ಕೊಪ್ಪಳ: ಹೊಲದಲ್ಲಿರೋ ಬೋರ್‍ವೆಲ್ ಮೋಟಾರ್ ವಿದ್ಯುತ್ ಹಿಡಿದು ರೈತ ಆತ್ಮಹತ್ಯೆ ಮಾಡಿಕೊಂಡಿರೋ ಘಟನೆ ಕೊಪ್ಪಳದಲ್ಲಿ ನಡೆದಿದೆ.
ಕೊಪ್ಪಳ ತಾಲೂಕಿನ ಮೋರನಾಳ ಗ್ರಾಮದಲ್ಲಿ ಮಂಗಳವಾರ ತಡರಾತ್ರಿ ಈ ಘಟನೆ ನಡೆದಿದೆ. 40 ವರ್ಷದ ಭರಮಪ್ಪ ಅನಬಿ ಆತ್ಮಹತ್ಯೆ ಮಾಡಿಕೊಂಡ ರೈತನಾಗಿದ್ದು, ಇತ್ತೀಚೆಗೆ ಇವರು ಕುರಿ ಮಾರಾಟ ಮಾಡಿ 1 ಲಕ್ಷ 20 ಸಾವಿರ ಕೈಸಾಲವನ್ನ ವಾಪಾಸ್ಸು ಮಾಡಿದ್ದರು. ಕುರಿ ಮಾರಾಟ ಮಾಡಿ ಸಾಲ ತೀರಿಸಿದ ಬಳಿಕ ಮಾನಸಿಕವಾಗಿನೊಂದಿದ್ದರು ಎಂದು ತಿಳಿದುಬಂದಿದೆ.
Advertisement
ಅಲ್ಲದೇ ವಿವಿಧ ರಾಷ್ಟ್ರೀಕೃತ ಬ್ಯಾಂಕ್ ನಲ್ಲಿ 3 ಲಕ್ಷ ರೂಪಾಯಿ ಸಾಲಮಾಡಿದ್ದ ರೈತ ಅದನ್ನು ತೀರಿಸೋದು ಹೇಗೆ ಅಂತ ಮಾನಸಿಕವಾಗಿ ನೊಂದಿದ್ದರು. ಈ ಹಿನ್ನೆಲೆಯಲ್ಲಿ ಸಾಲಬಾಧೆ ತಾಳಲಾರದೆ ರೈತ ಆತ್ಮಹತ್ಯೆ ಮಾಡಿಕೊಂಡಿರೋ ಶಂಕೆ ವ್ಯಕ್ತವಾಗಿದೆ.
Advertisement
ಅಳವಂಡಿ ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.