ಮುಂಬೈ: ಡೇಟಿಂಗ್ ವಿಚಾರದಲ್ಲಿ ಸುದ್ದಿಯಾಗುತ್ತಿದ್ದ, ಫರ್ಹಾನ್ ಅಖ್ತರ್, ಶಿಬಾನಿ ದಾಂಡೇಕರ್ ಜೋಡಿ ಇದೀಗ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ.
ಮುಂಬೈನಲ್ಲಿರುವ ಫರಾನ್ ಅಖ್ತರ್ ಮನೆಯಲ್ಲೇ ಮದುವೆ ಸಮಾರಂಭ ನೆರವೇರಿದೆ. ಈ ಕಾರ್ಯಕ್ರಮದಲ್ಲಿ ರಿಯಾ ಚಕ್ರವರ್ತಿ ಮತ್ತು ಅಮೃತಾ ಅರೋರಾ ಸೇರಿದಂತೆ ಬಾಲಿವುಡ್ನ ಅನೇಕ ತಾರೆಯರು ಭಾಗಿಯಾಗಿದ್ದರು. ನಿನ್ನೆ ಮೆಹೆಂದಿ ಜೊತೆಗೆ ಸಂಗೀತ್ ಕಾರ್ಯಕ್ರಮ ಕೂಡ ನೆರವೇರಿದೆ. ಈ ಸಮಾರಂಭಕ್ಕೆ ಶಿಬಾನಿ, ಹಳದಿ ಬಣ್ಣದ ಬಟ್ಟೆಯನ್ನು ಧರಿಸಿದ್ದರು. ಈ ವೇಳೆ ತನ್ನ ಸ್ನೇಹಿತರು ಮತ್ತು ಕುಟುಂಬ ಸದಸ್ಯರು ಡಾನ್ಸ್ ಮಾಡುತ್ತಾ ಸಖತ್ ಎಂಜಾಯ್ ಮಾಡಿದ್ದರು. ಇದನ್ನು ಓದಿ : ಪಾರ್ವತಮ್ಮ ರಾಜ್ ಕುಮಾರ್ ಮತ್ತು ಬೆಳ್ಳಿ ಬಟ್ಟಲು ಸ್ಟೋರಿ ಹೇಳಿದ ರಂಗಾಯಣ ರಘು
Advertisement
ನಟ, ನಿರ್ದೇಶಕ ಫರ್ಹಾನ್ ಅಖ್ತರ್ಗೆ ಇದು ಎರಡನೇ ಮದುವೆ. ಶಿಬಾನಿಗೂ ಮೊದಲು ಫರ್ಹಾನ್ ಅಧುನಾ ಬಬಾನಿ ಜೊತೆಗೆ ಮದುವೆ ಆಗಿದ್ದರು. 2000ರಲ್ಲಿ ಫರಾನ್ ಮೊದಲ ಮದುವೆ ಆಗಿದ್ದರು. ನಂತರ ಅವರು 2017ರಲ್ಲಿ ವಿಚ್ಛೇದನ ಪಡೆದು ದೂರ ಆಗಿದ್ದಾರೆ. ನಂತರ 2018 ರಿಂದ ಶಿಬಾನಿ ಜೊತೆಗೆ ಪ್ರೀತಿಯಲ್ಲಿ ಫರ್ಹಾನ್ ಇಂದು ಮದುವೆಯಾಗಿದ್ದಾರೆ.
Advertisement
View this post on Instagram
Advertisement
ಸಿಂಬಾ ಚಿತ್ರದ ಆಂಖ್ ಮೇರಿ ಹಾಡು, ದಿಲ್ವಾಲೆ ದುಲ್ಹನಿಯಾ ಲೇ ಜಾಯೇಂಗೆ ಚಿತ್ರದ ಮೆಹೆಂದಿ ಲಗಾ ಕೆ ರಖನಾ ಹಾಡಿಗೆ ಅನುಷಾ ದಾಂಡೇಕರ್ ಮತ್ತು ರಿಯಾ ಚಕ್ರವರ್ತಿ ಅವರು ಸೇರಿದಂತೆ ಎಲ್ಲರೂ ಡ್ಯಾನ್ಸ್ ಮಾಡಿರುವ ವೀಡಿಯೋ ವೈರಲ್ ಆಗಿದೆ. ಕೊರೊನಾ ಕಾರಣಕ್ಕೆ ಮದುವೆ ಕಾರ್ಯಕ್ರಮಗಳನ್ನು ಕೂಡ ಕಡಿಮೆ ಜನರ ಸಮ್ಮುಖದಲ್ಲಿ ನಡೆದಿದೆ. ಕುಟುಂಬಸ್ಥರು ಹಾಗೂ ಆಪ್ತ ಸ್ನೇಹಿತರಷ್ಟೇ ಭಾಗಿಯಾಗಿದ್ದಾರೆ.