ಬೆಂಗಳೂರು: ಫೆಬ್ರವರಿ 26ರಂದು ರಾಜಾಜಿನಗರ ಮೆಟ್ರೋ ನಿಲ್ದಾಣದಲ್ಲಿ (Metro Station) ರೈತನಿಗೆ ಅವಮಾನ ಮಾಡಿದ ಪ್ರಕರಣಕ್ಕೆ ಸಂಬಂಧಪಟ್ಟಂತೆ ಬಿಎಂಆರ್‌ಸಿಎಲ್ (BMRCL) ಇದೀಗ ಉಲ್ಟಾ ಹೊಡೆದಿದೆ.
ಕೊಳಕು ಬಟ್ಟೆ ಅಂತ ರೈತನಿಗೆ ಅವಮಾನ ಮಾಡಿಲ್ಲ. ರೈತ ಪ್ರಯಾಣಿಕನಿಗೆ, ಟಿಕೆಟ್ (Ticket) ತೆಗೆದುಕೊಳ್ಳುವಂತೆ ಸೆಕ್ಯೂರಿಟಿ ಹೇಳಿದ್ದರು. ಆದರೆ ಇದನ್ನು ಸಹಪ್ರಯಾಣಿಕ ತಪ್ಪಾಗಿ ತಿಳಿದುಕೊಂಡಿದ್ದಾರೆ ಎಂದು ಹೇಳಿದೆ. ಇದನ್ನೂ ಓದಿ: ದರ್ಶನ್ ವಿರುದ್ದ ಕೇಸ್ ದಾಖಲಿಸದ್ದಕ್ಕೆ ಕೋರ್ಟ್ ಮೊರೆ ಹೋದ ರೇಣುಕಮ್ಮ
Advertisement
Advertisement
ಬಟ್ಟೆ ಕೊಳಕು ಅಂತಾ ವೃದ್ಧನನ್ನು ಮೆಟ್ರೋ ಒಳಗೆ ಬಿಟ್ಟಿಲ್ಲ ಎಂದು ಆಪಾದಿಸಿ ವಿವಾದ ಮಾಡಿದರು ಎಂಬ ವಿಚಾರ ಆಂತರಿಕ ತನಿಖೆಯಲ್ಲಿ ತಿಳಿದುಬಂದಿದೆ ಎಂದು ಮೆಟ್ರೋ ಕಾರ್ಯನಿರ್ವಾಹಕ ನಿದೇರ್ಶಕ ಶಂಕರ್ ಹೇಳಿಕೆ ನೀಡಿದ್ದಾರೆ. ಇದು ಈಗ ಚರ್ಚೆಗೆ ಗ್ರಾಸವಾಗಿದೆ. ಇದನ್ನೂ ಓದಿ: ಪಾಕಿಸ್ತಾನ ಜಿಂದಾಬಾದ್ ಘೋಷಣೆ – ಎಡಿಟ್ ಮಾಡದ ಮೂಲ ವಿಡಿಯೋ ನೀಡಿದ ಪಬ್ಲಿಕ್ ಟಿವಿ