ಬೀದರ್: ಮಳೆ ನಿಂತರು ರೈತರ ಜಮೀನಿನಲ್ಲಿ ನೀರು ನಿಂತ್ತಿದ್ದು, ಸೋಯಾ ಬೆಳೆ ಕಳೆದುಕೊಂಡ ರೈತ ಹಾಡಿನ ಮೂಲಕ ತನ್ನ ನೋವು ವ್ಯಕ್ತಪಡಿಸಿದ ವೀಡಿಯೋ ಈಗಾ ವೈರಲ್ ಆಗಿದೆ.
Advertisement
ಸೋಯಾ ಬೆಳೆದಿದ್ದ ಬೆಳೆ ಕೊಳೆತು ಹೋಗಿರುವ ಜಮೀನಿನಲ್ಲಿ ನಿಂತ ರೈತ ಹಾಡು ಹಾಡುತ್ತಾ ತನ್ನ ಅಳಲು ತೋಡಿಕೊಂಡಿದ್ದಾರೆ. ಬೀದರ್ ಜಿಲ್ಲೆಯ ಭಾಲ್ಕಿ ತಾಲೂಕಿನ ಕುಂಟೆಸಿರ್ಸಿ ಗ್ರಾಮದ ರೈತರ ಕಿರಣ್ ಖಂಡ್ರೆ ವೀಡಿಯೋ ಮಾಡಿದ್ದು, ರೈತರ ಗೋಳನ್ನು ಈ ವೀಡಿಯೋದಲ್ಲಿ ಅನಾವರಣಗೊಳಿಸಿದ್ದಾರೆ. ಇದನ್ನೂ ಓದಿ: ಸೋನಿಯಾ ಗಾಂಧಿ ನಾಯಕತ್ವದಲ್ಲಿ ಸಂಪೂರ್ಣ ನಂಬಿಕೆ ಇದೆ: ಸಿಧು
Advertisement
Advertisement
ರೈತರ ಗೋಳು ಕೇಳೋರು ಯಾರಣ್ಣ, ದೇಶಕ್ಕೆ ಅನ್ನ ಹಾಕುವರು ನಮ್ಮ ರೈತರು ಎಂದು ಹೇಳೋರು ನಮ್ಮ ಪ್ರಧಾನಿ ಮೋದಿಯಣ್ಣ, ರಾಜಕೀಯ ನಾಯಕರು ತಮ್ಮ ಡೊಂಬರಾಟ ಮಾಡಿ ಹೋಗುವರಣ್ಣ ಎಂದು ಹಾಡು ಹಾಡುವ ಮೂಲಕ ಜನಪ್ರತಿನಿಧಿಗಳ ವಿರುದ್ಧ ರೈತ ಹಿಡಿಶಾಪ ಹಾಕಿದ್ದಾರೆ. ಈಗಾಗಲೇ ಮಹಾ ಮಳೆ ಹಾಗೂ ನೆರೆಗೆ ಲಕ್ಷಾಂತರ ಎಕರೆ ಬೆಳೆ ಕಳೆದುಕೊಂಡು ಜಿಲ್ಲೆಯ ರೈತರು ಸಂಕಷ್ಟಕ್ಕೆ ಸಿಲುಕಿದ್ದು, ಪರಿಹಾರಕ್ಕಾಗಿ ಚಾತಕ ಪಕ್ಷಿಯಂತೆ ಕಾಯುತ್ತಿದ್ದಾರೆ. ಇದನ್ನೂ ಓದಿ: ಬಿಜೆಪಿ ಶಾಸಕನ ವಾಹನದ ಮೇಲೆ ಬಾಂಬ್ ಎಸೆಯಲೆತ್ನಿಸಿದ ಐವರ ಬಂಧನ