ನಟ, ನಿರ್ದೇಶಕ ರಕ್ಷಿತ್ ಶೆಟ್ಟಿ (Rakshit Shetty) ಮೊನ್ನೆಯಷ್ಟೇ ಹುಟ್ಟು ಹಬ್ಬವನ್ನು ಆಚರಿಸಿಕೊಂಡರು. ಈ ಸಂದರ್ಭದಲ್ಲಿ ಸೋಷಿಯಲ್ ಮೀಡಿಯಾ ಮೂಲಕ ಸಾಕಷ್ಟು ಜನರು ಅವರಿಗೆ ಶುಭ ಹಾರೈಸಿದ್ದಾರೆ. ಅದರಲ್ಲೂ ರುಕ್ಮಿಣಿ ವಸಂತ್ (Rukmini Vasanth) ಮಾಡಿರೋ ಪೋಸ್ಟ್ ಸಾಕಷ್ಟು ವೈರಲ್ ಆಗಿದ್ದು, ಸಪ್ತ ಸಾಗರದಾಚೆ ಎಲ್ಲೋ ಸಿನಿಮಾದ ಪ್ರಿಯಾ ಮತ್ತು ಮನು ಪಾತ್ರಗಳನ್ನು ಕಲ್ಪಿಸಿಕೊಂಡಿದ್ದಾರೆ ಫ್ಯಾನ್ಸ್.
ರಕ್ಷಿತ್ ಶೆಟ್ಟಿ ಹುಟ್ಟು ಹಬ್ಬಕ್ಕೆ ರುಕ್ಮಿಣಿ ವಸಂತ್ ಕ್ಯೂಟ್ ಆಗಿ ವಿಶ್ ಮಾಡಿದ್ದಾರೆ. ರುಕ್ಮಿಣಿ ಮಾಡಿರೋ ಪೋಸ್ಟ್ ಅಲ್ಲಿ ರಕ್ಷಿತ್ ಅವರನ್ನು ಸ್ವೀಟ್ ಆಗಿ ‘ರಕ್ಷ್’ ಎಂದು ಕರೆದಿದ್ದಾರೆ. ಅಷ್ಟೇ ಶಾರ್ಟ್ ಅಂಡ್ ಸ್ವೀಟ್ ಆಗಿ ರಕ್ಷಿತ್ ಕೂಡ ರುಕ್ಮಿಣಿ ಅವರಿಗೆ ‘ರುಕ್ಸ್’ ಎಂದು ಉತ್ತರಿಸಿದ್ದಾರೆ. ಈ ಅಕ್ಷರಗಳ ಸರಸವನ್ನು ಫ್ಯಾನ್ಸ್ ಮತ್ತೊಂದು ಹಂತಕ್ಕೆ ತಗೆದುಕೊಂಡು ಹೋಗಿದ್ದಾರೆ. ಕೆಲವರಂತೂ ನಿಮ್ಮ ಕ್ಯೂಟ್ ಕಪಲ್ ಬೇಗೆ ಮದುವೆ (Marriage) ಆಗಿ ಎಂದು ಕಾಮೆಂಟ್ ಮಾಡಿದ್ದಾರೆ.
ಸಿನಿಮಾ ಸೂಪರ್ ಹಿಟ್ ಆಗಿ ಯಶಸ್ವಿ ಜೋಡಿ ಅನಿಸಿಕೊಂಡಾಗ, ಅದರಲ್ಲೂ ನಟ ನಟಿಯರು ಬ್ಯಾಚ್ಯುಲರ್ ಆಗಿದ್ದಾಗ ಹೀಗೆ ಕಾಮೆಂಟ್ ಮಾಡೋದು ಸಹಜ. ಈ ಹಿಂದೆ ರಕ್ಷಿತ್ ಶೆಟ್ಟಿ ಜೊತೆ ಅನೇಕ ನಟಿಯರನ್ನು ಇದೇ ಫ್ಯಾನ್ಸ್ ಮದುವೆ ಮಾಡಿಸಿ ಆಗಿದೆ. ಈಗ ರುಕ್ಮಿಣಿ ಅವರನ್ನು ಎಳೆತರಲಾಗಿದೆ.
ಸಪ್ತ ಸಾಗರದಾಚೆ ಎಲ್ಲೋ ಸಿನಿಮಾದ ಯಶಸ್ಸಿ ನಂತರ ರಕ್ಷಿತ್ ಜೊತೆ ರುಕ್ಮಿಣಿಯ ಹೆಸರನ್ನು ತಳುಕು ಹಾಕೋದು ಇದೇ ಮೊದಲೇನೂ ಅಲ್ಲ. ರಕ್ಷಿತ್ ಮದುವೆ ವಿಚಾರ ಬಂದಾಗೆಲ್ಲ ಇತ್ತೀಚೆಗೆ ರುಕ್ಮಿಣಿ ಹೆಸರು ಕಾಣಿಸಿಕೊಳ್ಳುತ್ತಿದೆ. ಈಗ ರುಕ್ಸ್ ಅಂಡ್ ರಕ್ಷ್ ಟ್ರೆಂಡ್ ಆಗಿದೆ.