ರಾಯಚೂರು: ಜಿಲ್ಲೆಯ ದೇವದುರ್ಗ ತಾಲೂಕಿನ ಅರಕೇರಾದಲ್ಲಿ ಟೊಮ್ಯಾಟೊ ಮಾರಾಟ ಮಾಡಲು ಸಂತೆಗೆ ಬಂದಿದ್ದ ರೈತನೋರ್ವ ಬೆಲೆ ಕುಸಿತಕ್ಕೆ ಬೇಸತ್ತು ಪುಕ್ಕಟ್ಟೆಯಾಗಿ ನೀಡಿ ಬರಿಗೈಲೆ ಊರಿಗೆ ಮರಳಿದ್ದಾರೆ.
ದಿನೇ ದಿನೇ ಪಾತಾಳಕ್ಕೆ ಕುಸಿಯುತ್ತಿರುವ ಟೊಮ್ಯಾಟೊ ಬೆಲೆ ರೈತರನ್ನ ಕಂಗೆಡುವಂತೆ ಮಾಡಿದೆ. ಸಾವಿರಾರು ರೂಪಾಯಿ ಖರ್ಚು ಮಾಡಿ ಬೆಳೆದ ಬೆಳೆಗೆ ಮಾರುಕಟ್ಟೆಯಲ್ಲಿ ಬೆಲೆಯಿಲ್ಲದೆ ರೈತರು ಸಾರ್ವಜನಿಕರಿಗೆ ಉಚಿತವಾಗಿ ಟೊಮ್ಯಾಟೊ ನೀಡುತ್ತಿದ್ದಾರೆ.
Advertisement
Advertisement
ಟೊಮ್ಯಾಟೊ ಬೆಲೆ ಮಾರುಕಟ್ಟೆಯಲ್ಲಿ ಕೆಜಿಗೆ ನಾಲ್ಕರಿಂದ ಐದು ರೂಪಾಯಿ ಇದೆ. ಆದ್ರೆ ವ್ಯಾಪಾರಿಗಳು ರೈತರಿಂದ ಇನ್ನೂ ಕನಿಷ್ಠ ಬೆಲೆಗೆ ಟೊಮ್ಯಾಟೊ ಖರೀದಿಸುತ್ತಿದ್ದಾರೆ. ಒಂದು ಕ್ಯಾನ್ ಗೆ ಐವತ್ತು ರೂಪಾಯಿಯೂ ಸಿಗದೆ ರೈತರು ನಷ್ಟಕ್ಕೊಳಗಾಗುತ್ತಿದ್ದಾರೆ. ಮಾರುಕಟ್ಟೆಯಲ್ಲಿ ಬೆಲೆ ಸಿಗದ್ದಕ್ಕೆ ಕೆಲ ರೈತರು ಉಚಿತವಾಗಿಯೇ ಟೊಮ್ಯಾಟೊ ಹಂಚಿ ಹೋಗುತ್ತಿದ್ದಾರೆ. ಮಾರುಕಟ್ಟೆಗೆ ಹೆಚ್ಚು ಪ್ರಮಾಣದ ಟೊಮ್ಯಾಟೋ ಬರುತ್ತಿರುವುದರಿಂದ ಬೆಲೆ ಕುಸಿಯುತ್ತಲೇ ಇದೆ. ಇನ್ನೂ ಎರಡು ತಿಂಗಳವರೆಗೆ ಇದೇ ಪರಿಸ್ಥಿತಿ ಮುದುವರೆಯುವ ಸಾಧ್ಯತೆಯಿದೆ.