ಮುಂಬೈ: ಗಾಂಜಾ ಬೆಳೆಗೆ ಅನುಮತಿ ಕೋರಿದ ಮಹಾರಾಷ್ಟ್ರದ ಸೋಲಾಪುರ ಜಿಲ್ಲೆಯ ಮೋಹಲ್ ತೆಹ್ಸಿಲ್‍ನ ಕೃಷಿಕರೊಬ್ಬರು ಸಖತ್ ಸುದ್ದಿಯಲ್ಲಿದ್ದಾರೆ.
Advertisement
ಕೃಷಿಯ ಅನಿಲ್ ಪಾಟೀಲ್ ಇಂತಹ ಒಂದು ಬೇಡಿಕೆ ಇಟ್ಟಿದ್ದಾರೆ. ಆದರೆ ಇದಕ್ಕೆ ಕಾರಣ ಮಾತ್ರ ವಿಚಿತ್ರವಾಗಿದೆ. ಯಾವುದೇ ಬೆಳೆಗೆ ನಿಗದಿತ ಬೆಲೆಯಿಲ್ಲ. ರೈತರು ಭಾರೀ ನಷ್ಟದಲ್ಲಿದ್ದಾರೆ. ಮಾದಕ ದ್ರವ್ಯ ಗಾಂಜಾ ಬೆಳೆಗೆ ಉತ್ತಮ ಬೆಲೆಯಿದೆ. ಅದನ್ನು ಬೇಳೆಯಲು ಅನುಮತಿ ಕೊಡಿ ಎಂದು ಜಿಲ್ಲಾಡಳಿತಕ್ಕೆ ಮನವಿ ಮಾಡಿದ್ದಾರೆ. ಇದನ್ನೂ ಓದಿ: ಕಾಬೂಲ್ ದಾಳಿಯ ಹೊಣೆ ಹೊತ್ತ ISKP ಸಂಘಟನೆ
Advertisement
Advertisement
ಅನುಮತಿ ನೀಡಲು ಸೆ.15ರವರೆಗೆ ಸಮಯವನ್ನು ಕೊಡುತ್ತೇನೆ. ಕೊಡಲಿಲ್ಲವಾದರೆ ಸೆ.16ರಂದು ಗಾಂಜಾ ಕೃಷಿಯನ್ನು ಆರಂಭಿಸುತ್ತೇನೆ. ಮುಂದಿನ ಘಟನೆಗಳಿಗೆ ನಾನು ಹೊಣೆಗಾರನಲ್ಲ ಎಂದು ಹೇಳಿದ್ದಾರೆ. ಈ ಅರ್ಜಿಯನ್ನು ಜಿಲ್ಲಾಡಳಿತ ಪೊಲೀಸರಿಗೆ ತಲುಪಿಸಿದೆ. ಪೊಲೀಸರು ಈ ಪ್ರಕರಣವನ್ನು ಜನಪ್ರಿಯತೆಗೆಗಾಗಿ ಮಾಡಿರುವ ನಾಟಕವಾಗಿದೆ ಎಂದು ಹೇಳಿದ್ದಾರೆ. ಭಾರತದಲ್ಲಿ ಗಾಂಜಾವನ್ನು ಬೆಳೆಯಲು ನಿಷೇಧವಿದೆ.