ಬೆಂಗಳೂರು: ರೈತರ ಸಾಲಮನ್ನಾ ವಿಚಾರಕ್ಕೆ ಸಂಬಂಧಿಸಿದಂತೆ ಇದೀಗ ಸಮ್ಮಿಶ್ರ ಸರ್ಕಾರಕ್ಕೆ ದೊಡ್ಡ ತಲೆನೋವಾಗಿದೆ. ಸಾಲಮನ್ನಾ ಮಾಡುವುದು ಸಿಎಂ ಕುಮಾರಸ್ವಾಮಿ ಅವರು ಅಂದುಕೊಂಡಷ್ಟು ಸುಲಭವಿಲ್ಲ. ಯಾಕಂದ್ರೆ ರೈತರು ಈಗಾಗಲೇ ಸುಮಾರು 53 ಸಾವಿರ ಕೋಟಿಗೂ ಅಧಿಕ ಸಾಲ ಮಾಡಿದ್ದಾರೆ.
ಹಾಗಾದ್ರೆ ಯಾವ್ಯಾವ ಬ್ಯಾಂಕ್‍ಗಳಲ್ಲಿ ರೈತರು ಎಷ್ಟು ಸಾಲ ಮಾಡಿದ್ದಾರೆ ಅಂತ ನೋಡೋದಾದ್ರೆ,
* ಕೆನರಾ ಬ್ಯಾಂಕ್: 16,966 ಕೋಟಿ ರೂ.
* ಕಾರ್ಪೋರೇಷನ್ ಬ್ಯಾಂಕ್: 3,176 ಕೋಟಿ ರೂ.
* ಸಿಂಡೀಕೇಟ್ ಬ್ಯಾಂಕ್: 4,026 ಕೋಟಿ ರೂ.
* ಎಸ್‍ಬಿಐ: 5,800 ಕೋಟಿ ರೂ.
* ವಿಜಯ ಬ್ಯಾಂಕ್: 2,970 ಕೋಟಿ ರೂ.
* ಕರ್ನಾಟಕ ಬ್ಯಾಂಕ್: 2,149 ಕೋಟಿ ರೂ.
* ಐಡಿಬಿಐ ಬ್ಯಾಂಕ್: 3,439 ಕೋಟಿ ರೂ.
* ಪ್ರಗತಿ ಕೃಷಿ ಗ್ರಾಮೀಣ ವಿಕಾಸ ಬ್ಯಾಂಕ್: 3,367 ಕೋಟಿ ರೂ.
* ಕರ್ನಾಟಕ ವಿಕಾಸ ಗ್ರಾಮೀಣ ಬ್ಯಾಂಕ್: 4,334 ಕೋಟಿ ರೂ.
* ಅಪೆಕ್ಸ್ ಬ್ಯಾಂಕ್: 10,734 ಕೋಟಿ ರೂ.
Advertisement
Advertisement
ಚುನಾವಣೆಗೂ ಮುಂಚೆ ತಾನು ಸಿಎಂ ಆಗಿ ಅಧಿಕಾರಕ್ಕೆ ಬಂದ ತಕ್ಷಣ ಮೊದಲು ರೈತರ ಸಾಲಮನ್ನಾ ಮಾಡುವುದಾಗಿ ಕುಮಾರಸ್ವಾಮಿ ಅವರು ಹೇಳಿದ್ದರು. ಅಲ್ಲದೇ ಬಳಿಕ ಕರ್ನಾಟಕದ ಜನರಿಗೆ ನಾನು ವಂಚನೆ ಮಾಡುವುದಿಲ್ಲ. ಜನರ ಹೆಸರಿನಲ್ಲಿ ನಾನು ಪ್ರಮಾಣ ಮಾಡಿ ಅಧಿಕಾರ ಸ್ವೀಕರಿಸಿದ್ದೇನೆ. ನಾನು ಬಹಳ ಸೂಕ್ಷ್ಮ ಜೀವಿ. ನನ್ನ ಮಾತನ್ನು ನಡೆಸಿಕೊಟ್ಟಿಲ್ಲ ಎಂದರೆ ರಾಜೀನಾಮೆ ಕೊಟ್ಟು ಹೋಗುತ್ತೇನೆ. ಅಷ್ಟು ಮಾತ್ರವಲ್ಲ ರಾಜಕೀಯದಿಂದಲೇ ನಿವೃತ್ತಿ ಪಡೆಯುತ್ತೇನೆ ಅಂತ ಹೇಳಿದ್ದರು. ಆದ್ರೆ ಇದೀಗ ಸಮ್ಮಿಶ್ರ ಸರ್ಕಾರಕ್ಕೆ ರೈತರ ಸಾಲಮನ್ನಾ ವಿಚಾರ ಕಗ್ಗಂಟಾಗಿದೆ.