವಳೆ ಹೆಚ್ಚಾಗಿದ್ದು, ಪದೇ ಪದೇ ಈ ಭಾಗದಲ್ಲಿ ಆನೆಗಳ ಹಿಂಡು ಕಾಣಿಸಿಕೊಂಡು ಜನರನ್ನ ಬೆಳಗಳನ್ನ ಆಹುತಿ ಪಡೆಯುತ್ತಲೇ ಇದೆ. ತಮಿಳುನಾಡು ಗಡಿ ಪ್ರದೇಶಗಳಲ್ಲೇ ಬೀಡು ಬಿಟ್ಟಿಟ್ಟಿದ್ದ 11 ಕಾಡಾನೆಗಳ ಹಿಂಡು ಭತ್ತಲಹಳ್ಳಿ ಸುತ್ತಮುತ್ತ ಕಾಣಿಕೊಂಡಿವೆ. ಪರಿಣಾಮ ಸುತ್ತಮುತ್ತಲ ಗ್ರಾಮಗಳ ಜನರು ಆತಂಕದಲ್ಲೇ ಜೀವನ ಕಳೆಯುವ ಪರಿಸ್ಥಿತಿ ನಿರ್ಮಾಣವಾಗಿದೆ. ಅಲ್ಲದೇ ಪ್ರತಿನಿತ್ಯ ಹತ್ತಾರು ಎಕರೆ ವಿವಿಧ ಬೆಳೆಗಳನ್ನು ನಾಶ ಮಾಡುತ್ತಿವೆ. ತಮಿಳುನಾಡು ಅರಣ್ಯ ಪ್ರದೇಶದಿಂದ ರಾಜ್ಯಕ್ಕೆ ಆಗಮಿಸಿರುವ ಕಾಡಾನೆಗಳಿಂದ ಎಚ್ಚರ ವಹಿಸುವಂತೆ ಅರಣ್ಯ ಇಲಾಖೆ ಹಾಗು ಪೊಲೀಸ್ ಇಲಾಖೆ ಕಾಡಂಚಿನ ಗ್ರಾಮಗಳ ಜನರಿಗೆ ಎಚ್ಚರಿಕೆ ನೀಡಿದೆ. ಇದನ್ನೂ ಓದಿ: Hubballi| ಮಲಗಿದ್ದ ವೇಳೆ ಸಿಲಿಂಡರ್ ಗ್ಯಾಸ್ ಸ್ಫೋಟ – 9 ಅಯ್ಯಪ್ಪ ಮಾಲಾಧಾರಿಗಳಿಗೆ ಗಂಭೀರ ಗಾಯ
Advertisement
ತುಮಕೂರಿನಲ್ಲಿ ಚಿರತೆ ಆತಂಕ:
ಚಿರತೆ ಇದೆಯಂತೆ… ಓಡಾಡ್ತಾ ಇವೆಯಂತೆ.. ಕುಂದೂರು, ದೇವರಾಯಪಟ್ಟಣ, ಸಿದ್ದಗಂಗಾ ಮಠ, ಮಂಜುನಾಥ ನಗರದಲ್ಲಿ ಹಗಲೊತ್ತೂ ಕಾಣ್ತವಂತೆ ಹಿಗೊಂದು ಸಂದೇಶದ ವೀಡಿಯೋ ತುಮಕೂರು ನಗರದಲ್ಲಿ ಓಡಾಡ್ತಾ ಇದ್ದು ಜನರು ಗಾಬರಿಗೊಂಡಿದ್ದಾರೆ. ಇದರಿಂದ ಅಕ್ಕ-ಪಕ್ಕದ ಏರಿಯಾದವರು ಭಯದ ವಾತವರಣದಲ್ಲಿ ಬದುಕುವ ಸ್ಥಿತಿ ನಿರ್ಮಾಣವಾಗಿದೆ. ಜನ ಬೆಳಗಿನ ಜಾವ ಹಾಗೇ ಸಂಜೆ ವಾಕ್ ಬರುವುದನ್ನೇ ನಿಲ್ಲಿಸಿಬಿಟ್ಟಿದ್ದಾರೆ ಇದಲ್ಲದೇ ಮಕ್ಕಳನ್ನ ಸಂಜೆ 6 ಗಂಟೆ ನಂತರ ಆಚೆಯೇ ಕಳಿಸದಂತೆ ನಿಗಾವಹಿಸಿದ್ದಾರೆ. ನಿವೇಶನಗಳಲ್ಲಿ ಬೆಳೆದು ನಿಂತಿರುವ ಗಿಡಗಳನ್ನು ಕ್ಲೀನ್ ಮಾಡಿಸದೇ ನಿವೇಶನ ಮಾಲೀಕರಿಗೆ ಯಾವುದೇ ನೋಟಿಸ್ ಕೋಡದೇ ಪಾಲಿಕೆ ಕಣ್ಮುಚ್ಚಿ ಕುಳಿತಿರುವುದು ವಿಪರ್ಯಾಸವೇ ಸರಿ ಎಂದು ಸ್ಥಳೀಯರು ಆಕ್ರೋಶ ಹೊರಹಾಕಿದ್ದಾರೆ. ಇದನ್ನೂ ಓದಿ: 2025ರ ಹೊಸ ವರ್ಷಾಚರಣೆಗೆ ದಿನಗಣನೆ – ಬೆಂಗಳೂರಿನಲ್ಲಿ ಖಾಕಿ ಅಲರ್ಟ್, ಟಫ್ ರೂಲ್ಸ್ ಜಾರಿ