ಬೀದರ್: ಮಹಾರಾಷ್ಟ್ರದ ಧನ್ನೆಗಾಂವ್ ಜಲಾಶಯದಿಂದ ಅಪಾರ ಪ್ರಮಾಣದ ನೀರು ಮಾಂಜ್ರಾನದಿಗೆ ಬಿಡುಗಡೆ ಮಾಡಿದ ಹಿನ್ನೆಲೆ ಮಾಂಜ್ರಾನದಿ ದಡದಲ್ಲಿರುವ ರೈತರ ಜಮೀನುಗಳಿಗೆ ನೀರು ನುಗ್ಗಿ ಅಪಾರ ಪ್ರಮಾಣದ ಬೆಳೆ ಹಾನಿಯಾಗಿದೆ.
Advertisement
ಬೆಳೆಹಾನಿ ಬಗ್ಗೆ ಗಡಿ ಜಿಲ್ಲೆ ಬೀದರ್ ನ ರೈತರು ವೀಡಿಯೋ ಮಾಡಿ ಅಳಲು ತೋಡಿಕೊಂಡ ವೀಡಿಯೋಗಳು ಸೋಶಿಯಲ್ ಮೀಡಿಯಾದಲ್ಲಿ ಪುಲ್ ವೈರಲ್ ಆಗಿವೆ. ಕಮಲನಗರ ತಾಲೂಕಿನ ಸೋನಾಳ ಗ್ರಾಮದ ರೈತರ ಸೋಯಾಬೀನ್ ಬೆಳೆಗೆ ನೀರು ನುಗ್ಗಿದ್ದು, ಜಲಾವೃತವಾದ ಬೆಳೆ ಮಧ್ಯೆ ನಿಂತು ರೈತನೋರ್ವ ಮರಾಠಿ ಭಾಷೆಯಲ್ಲಿ, ಸಾಲ ಮಾಡಿಕೊಂಡ ರೈತ ಬದುಕುವುದು ಹೇಗೆ? ಎಂದು ಹಾಡು ಹಾಡಿದ್ದಾರೆ. ಅವರು ಹಾಡಿದ ವಿಡಿಯೋವನ್ನು ಸೋಶಿಯಲ್ ಮೀಡಿಯಾದಲ್ಲಿ ಹರಿ ಬಿಡುವ ಮೂಲಕ ರೈತ ನೋವು ತೋಡಿಕೊಂಡಿಕೊಂಡಿದ್ದಾರೆ. ಇದನ್ನೂ ಓದಿ: ಬೀದಿ ಹುಡುಗನ ಡ್ಯಾನ್ಸ್ ಗೆ ವಿಸ್ಮಯಗೊಂಡ ನೆಟ್ಟಿಗರು – ವೀಡಿಯೋ ವೈರಲ್
Advertisement
Advertisement
ಭಾಲ್ಕಿ ತಾಲೂಕಿನ ಲಖನಗಾಂವ್ ಹೋಬಳಿ ವ್ಯಾಪ್ತಿಯ ಸೋಮಪುರ ಗ್ರಾಮದ ಇನ್ನೊಬ್ಬ ರೈತ ಉತ್ತಮ ಬಿರಾದರ್ ಕೂಡಾ ವೀಡಿಯೋ ಮಾಡಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಈ ರೈತನ ಎಂಟು ಎಕರೆ ಸೋಯಾಬೀನ್ ಬೆಳೆ ಸಹ ನೀರು ಪಾಲಾಗಿದ್ದು, ಬೆಳೆಗೆ ಪರಿಹಾರ ನೀಡುವಂತೆ ಅಧಿಕಾರಿಗಳು, ಜನಪ್ರತಿನಿಧಿಗಳಿಗೆ ಮನವಿ ಮಾಡಿದರೂ, ಯಾರೊಬ್ಬರು ಸ್ಪಂದಿಸುತ್ತಿಲ್ಲ ಎಂದಿದ್ದಾರೆ. ಇದನ್ನೂ ಓದಿ: ಸುಳ್ವಾಡಿ ವಿಷ ಪ್ರಸಾದ ದುರಂತ ಪ್ರಕರಣ – ಜಾಮೀನು ಅರ್ಜಿ ಸಲ್ಲಿಸಿದ ಎರಡನೇ ಆರೋಪಿ ಅಂಬಿಕಾ
Advertisement
ರೈತರ ಸಂಕಷ್ಟ ಪ್ರಧಾನಿ ನೇರಂದ್ರ ಮೋದಿ ತನಕ ಹೋಗಲಿ ಎಂದು ವೀಡಿಯೋ ಮಾಡಿ ಸೋಶಿಯಲ್ ಮೀಡಿಯಾದಲ್ಲಿ ಹರಿ ಬಿಟ್ಟಿದ್ದಾರೆ.