ಚಿಕ್ಕಬಳ್ಳಾಪುರ: ಬೆಳೆಗಳಿಗೆ (Crop) ದೃಷ್ಟಿ ತಾಕದಂತೆ ಮಾಡಲು ಮನೆಯಲ್ಲಿ ಬಳಸಿ ತೂತು ಬಿದ್ದ ಮಣ್ಣಿನ ಮಡಿಕೆಗೆ ಸುಣ್ಣ ಬಳಿದು, ಮೂಗು, ವಿಕಾರ ಕಣ್ಣುಗಳನ್ನು ತಿದ್ದಿ ದೃಷ್ಟಿ ಬೊಂಬೆ ಮಾಡಿ ರೈತರು ತಮ್ಮ ಹೊಲದಲ್ಲಿಯೇ ಸಿಗುವ ಕೋಲುಗಳಿಗೆ ಸಿಕ್ಕಿಸಿ ನಿಲ್ಲಿಸುತ್ತಿದ್ದರು. ಈಗ ಮಣ್ಣಿನ ಕರಿ ಮಡಿಕೆಗಳು ಹೆಚ್ಚಾಗಿ ಸಿಗುತ್ತಿಲ್ಲವಾದ್ದರಿಂದ ದೃಷ್ಟಿ ತಾಕದಂತೆ ತಡೆಯಲು ರೈತರು (Farmers) ಹೈಟೆಕ್ ವಿಧಾನ ಕಂಡುಕೊಂಡಿದ್ದಾರೆ.
Advertisement
ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೊಡ್ಡಬಳ್ಳಾಪುರ ತಾಲ್ಲೂಕಿನ ಹೊಸಹಳ್ಳಿ ಆರೂಢಿ ರಸ್ತೆ ಬದಿಯಲ್ಲಿ ಸುಂಗಧರಾಜ ಹೂವಿನ ಬೆಳೆಯ ನಡುವೆ ರೈತರೊಬ್ಬರು ದೃಷ್ಟಿ ಬೊಂಬೆ ಬದಲಿಗೆ ನಟಿ ಶ್ರೀಲೀಲಾ (Sreeleela) ಫೋಟೋ ಬಳಸಿದ್ದಾರೆ. ಸುಗಂಧರಾಜ ಹೂವಿನ ತೋಟದ ಮಧ್ಯೆ ನಟಿ ಶ್ರೀಲೀಲಾ ಫೋಟೋ ಹಾಕಲಾಗಿದ್ದು ದಾರಿ ಹೋಕರ ಕಣ್ಣು ಕುಕ್ಕುತ್ತಿದೆ. ಇದನ್ನೂ ಓದಿ: ಹುಟ್ಟೂರಲ್ಲಿ ಎಸ್.ಎಂ.ಕೃಷ್ಣ ಅಂತ್ಯಕ್ರಿಯೆ; ಸಿಎಂ ಸೇರಿ ಅನೇಕ ಗಣ್ಯರಿಂದ ಅಂತಿಮ ನಮನ
Advertisement
Advertisement
ಇತ್ತೀಚೆಗೆ ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ನಟಿಯರ ಭಾವಚಿತ್ರಗಳನ್ನ ದೃಷ್ಟಿ ಬೊಂಬೆಯಾಗಿ ಬಳಸುತ್ತಿದ್ದು, ಸಿನಿಮಾ ನಟಿಯರ ಫ್ಲೆಕ್ಸ್‌ಗಳನ್ನ ಬೆಳೆಗಳ ನಡುವೆ ನೇತುಹಾಕುತ್ತಿದ್ದಾರೆ. ರಸ್ತೆಯಲ್ಲಿ ಹೋಗುವವರು ಬೆಳೆ ಹೇಗಿದೆ ಎಂದು ನೋಡುವುದಕ್ಕೂ ಮುನ್ನವೇ ಥಟ್ಟನೆ ಕಣ್ಣಿಗೆ ಬಿಳುತ್ತಿರುವುದೇ ಈ ಸಿನಿಮಾ ತಾರೆಯರ ಫ್ಲೆಕ್ಸ್‌ಗಳು. ಹೀಗಾಗಿ ಬೆಳೆಗೆ ದೃಷ್ಟಿ ಆಗಲ್ಲ ಅನ್ನೋ ನಂಬಿಕೆ ರೈತರದ್ದಾಗಿದೆ. ಇದನ್ನೂ ಓದಿ: ‘ಅಯೋಗ್ಯ 2’ಗೆ ಅದ್ಧೂರಿ ಮುಹೂರ್ತ- ಮತ್ತೆ ಜೊತೆಯಾದ ಸತೀಶ್ ನೀನಾಸಂ, ರಚಿತಾ ರಾಮ್