ಹಾಸನ: ವಿಶೇಷಚೇತನ ರೈತನೊಬ್ಬರ ಒಂದು ಎಕರೆ ಕಾಫಿ ತೋಟವನ್ನು (Coffee Plantation) ದುಷ್ಕರ್ಮಿಗಳು ನಾಶಪಡಿಸಿದ ಘಟನೆ ಹಾಸನದ (Hassan) ಆಲೂರಿನ (Alur) ಅಡಿಬೈಲು ಗ್ರಾಮದಲ್ಲಿ ನಡೆದಿದೆ.
ಚಂದ್ರು ಎಂಬವರು ಒಂದು ಎಕರೆ ಜಾಗದಲ್ಲಿ 450ಕ್ಕೂ ಹೆಚ್ಚು ಕಾಫಿ ಗಿಡ ಹಾಗೂ ಮೆಣಸಿನ ಗಿಡಗಳನ್ನು ಬೆಳೆದಿದ್ದರು. ದುಷ್ಕರ್ಮಿಗಳು ಬೆಳೆಯನ್ನು ಕಡಿದು ಹಾಕಿದ್ದು ರೈತ (Farmer) ಹಾಗೂ ಆತನ ಕುಟುಂಬ (Family) ಕಂಗಾಲಾಗಿ ಕಣ್ಣೀರಿಟ್ಟಿದೆ. ಇದನ್ನೂ ಓದಿ: ಸಿಎಂ ಉದ್ಘಾಟಿಸಿದ್ದ ಛತ್ರಪತಿ ಶಿವಾಜಿ ಮಹಾರಾಜರ ಪ್ರತಿಮೆ ಮತ್ತೊಮ್ಮೆ ಲೋಕಾರ್ಪಣೆ
ಹನ್ನೆರಡು ವರ್ಷಗಳಿಂದ ಕಷ್ಟಪಟ್ಟು ಬೆಳೆದಿದ್ದ ಗಿಡಗಳಲ್ಲಿ ಫಸಲು ಬರುತ್ತಿದ್ದು, ಕುಟುಂಬ ನಿರ್ವಹಣೆಯ ಆಧಾರವೇ ಕಳಚಿದಂತಾಗಿದೆ ಎಂದು ರೈತ ತನ್ನ ಅಳಲನ್ನು ತೋಡಿಕೊಂಡಿದ್ದಾನೆ. ಪರಿಹಾರಕ್ಕಾಗಿ ಸರ್ಕಾರಕ್ಕೆ ಮನವಿ ಮಾಡಿಕೊಂಡಿದ್ದಾನೆ. ವಿಶೇಷಚೇತನ ರೈತನ ಕಾಫಿ ತೋಟದಲ್ಲಿ ಹೀನ ಕೃತ್ಯ ಎಸಗಿರುವ ದುಷ್ಟರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಗ್ರಾಮಸ್ಥರು ಒತ್ತಾಯಿಸಿದ್ದಾರೆ.
ಸ್ಥಳಕ್ಕೆ ಆಲೂರು ಪೊಲೀಸರು ಭೇಟಿ ನೀಡಿ ಪ್ರಕರಣ ದಾಖಲಿಸಿಕೊಂಡು ಪರಿಶೀಲನೆ ನಡೆಸಿದ್ದಾರೆ. ಇದನ್ನೂ ಓದಿ: ಸ್ವಗ್ರಾಮದಲ್ಲೇ ಶಾಸಕ ಅಜಯ್ ಸಿಂಗ್‌ಗೆ ಗ್ರಾಮಸ್ಥರಿಂದ ಕ್ಲಾಸ್