ತೆಲುಗಿನ ಖ್ಯಾತ ಸ್ಟಾರ್ ಜೋಡಿ ಸಮಂತಾ ರುತ್ ಪ್ರಭು (Samantha Ruth Prabhu) ಹಾಗೂ ನಾಗ ಚೈತನ್ಯ (Naga Chaitanya) ಸತತ ಹತ್ತು ವರ್ಷಗಳ ಕಾಲ ಸ್ನೇಹಿತರಾಗಿ, ಪ್ರೇಮಿಗಳಾಗಿ ಆನಂತರ ಲವ್ ಮ್ಯಾರೇಜ್ ಆದವರು. ಇವರ ಮದುವೆ ನಂತರ ಈ ಜೋಡಿಯ ಮೇಲೆ ಯಾರ ಕಣ್ಣು ಬೀಳದಿರಲಿ ಎಂದು ಅನೇಕರು ಹಾರೈಸಿದ್ದರು. ಆದರೆ, ಹಾರೈಕೆ ತುಂಬಾ ವರ್ಷಗಳ ಕಾಲ ಉಳಿಯಲಿಲ್ಲ. ಹೊಂದಾಣಿಕೆಯ ಕಾರಣ ನೀಡಿ ಇಬ್ಬರೂ ದೂರವಾದರು.
ಮದುವೆ ನಂತರ ಸಮಂತಾ ತಮ್ಮ ಪತಿ ನಾಗ ಚೈತನ್ಯ ಅವರ ಸಹಿಯನ್ನು ದೇಹದ ಮೇಲೆ ಟ್ಯಾಟೂ (Tattoo) ಹಾಕಿಸಿಕೊಂಡಿದ್ದರು. ‘ವೈಎಂಸಿ’ ಎಂದು ಬರೆಯಿಸಿದ್ದ ಆ ಟ್ಯಾಟೂದ ವಿಸ್ತ್ರತರೂಪ ‘ಯೇ ಮಾಯಾ ಚೇಸಾವೆ’ ಎಂದು. ಇದು ಈ ಜೋಡಿಯ ಸೂಪರ್ ಹಿಟ್ ಸಿನಿಮಾ. ಜೊತೆಗೆ ನಾಗ ಚೈತನ್ಯ ಅವರ ಸಹಿಯನ್ನೂ ಹೊಟ್ಟೆಯ ಮೇಲೆ ಹಾಕಿಸಿಕೊಂಡಿದ್ದರು. ಡಿವೋರ್ಸ್ ನಂತರ ಆ ಟ್ಯಾಟೂವನ್ನುಉಳಿಸಿಕೊಂಡಿದ್ದಾರೆ ಸಮಂತಾ. ಇದನ್ನೂ ಓದಿ:ನಯನತಾರಾ ಬಗ್ಗೆ ಕನ್ನಡದ ‘ಗೂಳಿ’ ನಟಿ ಶಾಕಿಂಗ್ ಹೇಳಿಕೆ
ಇತ್ತೀಚೆಗೆ ಸಮಂತಾ ಸಾಕಷ್ಟು ಫೋಟೋಶೂಟ್ ಗಳಲ್ಲಿ ಭಾಗಿಯಾಗುತ್ತಿದ್ದರು. ಪ್ರತಿ ಫೋಟೋದಲ್ಲೂ ಹಾಟ್ ಹಾಟ್ ಆಗಿಯೇ ಕಾಣಿಸಿಕೊಂಡಿದ್ದಾರೆ. ಹಾಗಾಗಿ ನಾಗಚೈತನ್ಯ ಹಾಕಿರುವ ಟ್ಯಾಟೂ ಸಹಿ ಎದ್ದು ಕಾಣುತ್ತಿದೆ. ಇದನ್ನು ಕಂಡ ಅಭಿಮಾನಿಗಳು ಇನ್ನೂ ಯಾಕೆ ಅದನ್ನು ಇಟ್ಟುಕೊಂಡಿದ್ದೀರಿ? ದೂರವಾದ ನಂತರ ಅದನ್ನು ತೆಗೆಸಿ ಎಂದು ಒತ್ತಡ ಹೇರುತ್ತಿದ್ದಾರೆ. ಯಾವುದೇ ಫೋಟೋದಲ್ಲಿ ಟ್ಯಾಟೂ ಕಾಣಲಿ, ಆ ಫೋಟೋಗಳಿಗೆ ಕಾಮೆಂಟ್ ಹಾಕುವುದನ್ನು ಅಭಿಮಾನಿಗಳು ಮರೆಯುವುದಿಲ್ಲ.
ಸಮಂತಾ ಮತ್ತು ನಾಗಚೈತನ್ಯ ದೂರವಾದ ನಂತರ ಇಬ್ಬರೂ ಸಾಕಷ್ಟು ನೋವುಗಳನ್ನ ಅನುಭವಿಸಿದ್ದಾರೆ. ಅದರಲ್ಲೂ ಸಮಂತಾ ಡಿಪ್ರೆಷನ್ ಗೆ ಹೋಗಿದ್ದರು. ಮತ್ತೆ ಅದರಿಂದ ಆಚೆ ಬಂದು ಸಿನಿಮಾ ರಂಗದಲ್ಲಿ ಬ್ಯುಸಿಯಾಗಿದ್ದಾರೆ. ಅದರೂ ನಾಗ ಚೈತನ್ಯ ಅಭಿಮಾನಿಗಳು ಸೋಷಿಯಲ್ ಮೀಡಿಯಾದಲ್ಲಿ ಸಮಂತಾಗೆ ಆಗಾಗ್ಗೆ ಕಾಮೆಂಟ್ ಮೂಲಕ ಕೆಣಕುತ್ತಲೇ ಇರುತ್ತಾರೆ.