ಬೆಳಗಾವಿ: ಇಂದಿನ ಕಾಲದಲ್ಲಿ ರೈತರು ತಾವು ಸಾಕಿದ, ತಮ್ಮ ಗದ್ದೆಗಳಲ್ಲಿ ಉಳುಮೆ ಮಾಡಿದ ಹಸು, ಎತ್ತು, ಹೋರಿಗಳು ಅನಾರೋಗ್ಯಕ್ಕೆ ಒಳಗಾದಾಗ ಕಸಾಯಿಖಾನೆಗೆ ಒಪ್ಪಿಸಿ ಕೈ ತೊಳೆದುಕೊಳ್ಳುತ್ತಾರೆ. ಆದರೆ ಇಲ್ಲೊಬ್ಬರು ರೈತ ತಮ್ಮ ಎತ್ತಿಗೆ ಕ್ಯಾನ್ಸರ್ ಕಾಯಿಲೆ ಬಂದ್ರೂ ಸಹ ಅದನ್ನ ತನ್ನ ಮಗುವಿನಂತೆ ಜೋಪಾನ ಮಾಡುತ್ತಿದ್ದಾರೆ.
ಹೌದು. ಎಲ್ಲ ದನಕರುಗಳ ಹಾಗೆ ಕೊಟ್ಟಿಗೆಯಲ್ಲಿ ಅಸಹಾಯಕ ಸ್ಥಿತಿಯಲ್ಲಿರೋ ಈ ಎತ್ತುವಿನ ಹೆಸರು ರಾಜ. ಕಳೆದ 18 ವರ್ಷಗಳ ಹಿಂದೆ ಯಾವುದೋ ಒಂದು ಬೇರೆ ಸ್ಥಳದಿಂದ ಬೆಳಗಾವಿ ಜಿಲ್ಲೆಯ ಹುಕ್ಕೇರಿ ತಾಲೂಕಿನ ನಿಡಸೋಸಿ ಗ್ರಾಮಕ್ಕೆ ಖರೀದಿಸಿದ ಬಳಿಕ ಮಾಲೀಕ ದುಂಡಪ್ಪನ 3 ಎಕರೆ ಗದ್ದೆಯನ್ನು ಉತ್ತಿ ಬಿತ್ತಲು ಸಹಕಾರಿಯಾಗಿದೆ.
ಕೇವಲ ಕೃಷಿ ಕಾರ್ಯವನ್ನೆ ಮೆಚ್ಚಿಕೊಂಡಿದ್ದ ಮಾಲೀಕನ ಬಡತನದ ಮತ್ತು ಕಷ್ಟದ ಕಾಲದಲ್ಲಿ ಕೂಡ ದುಡಿದು ಸಹಕಾರಿಯಾಗಿದೆ. ಆದ್ರೆ ಕಳೆದ 6 ತಿಂಗಳಿನಿಂದ ಈ ಎತ್ತು ಕೊಂಬು ಕ್ಯಾನ್ಸರ್‍ನಿಂದ ಬಳಲುತ್ತಿದೆ. ಆದ್ರೆ ಮಾಲೀಕ ಬೇರೆ ರೈತರ ಹಾಗೆ ಕಟುಕರಿಗೆ ಕೊಟ್ಚು ಕೈ ತೊಳೆದುಕೊಂಡಿಲ್ಲ. ಹೊರತಾಗಿ ತಮ್ಮ ಮಗನ ಹಾಗೆ ಆರೈಕೆ ಮಾಡುತ್ತಿದ್ದಾರೆ.
ಸದ್ಯ ರೈತ ಎತ್ತುವಿಗೆ ಆಪರೇಷನ್ ಕೂಡ ಮಾಡಿಸಿದ್ದಾರೆ. ಬಾಯಿ ನೋವಾಗಿ ಮೇವು ತಿನ್ನಲು ಸಾಧ್ಯವಾಗದಂತಹ ಸಂದರ್ಭದಲ್ಲಿ ಸ್ವತಃ ಬಾಯಿಗೆ ಮೇವಿಟ್ಟು ಸಲಹುತ್ತಿದ್ದಾರೆ. ನಿತ್ಯ 2 ಬಾರಿ ಸ್ನಾನ ಮಾಡಿಸಿ ಗಾಯಕ್ಕೆ ಔಷಧಿ ಹಚ್ಚುತ್ತಿದ್ದಾರೆ. ಕ್ಯಾನ್ಸರ್ ಬಂದ ಬಳಿಕ ಬೇರೆ ಎರಡು ಎತ್ತುಗಳನ್ನು ಸಹ ತಂದಿದ್ದರು. ಆದ್ರೆ ಈ ಎತ್ತುವಿನ ಆರೈಕೆಗೆ ತೊಂದರೆ ಆಗಬಾರದು ಅಂತ ಆ ಎತ್ತುಗಳನ್ನು ಸಹ ಮಾರಿದ್ರೂ. ಒಟ್ಟಿನಲ್ಲಿ ಮಾಲೀಕನ ಈ ಮಹಾನ್ ಕಾರ್ಯವನ್ನು ಸಮಾಜದ ಪ್ರತಿಯೊಬ್ಬರು ಶ್ಲಾಘಿಸುತ್ತಿದ್ದಾರೆ.