ಹ್ಯಾಮಿಲ್ಟನ್: ವಿರಾಟ್ ಕೊಹ್ಲಿ ಹಾಗೂ ಮಾಜಿ ನಾಯಕ ಧೋನಿ ಅವರ ಅನುಪಸ್ಥಿತಿಯಲ್ಲಿ ನ್ಯೂಜಿಲೆಂಡ್ ತಂಡವನ್ನು ಎದುರಿಸಿದ ಟೀಂ ಇಂಡಿಯಾದ ಯುವ ಪಡೆ 30.5 ಓವರ್ ಗಳಲ್ಲಿ 92 ರನ್ ಗಳಿಗೆ ಅಲೌಟ್ ಆಗಿ ಕಳಪೆ ಪ್ರದರ್ಶನವನ್ನು ನೀಡಿದೆ. ಇದರ ಬೆನ್ನಲ್ಲೇ ಇಂಗ್ಲೆಂಡ್ ಮಾಜಿ ಆಟಗಾರ ಮೈಕಲ್ ವಾನ್ ತಂಡದ ಕಳಪೆ ಬ್ಯಾಟಿಂಗ್ ಪ್ರದರ್ಶನವನ್ನು ವ್ಯಂಗ್ಯ ಮಾಡಿದ್ದಾರೆ.
ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಈ ಕುರಿತು ಟ್ವೀಟ್ ಮಾಡಿರುವ ವಾನ್, ಟೀಂ ಇಂಡಿಯಾ 92 ರನ್ ಗಳಿಗೆ ಅಲೌಟ್.. ಇಂದಿನ ದಿನಗಳಲ್ಲಿ 100 ರನ್ ಗಳಿಗಿಂತ ಕಡಿಮೆ ಮೊತ್ತಕ್ಕೆ ಅಲೌಟ್ ಆಗಿರುವುದನ್ನ ನಂಬಲು ಸಾಧ್ಯವಾಗುತ್ತಿಲ್ಲ ಎಂದು ವ್ಯಂಗ್ಯವಾಗಿ ಬರೆದುಕೊಂಡಿದ್ದರು. ವಾನ್ ಈ ಟ್ವೀಟ್‍ಗೆ ತಿರುಗೇಟು ಕೊಟ್ಟಿರುವ ಭಾರತದ ಕ್ರಿಕೆಟ್ ಅಭಿಮಾನಿಗಳು, ಕಳೆದ ವಾರ ವೆಸ್ಟ್ ಇಂಡೀಸ್ ವಿರುದ್ಧದ ಟೆಸ್ಟ್ ಪಂದ್ಯದ ಮೊದಲ ಇನ್ನಿಂಗ್ಸ್ ನಲ್ಲಿ ಇಂಗ್ಲೆಂಡ್ ತಂಡ ಕೇವಲ 77 ರನ್ ಗಳಿಗೆ ಆಲೌಟ್ ಆಗಿರುವುದನ್ನು ನೆನಪಿಸಿ ಟಾಂಗ್ ಕೊಟ್ಟಿದ್ದಾರೆ.
Advertisement
92 all out India … Can’t believe any team would get bowled out for under a 100 these days !!!!!!
— Michael Vaughan (@MichaelVaughan) January 31, 2019
Advertisement
ಟಾಸ್ ಗೆದ್ದು ಬೌಲಿಂಗ್ ಆಯ್ದುಕೊಂಡ ನ್ಯೂಜಿಲೆಂಡ್ ತಂಡದ ದಾಳಿಗೆ ತತ್ತರಿಸಿದ ಟೀಂ ಇಂಡಿಯಾ ಆಟಗಾರರು ಪೆವಿಲಿಯನ್ ಪರೇಡ್ ನಡೆಸಿದರು. ತಂಡದ ಸ್ಪಿನ್ನರ್ ಚಹಾಲ್ 37 ಎಸೆತಗಳಲ್ಲಿ 18 ರನ್ ಗಳಿಸಿದ್ದೇ ಟಾಪ್ ಸ್ಕೋರ್ ಆದ್ರೆ, ನಾಲ್ಕು ಮಂದಿ ಬ್ಯಾಟ್ಸ್ ಮನ್ ಗಳು ಮಾತ್ರ ಎರಡು ಅಂಕಿ ಮೊತ್ತ ದಾಟಿದರು. ಕೇವಲ 30.5 ಓವರ್ ಗಳಲ್ಲಿ ಟೀಂ ಇಂಡಿಯಾ 92 ರನ್ ಗಳಿಗೆ ಸರ್ವಪತನ ಕಂಡಿತು.
Advertisement
ನ್ಯೂಜಿಲೆಂಡ್ ಪರ 21 ರನ್ ನೀಡಿದ 5 ವಿಕೆಟ್ ಪಡೆದು ಟ್ರೆಂಟ್ ಬೌಲ್ಟ್ ಮಿಂಚಿದರು. ಉಳಿದಂತೆ ಗ್ರ್ಯಾಂಡ್ ಹೋಮ್ 26 ರನ್ ಕೊಟ್ಟು 3 ವಿಕೆಟ್ ಪಡೆದು ಟೀಂ ಇಂಡಿಯಾ ಪತನಕ್ಕೆ ಕಾರಣರಾದರು. ಇತ್ತ ಸುಲಭ ಮೊತ್ತ ಬೆನ್ನತ್ತಿದ್ದ ಕಿವೀಸ್ 14.4 ಓವರ್ ಗಳಲ್ಲಿ 2 ವಿಕೆಟ್ ಕಳೆದುಕೊಂಡು 212 ಎಸೆತ ಬಾಕಿ ಇರುವಂತೆಯೇ 8 ವಿಕೆಟ್ ಜಯ ಪಡೆಯಿತು.
Advertisement
ಕಿವೀಸ್ ವಿರುದ್ಧ ಕಳಪೆ ಪ್ರದರ್ಶನ: ಟೀಂ ಇಂಡಿಯಾ ಈಗಾಗಲೇ ಸರಣಿಯಲ್ಲಿ ಜಯ ಪಡೆದಿದ್ದರು ಕೂಡ, 92ಗೆ ಆಲೌಟ್ ಆಗುವ ಮೂಲಕ ನ್ಯೂಜಿಲೆಂಡ್ ತಂಡದ ವಿರುದ್ಧ ತಂಡದ ಅತ್ಯಂತ ಕಳಪೆ ಪ್ರದರ್ಶನ ನೀಡಿತು. ಟೀಂ ಇಂಡಿಯಾ 108 ರನ್ ಗಳಿಗೆ ಆಲೌಟ್ ಆಗಿದ್ದು, ಈ ಹಿಂದಿನ ಕಳಪೆ ಪದರ್ಶನ ಆಗಿತ್ತು. ಸೌರವ್ ಗಂಗೂಲಿ ನಾಯಕತ್ವದ ತಂಡ 2003ಲ್ಲಿ ನಡೆದ ಪಂದ್ಯದಲ್ಲಿ 108 ರನ್ ಗಳಿಗೆ ಆಲೌಟ್ ಆಗಿತ್ತು.
Can't believe any can bowlout on 77 this days..????????????????
— Hitesh raut (@IamHiteshraut) January 31, 2019
We know it is a bad score but it is better than 77 all out in test…. Have you ever tweeted that
— Dinesh (@rickydinesh86) January 31, 2019
A depleted Indian side without Kohli & Dhoni got all out for 91 vs 3rd Ranked team NZ
A full strength England team got all out for 77 vs 8th Ranked West Indies. :)))))
LoL… Really Unbelievable 🙂
— Umesh Bharat ???????? ???? (@magicumesh) January 31, 2019
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv