ಹಾಸನ: ಹೆಜ್ಜೇನು ದಾಳಿಯಿಂದ (Bee Attack) ಜಮೀನಿನಲ್ಲಿ ಕೆಲಸ ಮಾಡುತ್ತಿದ್ದ ರೈತ (Farmer) ಸ್ಥಳದಲ್ಲೇ ಸಾವಿಗೀಡಾದ ಘಟನೆ ಹಾಸನದ (Hassan) ಕೆಂಚನಹಳ್ಳಿ ಗ್ರಾಮದಲ್ಲಿ ನಡೆದಿದೆ.
ಮೃತನನ್ನು ಜಗದೀಶ್ (55) ಎಂದು ಗುರುತಿಸಲಾಗಿದೆ. ಅವರು ತಮ್ಮ ಜಮೀನಿನಲ್ಲಿ ದಿನಚರಿಯಂತೆ ಕೃಷಿ ಕಾರ್ಯಗಳಲ್ಲಿ ತೊಡಗಿದ್ದಾಗ ಜೇನು ದಾಳಿ ನಡೆಸಿದೆ. ತೀವ್ರ ಅಸ್ವಸ್ಥಗೊಂಡ ಅವರು ಸ್ಥಳದಲ್ಲೆ ಮೃತಪಟ್ಟಿದ್ದಾರೆ.
ಜಗದೀಶ್ ಅವರು ಆಕಸ್ಮಿಕವಾಗಿ ಹೆಜ್ಜೇನಿನ ಗೂಡನ್ನು ಅಲುಗಿಸಿದ ಪರಿಣಾಮ ದಾಳಿ ಮಾಡಿವೆ. ಬಹಳ ಸಂಖ್ಯೆಯಲ್ಲಿ ಹೆಜ್ಜೇನುಗಳು ಕಚ್ಚಿದ ಪರಿಣಾಮ, ಅವರು ಸಾವನ್ನಪ್ಪಿದ್ದಾರೆ ಎಂದು ಸ್ಥಳೀಯರು ತಿಳಿಸಿದ್ದಾರೆ.
ಈ ಘಟನೆ ಸಂಬಂಧ ದುದ್ದ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.