ರಾಯಚೂರು: ಬರಗಾಲ ಬಂದಾಗಲೆಲ್ಲಾ ಕಳ್ಳತನ ಪ್ರಕರಣಗಳು ಸಾಮಾನ್ಯವಾಗಿ ಹೆಚ್ಚಾಗುತ್ತವೆ. ಆದರೆ ಈ ಬಾರಿಯ ಬರಗಾಲ ಹೊಸ ರೀತಿಯ ಕಳ್ಳತನಕ್ಕೆ ನಾಂದಿ ಹಾಡಿದೆ. ರಾಯಚೂರು ಜಿಲ್ಲೆಯಲ್ಲಿ ರೈತರಿಗೆ ತಮ್ಮ ಬೆಳೆಗಳನ್ನ ಕಳ್ಳರಿಂದ ಕಾಪಾಡಿಕೊಳ್ಳುವುದೇ ದೊಡ್ಡ ಸವಾಲಾಗಿದೆ. ಹೀಗಾಗಿ ಇಲ್ಲೊಬ್ಬ ರೈತ ಜಮೀನಿಗೆ ಸಿಸಿ ಕ್ಯಾಮೆರಾ (CCTV) ಅಳವಡಿಸಿದ್ದಾನೆ.
Advertisement
ರಾಜ್ಯದಲ್ಲಿ ತೀವ್ರ ಬರಗಾಲದಿಂದ ರೈತನ (Farmer) ಪರಿಸ್ಥಿತಿಯಂತೂ ಹೇಳತೀರದ್ದಾಗಿದೆ. ಹೀಗಿರುವಾಗ ಲಕ್ಷಾಂತರ ರೂಪಾಯಿ ಖರ್ಚು ಮಾಡಿ ಮೆಣಸಿನಕಾಯಿ ಬೆಳೆದಿರುವ ರಾಯಚೂರು (Raichur) ಜಿಲ್ಲೆಯ ರೈತರಿಗೆ ಕಳ್ಳರ ಕಾಟ ಶುರುವಾಗಿದೆ. ಈ ಮೊದಲು ಹತ್ತಿ, ತೊಗರಿ ಕಳ್ಳತನ ಮಾಡುತ್ತಿದ್ದ ಕಳ್ಳರು ಈಗ ಮೆಣಸಿನಕಾಯಿಯ ಮೇಲೆ ಕಣ್ಣಿಟ್ಟಿದ್ದಾರೆ. ರಾತ್ರೋರಾತ್ರಿ ಗಿಡಸಮೇತ ಮೇಣಕಾಸಿನಯನ್ನು (Chilly) ಕದ್ದು ಎಸ್ಕೇಪ್ ಆಗುತ್ತಿದ್ದಾರೆ. ಇದರಿಂದ ಬೇಸತ್ತ ರೈತ ಜಮೀನಿನಲ್ಲಿ ಸಿಸಿ ಕ್ಯಾಮರಾ ಅಳವಡಿಸಿದ್ದಾನೆ. ಆದರೂ ಕಳ್ಳರ ಭಯ ಇರುವುದರಿಂದ ರಾತ್ರಿ ಹೊತ್ತು ಜಮೀನಿನಲ್ಲೇ ಮಲಗುತ್ತಾರೆ.
Advertisement
Advertisement
ಮಳೆ ಕೊರತೆಯಿಂದ ಜಮೀನಿಗೆ ನೀರು ಬೀಡಲು ಸಾಕಷ್ಟು ಹಣ ಖರ್ಚು ಮಾಡಿರುವ ರೈತರು, ಕೀಟನಾಶಕ, ಗೊಬ್ಬರ ಅಂತ ಎಕರೆಗೆ ಲಕ್ಷಾಂತರ ರೂಪಾಯಿ ಸುರಿದಿದ್ದಾರೆ.ಎಕರೆಗೆ 10 ರಿಂದ 12 ಕ್ವಿಂಟಾಲ್ ಬೆಳೆ ನಿರೀಕ್ಷೆಯಿದ್ದು, ಆ ಪೈಕಿ 2-3 ಕ್ವಿಂಟಾಲ್ ಕಳ್ಳರ ಪಾಲಾದ್ರೆ ನಮಗೆ ಉಳಿಯುವುದೇನು ಅಂತ ರೈತರು ಆತಂಕಗೊAಡಿದ್ದಾರೆ. ಹೀಗಾಗಿ ಪೊಲೀಸ್ ಇಲಾಖೆ ಬೆಳೆ ರಕ್ಷಣೆಗೆ ಸಹಾಯ ಮಾಡಬೇಕು ಅಂತ ರೈತರು ಒತ್ತಾಯಿಸಿದ್ದಾರೆ. ಇದನ್ನೂ ಓದಿ: ಯಶ್ ನೋಡುವ ಕಾತರದಲ್ಲಿ ಬೈಕ್ ಅಪಘಾತ- ಅಭಿಮಾನಿ ಗಂಭೀರ
Advertisement
ಬರಗಾಲ ರೈತರನ್ನ ಮಾತ್ರ ಸಂಕಷ್ಟಕ್ಕೆ ಸಿಲುಕಿಸಿಲ್ಲ. ಜೊತೆಗೆ ಹೊಸ ರೀತಿಯ ಕಳ್ಳತನಕ್ಕೂ ದಾರಿ ಮಾಡಿಕೊಟ್ಟಿದೆ. ಬೆಳೆಯನ್ನ ಮಾರುಕಟ್ಟೆಗೆ ತೆಗೆದುಕೊಂಡು ಹೋಗುವವರೆಗೂ ರೈತರಿಗೆ ನಿದ್ದೆಯಿಲ್ಲದಂತಾಗಿದೆ. ರೈತರ ಕಷ್ಟಕ್ಕೆ ಕೂಡಲೇ ಪರಿಹಾರ ಸಿಗಬೇಕಿದೆ.