ಬೆಂಗಳೂರು: ನೀರಿಗಾಗಿ ರೈತರು ಪ್ರತಿಭಟನೆ ಮಾಡಿ ಸಮಸ್ಯೆ ಸರ್ಕಾರದ ಗಮನಕ್ಕೆ ತರುತ್ತಿದ್ದಾರೆ, ಒಳ್ಳೆಯದು ಎಂದು ಸಚಿವ ಚಲುವರಾಯಸ್ವಾಮಿ (Chaluvarayswamy) ಹೇಳಿದ್ದಾರೆ.
ವಿಧಾನಸೌಧದಲ್ಲಿ (Vidhanasoudha) ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಾವೇರಿ ನೀರು (Cauvery Water) ಬಿಡುಗಡೆ ವಿಚಾರವಾಗಿ ರೈತರ ಪ್ರತಿಭಟನೆ ಬಗ್ಗೆ ಪ್ರತಿಕ್ರಿಯಿಸಿದರು. ನೀರಿಗಾಗಿ ರೈತರು ಪ್ರತಿಭಟನೆ ಮಾಡಿ ಸಮಸ್ಯೆ ಸರ್ಕಾರದ ಗಮನಕ್ಕೆ ತರುತ್ತಿದ್ದಾರೆ. ಒಳ್ಳೆಯದು ಆದರೆ ಬಿಜೆಪಿ ಪ್ರತಿಭಟನೆ ಬಗ್ಗೆ ಏನು ಹೇಹಬೇಕು ಅಂತ ಗೊತ್ತಾಗ್ತಿಲ್ಲ ಎಂದರು.
Advertisement
Advertisement
ತಮಿಳುನಾಡು (Tamilnadu) ಕಳೆದ ಎರಡು ತಿಂಗಳು ನೀರು ಬೇಕು ಅಂತ ಕೇಳ್ತಿದ್ದಾರೆ. ಅಂತಿಮವಾಗಿ 15 ಸಾವಿರ ಕ್ಯೂಸೆಕ್ ನೀರು ಬಿಡಬೇಕು ಅಂತ ಹೇಳಿದ್ರು. ಆಗದೇ ಇದ್ದಾಗ 10 ಸಾವಿರ ಕ್ಯೂಸೆಕ್ ನೀರು ಬೀಡಲಾಗಿದೆ. ಬಿಜೆಪಿ (BJP) ಸಂಸದರು ಹೈಕಮಾಂಡ್ ನಾಯಕರಿಗೆ ತಿಳುವಳಿಕೆ ಇಲ್ಲ ಅನ್ಸುತ್ತೆ.ನಾವು ತಮಿಳುನಾಡಿನ ರಾಜಕೀಯವಾಗಿ ಹೊಂದಾಣಿಕೆ ಇರಬಹುದು. ಆದರೆ ಕಾವೇರಿ ನೀರಿಗಾಗಿ ನಾವು ಹೋರಾಟ ಮಾಡುತ್ತೇವೆ. ಅವರು ಹೋರಾಟ ಮಾಡ್ತಿದ್ದಾರೆ. ಮಳೆ ಇಲ್ಲದೆ ಕಾವೇರಿ ನೀರಿನ ಮಟ್ಟ ಕಡಿಮೆ ಆಗಿದೆ. ನಾಳೆ all party meeting ಕರೆದಿದ್ದಾರೆ. ನಾಳೆ ಅಂತಿಮವಾಗಿ ಏನು ಮಾಡಬೇಕು ಅಂತ ತೀರ್ಮಾನ ಮಾಡುತ್ತೇವೆ ಎಂದು ತಿಳಿಸಿದರು.
Advertisement
Advertisement
ಜೆಡಿಎಸ್ (JDS) ಆಗ್ಲಿ, ಬಿಜೆಪಿ ಆಗ್ಲಿ ನೀರಿನ ಮೇಲೆ ರಾಜಕೀಯ ಮಾಡಬಾರದು. ತಮಿಳುನಾಡಿನ ಪರವಾಗಿ ವಾದ ಬಂದರೆ 20 ಸಾವಿರ ಕ್ಯೂಸೆಕ್ ನೀರಿನ ಬಿಡಬೇಕಿತ್ತು. ಹೀಗಾಗಿ 10 ಸಾವಿರ ಕ್ಯೂಸೆಕ್ ಅಷ್ಟೇ ನೀರು ಬಿಟ್ಟಿದ್ದು ಇವರು ಮಹಾದಾಯಿ ವಿಚಾರ ಗೋವಾ ಮಹಾರಾಷ್ಟ್ರದಲ್ಲಿ ಬಿಜೆಪಿ ಸರ್ಕಾರ ಇತ್ತಲ್ವಾ..?. ಹಾಗಾದರೆ ಮಹದಾಯಿ ಸಮಸ್ಯೆ ಯಾಕೆ ಬಗೆಹರೆದಿಲ್ಲ..? ಎಂದು ಹರಿಹಾಯ್ದಿದ್ದಾರೆ. ಇದನ್ನೂ ಓದಿ: BJPಯಲ್ಲಿ ಅನಿವಾರ್ಯವಾಗಿ ಹೊಂದಿಕೊಂಡು ಹೋಗ್ತಿದ್ದೀನಿ – ಎಸ್.ಟಿ ಸೋಮಶೇಖರ್
ಇದೇ ವೇಳೆ ನೈಸ್ ಅಕ್ರಮದ ಬಗ್ಗೆ ಹೆಚ್‍ಡಿಕೆ (HD Kumaraswamy) ಆರೋಪದ ಬಗ್ಗೆಯು ಪ್ರತಿಕ್ರಿಯಿಸಿ, ಕೃಷಿ ಇಲಾಖೆ ಭ್ರಷ್ಟಾಚಾರದ ಆರೋಪ ತನಿಖೆಯಲ್ಲಿ ಇಬ್ಬರು ಕೃಷಿ ಅಧಿಕಾರಿಗಳು ಅರೆಸ್ಟ್ ಆಗಿದ್ದಾರೆ. ಇದಕ್ಕೆ ಯಾರು ಕಾರಣ ಹಿನ್ನೆಲೆ ಏನು ಗೊತ್ತಿಲ್ಲ. ಆ ಲೆಟರ್ ನಲ್ಲಿ ಜೆಡಿಎಸ್ (JDS) ಹೆಸರಿರೋದು, ಕುಮಾರಸ್ವಾಮಿ ಹೆಸರಿರೋದು ನಿಮಗೆ ಗೊತ್ತಿದೆ. ಈ ತರದ್ದೆಲ್ಲ ಎಷ್ಟು ನಡೆಸ್ತಾರೋ ನಡೆಸಲಿ ಎಂದು ತಿರುಗೇಟು ಕೊಟ್ಟರು.
ನೈಸ್ ವಿಚಾರದಲ್ಲಿ ಅವರು ಸಿಎಂ ಆಗಿರಲಿಲ್ವಾ? ನೈಸ್ ಯೋಜನೆ ತಂದವರು ಯಾರು? ಸ್ಟಾರ್ಟ್ ಮಾಡಿದವರು ಯಾರು? ಯೋಜನೆ ಪ್ರಾರಂಭ ಮಾಡಿದವರು ಯಾರು ಎಂಬುದೂ ಕೂಡ ಚರ್ಚೆಯಾಗಬೇಕಲ್ಲ. ರಾಜ್ಯದಲ್ಲಿ ಬೇರೆ ಎಲ್ಲ ರಸ್ತೆಗಳಿವೆ, ಟೋಲ್ ವಿಷಯಗಳಿವೆ. ಅವೆಲ್ಲವನ್ನೂ ಬಿಟ್ಟು ನೈಸ್ ರೋಡ್ ಮಾತ್ರ ಯಾಕೆ ಹಿಡಿದುಕೊಂಡಿದ್ದಾರೆ. ನೈಸ್ ವಿಚಾರ ಮಾತ್ರ ಇವರಿಗೆ ಸಾರ್ವಜನಿಕ ಹಿತದೃಷ್ಟಿಯ ವಿಚಾರವಾಯ್ತಾ…?. ನಮ್ಮ ಕಾಂಗ್ರೆಸ್ ಸರ್ಕಾರ ನೈಸ್ ಪರವಾಗಿ ಇಲ್ಲ ಎಂದಿದ್ದಾರೆ.
Web Stories