ಚಿಕ್ಕಬಳ್ಳಾಪುರ: ಸರ್ಕಾರಿ ಜಾಗದಲ್ಲಿ ರಸ್ತೆ ಮಾಡಲು ಮುಂದಾದ ಕ್ರಷರ್ ಮಾಲೀಕ ಹಾಗೂ ಸ್ಥಳೀಯ ರೈತರ ನಡುವೆ ಗಲಾಟೆ ನಡೆದಿದೆ. ಈ ವೇಳೆ ಕ್ರಷರ್ ಮಾಲೀಕ ರೈತರೊಬ್ಬರ (Farmer) ಕಾಲಿಗೆ ಗುಂಡು ಹಾರಿಸಿರುವ ಘಟನೆ ಚಿಕ್ಕಬಳ್ಳಾಪುರ (Chikkaballapura) ಜಿಲ್ಲೆಯ ಮಂಚೇನಹಳ್ಳಿ ಗ್ರಾಮದಲ್ಲಿ ನಡೆದಿದೆ.
ಮಾಜಿ ವಿಧಾನಪರಿಷತ್ ಸದಸ್ಯ ವೈ.ಎ.ನಾರಾಯಣಸ್ವಾಮಿ ಸಂಬಂಧಿ ಸಕಲೇಶ್ ಕುಮಾರ್ ಎಂಬಾತ ಮಂಚೇನಹಳ್ಳಿ ಗ್ರಾಮದ ಚಿಕನ್ ರವಿ ಅಲಿಯಾಸ್ ಜಿಮ್ ರವಿ ಎಂಬ ರೈತರೊಬ್ಬರ ಮೇಲೆ ಗುಂಡು ಹಾರಿಸಿದ್ದಾನೆ. ಇದನ್ನೂ ಓದಿ: ಕನ್ನಡಿಗರನ್ನು ಸುರಕ್ಷಿತವಾಗಿ ಕರೆತರಲು ವಿಶೇಷ ವಿಮಾನ – ಪ್ರಹ್ಲಾದ್ ಜೋಶಿ
ಸಕಲೇಶ್ ಕುಮಾರ್‌ಗೆ ಕೋಟಗಾನ ಗುಟ್ಟ ಎಂಬ ಬೆಟ್ಟದಲ್ಲಿ ಕ್ರಷರ್ ಮಾಡಲು ಮಂಜೂರಾತಿ ಸಿಕ್ಕಿತ್ತು. ಆದರೆ ಬೆಟ್ಟಕ್ಕೆ ತೆರಳಲು ದಾಳಿ ಇರಲಿಲ್ಲ. ಹೀಗಾಗಿ ಸಕಲೇಶ್ ತಾನೇ ಮುಂದೆ ನಿಂತು ಸರ್ಕಾರಿ ಜಾಗದಲ್ಲಿ ರಸ್ತೆ ಮಾಡಲು ಮುಂದಾಗಿದ್ದು, ಇದು ಸ್ಥಳೀಯ ರೈತರ ಆಕ್ರೋಶಕ್ಕೆ ಕಾರಣವಾಗಿತ್ತು. ಇದನ್ನೂ ಓದಿ: Pahalgam Terror Attack | ಭಾರತ ಶೀಘ್ರದಲ್ಲೇ ಪ್ರತೀಕಾರ ತೀರಿಸಿಕೊಳ್ಳಲಿದೆ – ಉಗ್ರರಿಗೆ ರಾಜನಾಥ್ ಸಿಂಗ್ ಎಚ್ಚರಿಕೆ
ಇಂದು ಸಹ ಸಕಲೇಶ್ ಕಡೆಯವರು ಜೆಸಿಬಿಗಳ ಮೂಲಕ ರಸ್ತೆ ಮಾಡಲು ಮುಂದಾಗಿದ್ದು, ಗ್ರಾಮಸ್ಥರು ಕ್ರಷರ್ ಮಾಡಬಾರದು. ರಸ್ತೆಯನ್ನೂ ಅಗೆಯಬಾರದು ಎಂದು ಅಡ್ಡಿಪಡಿಸಿದ್ದಾರೆ. ಈ ವೇಳೆ ಸ್ಥಳಕ್ಕೆ ಬಂದ ಸಕಲೇಶ್ ಹಾಗೂ ಗ್ರಾಮಸ್ಥರ ನಡುವೆ ಮಾತಿನ ಚಕಮಕಿ ನಡೆದಿದೆ. ಇದನ್ನೂ ಓದಿ: ಪಹಲ್ಗಾಮ್‌ನಲ್ಲಿ ಉಗ್ರರ ದಾಳಿಯಿಂದ ಕೂದಲೆಳೆ ಅಂತರದಲ್ಲಿ ಪಾರಾದ ಕಿರುತೆರೆ ದಂಪತಿ
ಈ ವೇಳೆ ಸಕಲೇಶ್ ತನ್ನ ಪರವಾನಿಗೆ ಸಹಿತ ರಿವಾಲ್ವರ್‌ನಿಂದ ಚಿಕನ್ ರವಿ ಎಂಬ ರೈತರೊಬ್ಬರ ಕಾಲಿಗೆ ಗುಂಡು ಹಾರಿಸಿದ್ದಾನೆ. ಬಳಿಕ ನನ್ನ ತಲೆಗೆ ಕಲ್ಲಿನಿಂದ ಹೊಡೆದವರು ಯಾರು ಎಂದು ಕೂಗಾಡುತ್ತಾ ರಿವಾಲ್ವರ್ ಕೈಯಲ್ಲಿ ಹಿಡಿದು ಜನರನ್ನ ಬೆದರಿಸಿದ್ದಾನೆ. ಇದನ್ನೂ ಓದಿ: ಇಂದು ಮನೆಗೆ ಮರಳಬೇಕಿದ್ದ ಉದ್ಯಮಿ ಉಗ್ರರ ಗುಂಡಿಗೆ ಬಲಿ – ಇಡೀ ಗ್ರಾಮದಲ್ಲಿ ಮಡುಗಟ್ಟಿದ ಮೌನ
ಘಟನೆಯಲ್ಲಿ ಗಾಯಗೊಂಡ ರವಿ ಎಂಬ ರೈತನಿಗೆ ಚಿಕ್ಕಬಳ್ಳಾಪುರ ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಇನ್ನೂ ಆರೋಪಿ ಸಕಲೇಶ್‌ನನ್ನ ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ.