LatestLeading NewsMain PostNational

ಭರವಸೆಗಳನ್ನು ಉಲ್ಲಂಘಿಸಿದ ಮೋದಿ ಸರ್ಕಾರ- ಮಾ.21ರಿಂದ ರೈತರಿಂದ ಮತ್ತೆ ಸರಣಿ ಪ್ರತಿಭಟನೆ

ನವದೆಹಲಿ: ಕೇಂದ್ರದ ಮೂರು ಕೃಷಿ ಕಾಯ್ದೆಗಳನ್ನು ವಿರೋಧಿಸಿ ದೆಹಲಿ ಗಡಿ ಭಾಗಗಳಲ್ಲಿ ರೈತರ ಬೃಹತ್‌ ಪ್ರತಿಭಟನೆ ನೇತೃತ್ವ ವಹಿಸಿದ್ದ ಸಂಯುಕ್ತ ಕಿಸಾನ್‌ ಮೋರ್ಚಾ (ಎಸ್‌ಕೆಎಂ) ಮಾ.21ರಿಂದ ಮತ್ತೆ ಸರಣಿ ಪ್ರತಿಭಟನೆ ನಡೆಸಲು ನಿರ್ಧರಿಸಿದೆ.

ಪ್ರಧಾನಿ ಮೋದಿ ಸರ್ಕಾರ ಭರವಸೆಗಳನ್ನು ಉಲ್ಲಂಘಿಸುತ್ತಿದೆ ಎಂದು ಪ್ರತಿಭಟನೆಗೆ ಕರೆ ನೀಡಲಾಗಿದೆ ಎಂದು ಎಸ್‌ಕೆಎಂ ನಾಯಕ ರಾಕೇಶ್‌ ಟಿಕಾಯತ್‌ ತಿಳಿಸಿದ್ದಾರೆ. ಇದನ್ನೂ ಓದಿ: ಗಂಗಾ ನದಿ ನೀರು ಸ್ನಾನಕ್ಕೆ ಯೋಗ್ಯವಾಗಿದೆ: ಕೇಂದ್ರ

ರೈತರು ಕಳೆದ ವರ್ಷದಂತೆ ದೆಹಲಿಯ ಗಡಿಭಾಗದ ಪ್ರತಿಭಟನಾ ಸ್ಥಳಗಳಲ್ಲಿ ನಿರಂತರ ಮುತ್ತಿಗೆ ಹಾಕುವ ಬದಲಾಗಿ ಈ ಬಾರಿ ಹಂತ ಹಂತವಾಗಿ ಪ್ರತಿಭಟನೆಗಳನ್ನು ನಡೆಸಲಾಗುವುದು ಎಂದು ಎಸ್‌ಕೆಎಂ ತಿಳಿಸಿದೆ.

ಮಾರ್ಚ್‌ 21ರಂದು ಒಂದು ದಿನ ಬೃಹತ್‌ ಪ್ರತಿಭಟನೆ ನಡೆಸಲಿದೆ. ಕೃಷಿ ಉತ್ಪನ್ನಗಳಿಗೆ ಕನಿಷ್ಠ ಮಾನದಂಡದ ಬೆಲೆ ನೀಡುವಂತೆ ಒತ್ತಾಯಿಸಿ ಮುಂದಿನ ಹಂತದಲ್ಲಿ ಏಪ್ರಿಲ್‌ 9ರಿಂದ 17ರವರೆಗೆ ದೇಶಾದ್ಯಂತ ಮುಷ್ಕರ ಹೂಡಲಾಗುವುದು ಎಂದು ಹೇಳಿದೆ. ಇದನ್ನೂ ಓದಿ: ನಾಳೆ ಬೆಳಗ್ಗೆ 10:30ಕ್ಕೆ ಹಿಜಬ್‌ ಹೈಕೋರ್ಟ್‌ ತೀರ್ಪು

ಕೇಂದ್ರದಿಂದ ಅಧಿಕೃತ ಭರವಸೆಗಳ ಹೊರತಾಗಿಯೂ ರೈತರ ಮೇಲಿನ ಪ್ರಕರಣಗಳನ್ನು ಹಿಂತೆಗೆದುಕೊಳ್ಳಲಾಗಿಲ್ಲ. ಲಖಿಮ್‌ಪುರ ಖೇರಿಯಲ್ಲಿ ನಡೆದ ಕೊಲೆ ಅಪರಾಧಕ್ಕೆ ಸಂಬಂಧಿಸಿದಂತೆ ರೈತರಿಗೆ ನಿಜವಾದ ನ್ಯಾಯ ಸಿಕ್ಕಿಲ್ಲ ಎಂದು ಕೃಷಿ ಮುಖಂಡ ಯೋಗೇಂದ್ರ ಯಾದವ್‌ ಹೇಳಿದ್ದಾರೆ.

ಕೇಂದ್ರ ಕೃಷಿ ಕಾರ್ಯದರ್ಶಿ ಸಂಜಯ್‌ ಅಗರ್ವಾಲ್‌ ಅವರು ಬರೆದ ಪತ್ರದಲ್ಲಿ ಕೇಂದ್ರದ ಪ್ರಸ್ತಾವನೆಗಳನ್ನು ಎಸ್‌ಕೆಎಂ ಅಂಗೀಕರಿಸಿದ ನಂತರ ರೈತರು 2021ರ ಡಿಸೆಂಬರ್‌ 19 ರಂದು ತಮ್ಮ ಪ್ರತಿಭಟನೆಯನ್ನು ಹಿಂತೆಗೆದುಕೊಂಡಿದ್ದರು. ಇದನ್ನೂ ಓದಿ: ಏರ್‌ ಇಂಡಿಯಾ ಅಧ್ಯಕ್ಷರಾಗಿ ಟಾಟಾ ಸನ್ಸ್‌ ಮುಖ್ಯಸ್ಥ ಎನ್.ಚಂದ್ರಶೇಖರನ್‌ ನೇಮಕ

ಉತ್ಪನ್ನಗಳಿಗೆ ಕನಿಷ್ಠ ಬೆಂಬಲ ಬೆಲೆ ನೀಡುವುದಕ್ಕೆ ಸಂಬಂಧಿಸಿದಂತೆ ಸಮಿತಿ ರಚಿಸುವುದಾಗಿ ಕೇಂದ್ರ ಸರ್ಕಾರ ಹೇಳಿತ್ತು. ಆದರೆ ಇನ್ನೂ ಸಮಿತಿಯನ್ನು ರಚಿಸಿಲ್ಲ.

Leave a Reply

Your email address will not be published.

Back to top button