ಚಿಕ್ಕೋಡಿ: ರೈತರೊಬ್ಬರು (Farmer) 7 ಎಕರೆ ಜಮೀನನ್ನು ಲೀಸ್ ಮೇಲೆ ಪಡೆದು ಅದರಲ್ಲಿ ಟೊಮೆಟೋ (Tomato) ಬೆಳೆದು ಕೋಟಿ ರೂ. ಸಂಪಾದಿಸಿ ಸಾಧನೆಗೈದ ಘಟನೆ ಬೆಳಗಾವಿ (Belagavi) ಜಿಲ್ಲೆ ಚಿಕ್ಕೋಡಿ (Chikkodi) ತಾಲೂಕಿನ ಎಕ್ಸಂಬಾ ಪಟ್ಟಣದಲ್ಲಿ ನಡೆದಿದೆ.
ಮಹಾರಾಷ್ಟ್ರದ (Maharashtra) ಜಯಸಿಂಗಪುರದ ಸಾಗರ್ ಮಗದುಮ್ ಕೋಟಿ ರೂ. ಸಂಪಾದಿಸಿದ ರೈತ. ಇವರು ನನದಿ ಗ್ರಾಮದಲ್ಲಿ 7 ಎಕರೆ ಜಮೀನನ್ನು ಲೀಸ್ ಮೇಲೆ ಪಡೆದಿದ್ದರು. 4 ತಿಂಗಳಿಗೆ ಒಂದು ಎಕರೆಗೆ ತಲಾ 40 ಸಾವಿರ ರೂ. ನೀಡಿ ಜಮೀನನ್ನು ಲೀಸ್‌ಗೆ ಪಡೆದಿದ್ದು, ಇದೀಗ 5 ಕಟಾವುಗಳಲ್ಲಿ ಒಂದು ಕೋಟಿ ರೂ. ಸಂಪಾದಿಸಿ ಸೈ ಎನಿಸಿಕೊಂಡಿದ್ದಾರೆ. ಇವರ ಜಮೀನಿಗೆ ದೆಹಲಿ (Delhi) ಮೂಲದ ವ್ಯಾಪಾರಸ್ಥರು ಆಗಮಿಸಿ ಟೊಮೆಟೋ ಖರೀದಿ ಮಾಡಿ ತೆಗೆದುಕೊಂಡು ಹೋಗುತ್ತಾರೆ. ಇದನ್ನೂ ಓದಿ: ಚಿತ್ರದುರ್ಗ ಶಾಸಕನಿಂದ ಮತ್ತೊಂದು ಯಡವಟ್ಟು – ಬೆಂಕಿಯಿಡಲು ಪ್ರಚೋದಿಸಿದ ವಿಡಿಯೋ ವೈರಲ್
Advertisement
Advertisement
ಪ್ರತಿವರ್ಷ ಸಾಗರ್ ಮಗದುಮ್ ಕುಟುಂಬಸ್ಥರು ಗಡಿಭಾಗದಲ್ಲಿ ಜಮೀನನ್ನು ಲೀಸ್‌ಗೆ ಪಡೆದು ಟೊಮೆಟೋ ಬೆಳೆ ಬೆಳೆಯುತ್ತಾರೆ. ಇವರು ಮತ್ತು ಇವರ ಕುಟುಂಬಸ್ಥರು ಕಳೆದ 30 ವರ್ಷಗಳಿಂದ ಟೊಮೆಟೋ ಬೆಳೆಯುತ್ತಿದ್ದು, 30 ವರ್ಷದಲ್ಲಿ ಟೊಮೆಟೊಗೆ ಇಷ್ಟೊಂದು ಬೆಲೆ ಎಂದೂ ಬಂದಿರಲಿಲ್ಲ. ಇದೇ ಮೊದಲ ಬಾರಿಗೆ ಟೊಮೆಟೋಗೆ ಇಷ್ಟೊಂದು ಡಿಮ್ಯಾಂಡ್ ಬಂದಿದ್ದು, ಇನ್ನೂ ಐದು ಬಾರಿ ಕಟಾವು ಮಾಡಿ ಒಟ್ಟಾರೆ ಒಂದೂವರೆ ಕೋಟಿ ಲಾಭದ ನಿರೀಕ್ಷೆ ಇದೆ. ಈವರೆಗೆ 7 ಎಕರೆಗೆ 20 ಲಕ್ಷ ರೂ. ಖರ್ಚು ಮಾಡಿದ್ದು, 1 ಕೋಟಿಗೂ ಅಧಿಕ ಲಾಭ ಗಳಿಸಿದ್ದೇವೆ ಎಂದು ರೈತ ಸಾಗರ್ ತಿಳಿಸಿದ್ದಾರೆ. ಇದನ್ನೂ ಓದಿ: ಅಮೃತ್ ಭಾರತ್; ರಾಜ್ಯದ 13 ರೈಲ್ವೆ ನಿಲ್ದಾಣಗಳ ಪುನರಾಭಿವೃದ್ಧಿ – ಮೋದಿಯಿಂದ ಇಂದು ಚಾಲನೆ
Advertisement
Web Stories