ಬಾಗಲಕೋಟೆ: ಕೃಷಿ ನಂಬಿ ಬದುಕು ಕಟ್ಟಿಕೊಂಡವರು ಹಲವು ಮಂದಿ. ಅದೇ ರೀತಿ, ಬಾಗಲಕೋಟೆಯಿಂದ ಬಂದಿರುವ ಇಂದಿನ ನಮ್ಮ ಪಬ್ಲಿಕ್ ಹೀರೋ ಕೂಡ ಸಮಗ್ರ ಬೇಸಾಯ ಪದ್ಧತಿಯಲ್ಲಿ ಮಾದರಿ ರೈತಯಾಗಿದ್ದಾರೆ.
ಹೌದು. ಬಾಗಲಕೋಟೆಯ ಬಾದಾಮಿ ತಾಲೂಕಿನ ಆಡಗಲ್ ಗ್ರಾಮದಲ್ಲಿ ಹಚ್ಚ ಹಸಿರನ್ನ ಹೊದ್ದಿರುವ ರೈತ ಯಲ್ಲನಗೌಡ ಪಾಟೀಲ್ ಅವರ ತೋಟದಲ್ಲಿ ಸುಗಂಧ, ಸೂಜಿಮಲ್ಲಿಗೆ, ದುಂಡು ಮಲ್ಲಿಗೆ ಮತ್ತು ಚೆಂಡು ಹೂಗಳು ಪೈಪೋಟಿಗೆ ಬಿದ್ದಂತೆ ಬೆಳೀತಿವೆ.
Advertisement
Advertisement
ಒಂದು ಎಕರೆ ಭೂಮಿಯಲ್ಲಿ ಸಮಗ್ರ ಕೃಷಿ ಪದ್ಧತಿ ಅಳವಡಿಸಿಕೊಂಡು ತಿಂಗಳಿಗೆ ಎರಡು ಲಕ್ಷದವರೆಗೆ ಲಾಭ ಪಡೆಯುತ್ತಿದ್ದಾರೆ. ಮೊದಮೊದಲು ಕೇವಲ ಸಾಂಪ್ರದಾಯಿಕ ಬೆಳೆಗಳಾದ ಜೋಳ, ಸಜ್ಜೆ, ಗೋವಿನ ಜೋಳ ಬೆಳೆಯುತ್ತಿದ್ದರು. ಆದ್ರೆ, ಆ ಬಳಿಕ ಕೈಸುಟ್ಟುಕೊಂಡ ಯಲ್ಲನಗೌಡ, ಮೂರು ವರ್ಷದಿಂದ ಸಮಗ್ರ ಕೃಷಿ ಆಧಾರಿತ ಅಂತರ ಬೇಸಾಯ ಪದ್ಧತಿ ಹೂ ಕೃಷಿ ಮಾಡಿ ಹಸನ್ಮುಖಿಯಾಗಿದ್ದಾರೆ.
Advertisement
ಬೋರ್ ವೆಲ್‍ನಲ್ಲಿ ಸಿಕ್ಕಿರೋ ಒಂದೂವರೆ ಇಂಚು ನೀರನ್ನ ಸಮರ್ಪಕವಾಗಿ ಬಳಸಿಕೊಂಡಿದ್ದಾರೆ. ಯಲ್ಲನಗೌಡ ಅವರ ಕೃಷಿ ಪದ್ಧತಿಯಿಂದ ಆಕರ್ಷಿತರಾಗಿರೋ ಜಿಲ್ಲೆಯ ಜನ ಮಾಹಿತಿ ಪಡೆದುಕೊಂಡು ಹೋಗುತ್ತಿದ್ದಾರೆ. ಹೂವಿನ ಜೊತೆಗೆ ನೂರು ತೆಂಗಿನ ಗಿಡ, 80 ನಿಂಬೆ ಹಾಗೂ 70 ಮಾವಿನ ಗಿಡಗಳನ್ನ ನೆಟ್ಟು ತೋಟವನ್ನು ಸಂಪೂರ್ಣ ಹಸಿರಾಗಿಸಿದ್ದಾರೆ.