ಚಿಕ್ಕೋಡಿ: ರಣ ಭೀಕರ ಪ್ರವಾಹ ಬಂದು ಎರಡು ತಿಂಗಳು ಕಳೆದರೂ ನದಿ ತೀರದ ಸಂತ್ರಸ್ತರ ಸಂಕಷ್ಟ ಮುಂದುವರೆದಿದೆ. ರೈತರು ನಾಶವಾದ ಬೆಳೆ ತೆಗೆದು ಹೊಸ ಬೆಳೆ ಬಿತ್ತನೆಗೆ ಪರದಾಡುತ್ತಿದ್ದಾರೆ.
Advertisement
ಭೀಕರ ಪ್ರವಾಹದಿಂದ ಕಷ್ಟ ಪಟ್ಟು ಬೆಳೆದ ಬೆಳೆಗಳು ಕೊಚ್ಚಿ ಹೋಗಿ ನದಿ ತೀರದ ರೈತರು ಕಂಗಾಲಾಗಿದ್ದಾರೆ. ಈ ಪ್ರವಾಹಕ್ಕೆ ಕಬ್ಬು, ಸೊಯಾಬೀನ್, ಗೋವಿನ ಜೋಳ ಸೇರಿದಂತೆ ವಿವಿಧ ಬೆಳೆಗಳು ನಾಶವಾಗಿ ರೈತರು ಸಂಕಷ್ಟ ಅನುಭವಿಸುತ್ತಿದ್ದಾರೆ, ಆದರೂ ಸಹ ಸರ್ಕಾರ ಮಾತ್ರ ರೈತರ ಸಹಾಯಕ್ಕೆ ಇದೂವರೆಗೂ ಮುಂದಾಗಿಲ್ಲ. ತಮ್ಮ ಜಮೀನುಗಳನ್ನು ಸ್ವಚ್ಛಗೊಳಿಸಿ ಬೇರೆ ಹೊಸ ಬೆಳೆ ಬಿತ್ತನೆ ಮಾಡಲು ರೈತರು ಹಣ ಇಲ್ಲದೆ ಪರದಾಡುತ್ತಿದ್ದಾರೆ. ಇದನ್ನೂ ಓದಿ: ಮಾರ್ಷಲ್‍ನನ್ನೇ ಕಾರಿನ ಬಾನೆಟ್ ಮೇಲೆ ಎಳೆದುಕೊಂಡು ಹೋದ ಚಾಲಕ
Advertisement
Advertisement
ರೈತರಿಗೆ ಇಷ್ಟೆಲ್ಲಾ ಕಷ್ಟಗಳಿದ್ದರೂ, ಸರ್ಕಾರ ಹಣವನ್ನು ಬಿಡುಗಡೆ ಮಾಡಿಲ್ಲ. ಈ ಹಿನ್ನೆಲೆ ಪರಿಹಾರ ಸಿಗದೇ ರೈತರು ಸರ್ವೆ ಹೆಸರಿನಲ್ಲಿ ಕಾಲ ಕಳೆಯುತ್ತಿರುವ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದು, ಬೇಗ ಬೆಳೆ ಹಾನಿಗೆ ಪರಿಹಾರ ನೀಡುವಂತೆ ಆಗ್ರಹಿಸಿದ್ದಾರೆ. ಇದನ್ನೂ ಓದಿ: ತೆರಿಗೆ ವಸೂಲಿ ಮಾಡಲು ಸುಳ್ಳು ಲೆಕ್ಕ ಹೇಳಿ ದಾರಿ ತಪ್ಪಿಸ್ತಿದ್ದಾರೆ – ಸಾರ್ವಜನಿಕರ ಆಕ್ರೋಶ