ಬೀದರ್: ಇಷ್ಟು ದಿನ ಬರದಿಂದ ಬಳಲುತ್ತಿದ್ದ ಬೀದರ್ ಜಿಲ್ಲೆಗೆ ಮಳೆರಾಯ ಆಗಮಿಸಿದ್ದು ರೈತರ ಮೊಗದಲ್ಲಿ ಸಂತಸ ಮೂಡಿಸಿದ್ದಾನೆ. ಹೀಗಾಗಿ ವರುಣನ ಆಗಮನವನ್ನು ರೈತಾಪಿ ವರ್ಗ ಪಟಾಕಿ ಸಿಡಿಸಿ, ಸಿಹಿ ಹಂಚಿ ಸಂಭ್ರಮಿಸಿದೆ.
ಮುಂಗಾರು ಪ್ರಾರಂಭವಾಗಿ 22 ದಿನಗಳು ಕಳೆಯುತ್ತಾ ಬಂದರೂ ಜಿಲ್ಲೆಗೆ ಮಳೆಯಾಗದ್ದಕ್ಕೆ ರೈತರು ಬೇಸರದಲ್ಲಿದ್ದರು. ಆದರೆ ಇಗ ಜಿಲ್ಲೆಗೆ ಕಾಲಿಟ್ಟಿರುವ ಮಳೆರಾಯ ರೈತರ ಮೊಗದಲ್ಲಿ ಖುಷಿ ತಂದಿದ್ದಾನೆ. ಮೊದಲ ಬಾರಿಗೆ ಮುಂಗಾರು ಮಳೆ ಆಗಮಿಸಿದ ಹಿನ್ನಲೆಯಲ್ಲಿ ಬೀದರ್ ಜಿಲ್ಲೆಯ ಔರಾದ್ ತಾಲೂಕಿನ ವಡಗಾಂವ್ ಗ್ರಾಮದಲ್ಲಿ ಪಟಾಕಿ ಸಿಡಿಸಿ, ಸಿಹಿ ಹಂಚಿ ರೈತರು ಸಂಭ್ರಮಾಚರಣೆ ಮಾಡಿದ್ದಾರೆ.
Advertisement
Advertisement
ಕಳೆದ ವರ್ಷವೂ ಕೂಡ ಬರಗಾಲದಿಂದ ಗಡಿ ಜಿಲ್ಲೆಯ ಜನರು ತತ್ತರಿಸಿ ಹೋಗಿದ್ದರು. ಈ ಬಾರಿ ಕೂಡ ಮಳೆರಾಯ ಎಲ್ಲಿ ಕೈಬಿಡುತ್ತಾನೋ ಎಂಬ ಆತಂಕದಲ್ಲಿದ್ದರು. ಹೊಲದಲ್ಲಿ ಬಿತ್ತನೆ ಮಾಡಲು ಕಾಯುತ್ತಿದ್ದು ರೈತರು ಈಗ ಸುರಿದ ಮಳೆಯನ್ನೇ ನಂಬಿ ಬಿತ್ತನೆ ಕಾರ್ಯಕ್ಕೆ ಮುಂದಾಗಿದ್ದಾರೆ. ಇಂದು ಕೂಡಾ ಜಿಲ್ಲೆಯಲ್ಲಿ ಜಿಟಿಜಿಟಿ ಮಳೆ ಪ್ರಾರಂಭವಾಗಿದ್ದು, ಜನ ಜೀವನ ಸ್ಪಲ್ಪ ಮಟ್ಟಿಗೆ ಅಸ್ತವ್ಯಸ್ತಗೊಂಡಿದೆ.
Advertisement
[wonderplugin_video iframe=”https://www.youtube.com/watch?v=7Z2BzrhFEKQ” lightbox=0 lightboxsize=1 lightboxwidth=960 lightboxheight=540 autoopen=0 autoopendelay=0 autoclose=0 lightboxtitle=”” lightboxgroup=”” lightboxshownavigation=0 showimage=”” lightboxoptions=”” videowidth=600 videoheight=400 keepaspectratio=1 autoplay=1 loop=1 videocss=”position:relative;display:block;background-color:#000;overflow:hidden;max-width:100%;margin:0 auto;” playbutton=”https://publictv.biskuht.com/wp-content/plugins/wonderplugin-video-embed/engine/playvideo-64-64-0.png”]