ಬೆಳಗಾವಿ: ಕೃಷ್ಣಾ ನದಿಯಲ್ಲಿ ನೀರಿಲ್ಲದೆ ನಾವು ತತ್ತರಿಸಿ ಹೋಗಿದ್ದೇವೆ. ಆಗ ನಮ್ಮನ್ನು ನೋಡಲು ಬರಲಿಲ್ಲ, ಈಗ ನದಿಗೆ ಮಹಾರಾಷ್ಟ್ರ ನೀರು ಹರಿಸಿದ ಮೇಲೆ ಬಂದಿದ್ದೀರಾ ಎಂದು ಸಚಿವ ಡಿ.ಕೆ ಶಿವಕುಮಾರ್ ವಿರುದ್ಧ ರೈತರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಬೆಳಗಾವಿ ಜಿಲ್ಲೆಯ ಕಾಗವಾಡ ತಾಲೂಕಿನ ಶಿರಗುಪ್ಪಿ ಗ್ರಾಮಕ್ಕೆ ಡಿಕೆಶಿ ಅವರು ಇಂದು ಭೇಟಿಕೊಟ್ಟಿದ್ದರು. ಈ ವೇಳೆ ನೂರಾರು ಮಂದಿ ರೈತರು ಸಚಿವರ ಕಾರನ್ನು ತಡೆದು, ಅವರನ್ನು ಕಾರಿನಿಂದ ಕೆಳಗಿಳಿಸಿ ತರಾಟೆಗೆ ತೆಗೆದುಕೊಂಡರು.
ಕೃಷ್ಣಾ ನದಿ ಬತ್ತಿ ಮೂರು ತಿಂಗಳಾಗಿತ್ತು. ನದಿ ತೀರದ ಜನರು, ಜಿಲ್ಲೆಯ ರೈತರು ನೀರಿಲ್ಲದೆ ಪರದಾಡುತ್ತಿದ್ದರು. ಆಗ ನಾವು ಹೇಗಿದ್ದೀವಿ ಎಂದು ನೋಡೋಕೆ ಬರಲಿಲ್ಲ. ಈಗ ಮಹಾರಾಷ್ಟ್ರ ತನ್ನ ಪಾಡಿಗೆ ತಾನು ಕೃಷ್ಣೆಗೆ ನೀರು ಬಿಡುಗಡೆ ಮಾಡಿದೆ. ಈಗ ನದಿಯಲ್ಲಿ ನೀರು ಬಂದ ಬಳಿಕ ಭೇಟಿ ನೀಡುತ್ತಿದ್ದೀರಿ ಎಂದು ಕ್ಲಾಸ್ ತೆಗೆದುಕೊಂಡರು.
ಕಾವೇರಿ ನದಿ ವಿಚಾರದಲ್ಲೊಂದು ನೀತಿ ಕೃಷ್ಣಾ ನದಿಗೆ ಇನ್ನೊಂದು ನೀತಿ. ಸರ್ಕಾರ ಕೃಷ್ಣಾ ನದಿ ವಿಚಾರದಲ್ಲಿ ತಾರತಮ್ಯ ಮಾಡುತ್ತಿದೆ. ನಮ್ಮನ್ನು ಕಡೆಗಣಿಸಲಾಗುತ್ತಿದೆ ಎಂದು ರೈತರು ಹೇಳಿ ಡಿಕೆಶಿಗೆ ಬಿಸಿ ಮುಟ್ಟಿಸಿದರು.
ಮಹಾರಾಷ್ಟ್ರದ ರಾಜಾಪೂರ ಬ್ಯಾರೇಜ್ ಮೂಲಕ ಅಲ್ಲಿನ ಸರಕಾರ 1 ಸಾವಿರ ಕ್ಯೂಸೆಕ್ ನೀರನ್ನು ಕರ್ನಾಟಕಕ್ಕೆ ಹರಿ ಬಿಡುತ್ತಿದೆ. ಇದರಿಂದ ನೀರಿಲ್ಲದೆ ತತ್ತರಿಸಿ ಹೋಗಿದ್ದ ಕೃಷ್ಣಾ ನದಿ ತೀರದ ಜನ ನಿರಾಳರಾಗಿದ್ದಾರೆ. ಚಿಕ್ಕೋಡಿ, ಅಥಣಿ ಹಾಗೂ ರಾಯಭಾಗ ತಾಲೂಕುಗಳ ರೈತರು ಹಾಗೂ ಸಾರ್ವಜನಿಕರು ಕುಡಿಯುವ ನೀರು ಯೋಜನೆ ಸೇರಿದಂತೆ ಕೃಷಿಗಾಗಿ ನೀರು ಬಂದಿರುವ ಕಾರಣ ಸಂತಸ ವ್ಯಕ್ತಪಡಿಸಿದ್ದಾರೆ.
ಈಗಾಗಲೇ ನೀರು ಅಥಣಿ ತಾಲೂಕಿನವರೆಗೂ ಹರಿದ ಕಾರಣ ಬತ್ತಿ ಹೋಗಿದ್ದ ಕೃಷ್ಣಾ ನದಿಗೆ ಮತ್ತೆ ಜೀವಕಳೆ ಬಂದಂತಾಗಿದೆ. ಇತ್ತ ಯಾದಗಿರಿಯಲ್ಲಿ ಗ್ರಾಮ ವಾಸ್ತವ್ಯ ಮುಗಿಸಿರುವ ಸಿಎಂ ಅವರ ಕಲಬುರಗಿ ಪ್ರಯಾಣ ಕ್ಯಾನ್ಸಲ್ ಆಗಿದೆ. ಯಾಕಂದರೆ ಭಾರೀ ಮಳೆಯಿಂದಾಗಿ ಕಲಬುರಗಿಯ ಅಫಜಲಪುರ ತಾಲೂಕಿನ ಹೆರೂರು(ಬಿ) ಗ್ರಾಮದಲ್ಲಿನ ಸಿಎಂ ಅವರ ಹಳ್ಳಿವಾಸ ರದ್ದಾಗಿದೆ.
[wonderplugin_video iframe=”https://www.youtube.com/watch?v=7Z2BzrhFEKQ” lightbox=0 lightboxsize=1 lightboxwidth=960 lightboxheight=540 autoopen=0 autoopendelay=0 autoclose=0 lightboxtitle=”” lightboxgroup=”” lightboxshownavigation=0 showimage=”” lightboxoptions=”” videowidth=600 videoheight=400 keepaspectratio=1 autoplay=1 loop=1 videocss=”position:relative;display:block;background-color:#000;overflow:hidden;max-width:100%;margin:0 auto;” playbutton=”https://publictv.biskuht.com/wp-content/plugins/wonderplugin-video-embed/engine/playvideo-64-64-0.png”]