ಚಿಕ್ಕಬಳ್ಳಾಪುರ/ರಾಯಚೂರು: ನಿಮ್ಮ ಹತ್ರ ಇಷ್ಟೊಂದು ಜಮೀನು ಇಟ್ಟುಕೊಂಡು ಎಷ್ಟೊಂದು ಕಷ್ಟ ಪಡ್ತೀರಿ. ಒಂದು ಟ್ರ್ಯಾಕ್ಟರ್ ತಗೊಂಡುಬಿಡಿ. ನಮ್ಮದೇ ಟ್ರಾಕ್ಟರ್ ಶೋ ರೂಮ್ ಇದೆ. ನಿಮ್ಮ ಜಮೀನಿನ ದಾಖಲೆಗಳನ್ನು ನಮಗೆ ಕೊಡಿ ಸಾಕು. ನೀವು ಏನೂ ಕಷ್ಟಪಡಬೇಡಿ, ಸುಲಭವಾಗಿ ನಾವೇ ನಿಮ್ಮ ಜಮೀನಿನ ಮೇಲೆ ಲೋನ್ ತೆಗೆದುಕೊಂಡು ಪ್ರತಿಷ್ಠಿತ ಕಂಪನಿಯ ಟ್ರ್ಯಾಕ್ಟರ್ ಕೊಡಿಸ್ತೀವಿ ಅಂತ ರೈತರಿಗೆ ಟ್ರಾಕ್ಟರ್ ಶೋ ರೂಂ ಮಾಲೀಕನೋರ್ವ ಮಹಾನ್ ವಂಚನೆ ಮಾಡಿದ್ದು, ಇದೀಗ ಜೈಲು ಕಂಬಿ ಎಣಿಸುತ್ತಿದ್ದಾನೆ.
Advertisement
ಹೌದು. ಚಿಕ್ಕಬಳ್ಳಾಪುರ (Chikkaballapura) ಜಿಲ್ಲೆಯ ಗೌರಿಬಿದನೂರು ಮೂಲದ ಅನ್ವೇಷ್, ಗೌರಿಬಿದನೂರು ನಗರದಲ್ಲಿ ನಂಜುಡೇಶ್ವರ ಟ್ರ್ಯಾಕ್ಟರ್ ಶೋ ರೂಂ ನಡೆಸುತ್ತಿದ್ದ. ಆದರೆ ಟ್ರ್ಯಾಕ್ಟರ್ ಖರೀದಿಗೆ ಬರೋ ರೈತರ ಬಳಿ ದಾಖಲೆ ಪಡೆಯುತ್ತಿದ್ದ ಅನ್ವೇಷ್, ರೈತರ ಹೆಸರಲ್ಲಿ ಫೈನಾನ್ಸ್ ಕಂಪನಿಗಳ ಬಳಿ ಲೋನ್ ಮಾಡ್ತಿದ್ದ. ಆದರೆ ಆ ದುಡ್ಡಿಂದ ಟ್ರ್ಯಾಕ್ಟರ್ (Tractor) ಕಂಪನಿಯಿಂದ ಟ್ರ್ಯಾಕ್ಟರ್ ಖರೀದಿ ಮಾಡದೇ ಸ್ವಂತಕ್ಕೆ ಖರ್ಚು ಮಾಡಿಕೊಂಡು ಮಜಾ ಮಾಡ್ತಿದ್ದನಂತೆ. ಇದಕ್ಕೆ ಎಲ್ ಆಂಡ್ ಟಿ ಫೈನಾನ್ಸ್ ಕಂಪನಿಯ ಅನಿಲ್ ಹಾಗೂ ಶ್ರೀಮಂತ್ ಶಾಮೀಲು ಮಾಡಿಕೊಂಡು ಅವರಿಗೂ ಒಂದಷ್ಟು ದುಡ್ಡು ಕೊಟ್ಟು ಮ್ಯಾನೇಜ್ ಮಾಡ್ತಿದ್ದ. ಇತ್ತ ರೈತರು (Farmers) ಕೇಳಿದಾಗಲೆಲ್ಲ ಟ್ರ್ಯಾಕ್ಟರ್ ಬಂದಿಲ್ಲ ಬಂದಿಲ್ಲ ಅಂತ ಕಾಲ ಕಲೆಯುತ್ತಿದ್ದನಂತೆ.
Advertisement
Advertisement
ಹೀಗೆ ಗೌರಿಬಿದನೂರು (GauriBidanuru) ತಾಲೂಕಿನ ತೋಕಲಹಳ್ಳಿ ಗ್ರಾಮದ ರೈತ ಪ್ರಭಾಕರ ರೆಡ್ಡಿಗೆ, ಟ್ರಾಕ್ಟರ್ ಅವಶ್ಯಕತೆ ಇಲ್ಲದಿದ್ದರೂ, ಆತನ ಬೆನ್ನು ಬಿದ್ದ ಅನ್ವೇಷ್ ದಾಖಲೆಗಳನ್ನು ಪಡೆದು ಎಲ್ ಆಂಡ್ ಟಿ ಫೈನಾನ್ಸ್ ನಲ್ಲಿ ಬರೋಬ್ಬರಿ 7 ಲಕ್ಷ 40 ಸಾವಿರ ರೂಪಾಯಿ ಸಾಲ ಪಡೆದು ರೈತನಿಗೆ ಟ್ರಾಕ್ಟರ್‍ನೂ ನೀಡಿಲ್ಲ, ಸಾಲದ ಹಣವನ್ನೂ ನೀಡಿಲ್ಲ. ಕೊನೆಗೆ ಎಲ್ ಆಂಡ್ ಟಿ ಫೈನಾನ್ಸ್ ನವರು ರೈತನ ಮನೆಗೆ ಬಂದು ಯಾಕೆ ಟ್ರ್ಯಾಕ್ಟರ್ ಲೋನ್ ಕಟ್ಟಿಲ್ಲ ಅಂತ ಅವಾಜ್ ಹಾಕಿದಾಗ ಶೋ ರೂಮ್ ಮಾಲೀಕನ ಕಳ್ಳಾಟ ಬಯಲಾಗಿದೆ. ಇದೇ ರೀತಿ ಚಿಕ್ಕಬಳ್ಳಾಪುರ ಹಾಗೂ ಗೌರಿಬಿದನೂರಿನಲ್ಲಿ 9 ಜನ ರೈತರಿಗೆ ಮೋಸ ಮಾಡಿರುವುದು ತನಿಖೆಯಿಂದ ತಿಳಿದು ಬಂದಿದೆ. ಇದರಿಂದ ಗೌರಿಬಿದನೂರು ನಗರ ಠಾಣೆ ಪೊಲೀಸರು, ಅನ್ವೀಷ್, ಶ್ರೀಮಂತ್, ಅನಿಲಕುಮಾರ್ ನನ್ನು ಬಂಧಿಸಿ ನ್ಯಾಯಾಂಗ ಬಂಧನ (Judicial Custody) ಕ್ಕೆ ಒಪ್ಪಿಸಿದ್ದಾರೆ.
Advertisement
ರಾಯಚೂರಲ್ಲಿ ರೈತನಿಗೆ ಶಾಕ್ ಕೊಟ್ಟ ಫೈನಾನ್ಸ್ ಕಂಪನಿ: 2021ರ ಜೂನ್ ತಿಂಗಳಿನಲ್ಲಿ ರಾಯಚೂರಿನ ಲಿಂಗಸುಗೂರು ತಾಲೂಕಿನ ಕಳ್ಳಿ ಲಿಂಗಸುಗೂರು ರೈತ ಅಯ್ಯಾಳಪ್ಪ ಟ್ರ್ಯಾಕ್ಟರ್ ಖರೀದಿಸಿದ್ದರು. ಅದಕ್ಕೆ ಎರಡು ಕಂತು ಹಣ ಕೂಡ ಪಾವತಿಸಿದ್ದಾರೆ. ಆದರೆ ಮೂರನೇ ಕಂತಿನ ಹಣ ಕಟ್ಟಿಲ್ಲ ಅಂತ ಎಲ್ ಅಂಡ್ ಟಿ ಫೈನಾನ್ಸ್ ಕಂಪನಿ ರೈತನಿಗೆ ಮಾಹಿತಿಯನ್ನೂ ನೀಡದೆ ಟ್ರ್ಯಾಕ್ಟರನ್ನು ಸೀಜ್ ಮಾಡಿ ಸಿಂಧನೂರಿಗೆ ತೆಗೆದುಕೊಂಡು ಹೋಗಿದ್ದಾರೆ.
ಈ ವೇಳೆ ಮೂರನೇ ಕಂತಿನ ಹಣ 85 ಸಾವಿರ ರೂಪಾಯಿ ಹೊಂದಿಸಿಕೊಂಡು ರೈತ ಫೈನಾನ್ಸ್ ಕಂಪನಿ ಕಚೇರಿ ಹೋದ್ರೆ ನಿಮ್ಮ ಟ್ರ್ಯಾಕ್ಟರ್ ಬೇರೆಯವರಿಗೆ ಮಾರಾಟ ಮಾಡಲಾಗಿದೆ ಎಂಬ ಉತ್ತರ ನೀಡಿದ್ದಾರೆ. ಇದರಿಂದ ರೈತ ಕಂಗಾಲಾಗಿ ನ್ಯಾಯಕ್ಕಾಗಿ ಜಿಲ್ಲಾಡಳಿತದ ಮೊರೆ ಹೋಗಿದ್ದಾರೆ. ಮೊದಲೇ ಅತೀವೃಷ್ಠಿಯಿಂದ ಕಂಗಾಲಾಗಿರುವ ರೈತನಿಗೆ ಫೈನಾನ್ಸ್ ಕಂಪನಿ ಗಾಯದ ಮೇಲೆ ಬರೆ ಎಳೆದಿದೆ.