ಕೋಲಾರ: ಒಂಟಿ ಆನೆ ದಾಳಿಗೆ (Elephant Attack) ರೈತ ಮಹಿಳೆಯೊಬ್ಬರು ಬಲಿಯಾದ ಘಟನೆ ಕೋಲಾರ (Kolar) ಜಿಲ್ಲೆಯ ಬಂಗಾರಪೇಟೆ (Bangarpet) ತಾಲೂಕಿನ ಸಾಕರಸನಹಳ್ಳಿ ಬಳಿ ನಡೆದಿದೆ.
ಮಂಜುಳ (44) ಆನೆ ದಾಳಿಯಿಂದ ಮೃತಪಟ್ಟ ಮಹಿಳೆ. ಸಾಕರಸನಹಳ್ಳಿ ಗ್ರಾಮದ ಹೊರ ವಲಯದ ತೋಟದ ಮನೆ ಬಳಿ ಘಟನೆ ನಡೆದಿದೆ. ಮಂಜುಳ ಮೂತ್ರ ವಿಸರ್ಜನೆಗೆಂದು ಮುಂಜಾನೆ 4 ಗಂಟೆ ಸುಮಾರಿಗೆ ಮನೆಯಿಂದ ಹೊರಹೋದ ವೇಳೆ ಒಂಟಿ ಸಲಗ ದಾಳಿ ನಡೆಸಿದೆ. ಇದನ್ನೂ ಓದಿ: ಅಭಿವೃದ್ಧಿಯಲ್ಲಿ ಭಾರತವನ್ನು ಪಾಕಿಸ್ತಾನ ಸೋಲಿಸದಿದ್ದರೆ ನನ್ನ ಹೆಸರು ಶೆಹಬಾಜ್ ಷರೀಫ್ ಅಲ್ಲ: ಪಾಕ್ ಪ್ರಧಾನಿ ಸವಾಲು
ಘಟನೆಯಿಂದ ಸಾಕರಸನಹಳ್ಳಿ ಸೇರಿದಂತೆ ಕಾಡಂಚಿನ ಗ್ರಾಮಗಳ ರೈತರಲ್ಲಿ ಆತಂಕ ಮನೆಮಾಡಿದೆ. ಸುತ್ತಮುತ್ತಲಿನ ಗ್ರಾಮಸ್ಥರು ಒಂಟಿ ಸಲಗ ದಾಳಿಯ ಭೀತಿಯಲ್ಲಿದ್ದಾರೆ. ಸ್ಥಳಕ್ಕೆ ಅರಣ್ಯ ಇಲಾಖೆ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಕಾಮಸಮುದ್ರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ಸಂಭವಿಸಿದೆ. ಇದನ್ನೂ ಓದಿ: ಶಿರೂರು ಗುಡ್ಡ ಕುಸಿತ ದುರಂತ: ಐಆರ್‌ಬಿ ಕಂಪನಿ ವಿರುದ್ಧ ಪ್ರಕರಣ ದಾಖಲಿಸಲು ನ್ಯಾಯಾಲಯ ಆದೇಶ