ಚಿಕ್ಕಬಳ್ಳಾಪುರ: ಬೆಂಗಳೂರು ಗ್ರಾಮಾಂತರ (Bengaluru Rural) ಜಿಲ್ಲೆಯ ದೇವನಹಳ್ಳಿ ತಾಲೂಕಿನ ಚನ್ನರಾಯಪಟ್ಟಣ ಹೋಬಳಿಯ 13 ಹಳ್ಳಿಗಳಲ್ಲಿ 1,777 ಎಕೆರೆ ಭೂಸ್ವಾಧೀನಕ್ಕೆ ಕೆಐಎಡಿಬಿ ಮುಂದಾಗಿದ್ದು, ಸರ್ಕಾರದ ಕ್ರಮ ಖಂಡಿಸಿ ಈ ಭಾಗದ ರೈತರು (Farmers) ತಮ್ಮ ಜಮೀನು ಕೊಡೋದಿಲ್ಲ ಅಂತ ನಿರಂತರ 4 ವರ್ಷಗಳಿದ ಅನಿರ್ಧಾಷ್ಟವಧಿ ಧರಣಿ ನಡೆಸುತ್ತಿದ್ದಾರೆ.
ಇಂದು ಸಹ ಬೆಂಗಳೂರು ಗ್ರಾಮಾಂತರ ಜಿಲ್ಲಾ ಉಸ್ತುವಾರಿ ಸಚಿವ ಹಾಗೂ ದೇವನಹಳ್ಳಿ ಶಾಸಕ ಕೆ.ಹೆಚ್ ಮುನಿಯಪ್ಪ (KH Muniyappa) ನಿವಾಸಕ್ಕೆ ಮುತ್ತಿಗೆ ಹಾಕಲು ತೀರ್ಮಾನ ಮಾಡಿದ್ರು. ಅಂತೆಯೇ ಎರಡು ಬಸ್‌ಗಳ ಮೂಲಕ ಬೆಂಗಳೂರಿಗೆ ಹೊರಟಿದ್ದ ರೈತರ ಬಸ್‍ನ್ನ ಪೊಲೀಸರು ತಡೆಯೊಡ್ಡಿದ್ದರು. ಇದ್ರಿಂದ ರೈತರು ಹಾಗೂ ಪೊಲೀಸರು ನಡುವೆ ವಾಗ್ವಾದ ಮಾತಿನ ಚಕಮಕಿ ನಡೆದಿದೆ. ಇದನ್ನೂ ಓದಿ: ಬಾಂಬ್ ದಾಳಿಗೂ ಜಗ್ಗಲ್ಲ – ಮುಂಬೈ ದಾಳಿಕೋರನನ್ನ ಕರೆತರಲು ಸಿದ್ಧವಾಯ್ತು NIA ಬುಲೆಟ್ ಪ್ರೂಫ್ ಕಾರು
ಇದಾದ ನಂತರ ಧರಣಿ ನಿರತ ರೈತರು ನಮಗೆ ಸಾಯೋದಕ್ಕಾದರೂ ಬಿಡಿ ಅಂತ ಊಟದಲ್ಲಿ ಕ್ರೀಮಿನಶಾಶಕ ಬೆರೆಸಲು ಮುಂದಾಗಿದ್ದು ಈ ವೇಳೆ ಕ್ರೀಮಿನಾಶಕ ಬಾಟಲಿಯನ್ನ ಪೊಲೀಸರು ಕಸಿದುಕೊಳ್ಳುವ ಪ್ರಯತ್ನ ಮಾಡಿ ತಳ್ಳಾಟ ನೂಕಾಟ ನಡೆದಿದೆ. ಇದನ್ನೂ ಓದಿ: ದಾವಣಗೆರೆ | ಕೊಕ್ಕನೂರು ಆಂಜನೇಯ ಸ್ವಾಮಿಗೆ ದುಡ್ಡಿನ ಪಲ್ಲಕ್ಕಿ ಉತ್ಸವ – 12 ಲಕ್ಷ ರೂ. ನಗದಲ್ಲಿ ಅಲಂಕಾರ
ಈ ವೇಳೆ ರೈತ ವೆಂಕಟೇಶ್ ಎಂಬಾತ ಕ್ರೀಮಿನಾಶಕ ಸೇವಿಸಿ ಆಸ್ವಸ್ಥಗೊಂಡಿದ್ದು ಪೊಲೀಸರು ಅಸ್ವಸ್ಥ ರೈತನನ್ನ ದೇವನಹಳ್ಳಿಯ ಆಸ್ಪತ್ರೆಗೆ ದಾಖಲಿಸಿದ್ದಾರೆ. ಘಟನೆ ನಂತರ ಧರಣಿ ನಿರತ ಸ್ಥಳದಲ್ಲಿ ಬಿಗುವಿನ ವಾತಾವರಣ ನಿರ್ಮಾಣ ಆಗಿದೆ. ಇದನ್ನೂ ಓದಿ: PWDಯಲ್ಲಿ ಸತೀಶ್ ಕುಟುಂಬಸ್ಥರ ದರ್ಬಾರ್, ನೀರಾವರಿಯಲ್ಲಿ ಬೋಸರಾಜು ಮಗ ಹಸ್ತಕ್ಷೇಪ – ಸಿಡಿದ ಗುತ್ತಿಗೆದಾರರ ಸಂಘ