ತಮ್ಮ ಕೈ ಮೇಲೆ ʼThe Rising Woman’ ಸಿಂಬಲ್ ಎಂದು ಟ್ಯಾಟೋ ಬರೆಯಿಸಿಕೊಂಡಿದ್ದಾರೆ ನಟಿ ವೈಷ್ಣವಿ ಗೌಡ. ಆ ಫೋಟೋವನ್ನು ಅವರು ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡಿದ್ದಾರೆ. ಆ ಫೋಟೋ ಇದೀಗ ಸಾಕಷ್ಟು ಚರ್ಚೆಗೆ ಕಾರಣವಾಗಿದೆ. ಮತ್ತು ಅಭಿಮಾನಿಗಳು ಅವರು ಬರೆಯಿಸಿಕೊಂಡಿರುವ ಪದಗಳನ್ನು ಮೆಚ್ಚಿಕೊಂಡಿದ್ದಾರೆ. ಜೀವನ ಚೆನ್ನಾಗಿರಲಿ ಎಂದೂ ಹಾರೈಸಿದ್ದಾರೆ.
ತಾನು ಮದುವೆ ಆಗಬೇಕಿದ್ದ ಹುಡುಗನ ಕುರಿತಾದ ಆಡಿಯೋವೊಂದು ನಟಿ ವೈಷ್ಣವಿ ಗೌಡ ಮತ್ತು ನಟ ವಿದ್ಯಾಭರಣ್ ನಡುವಿನ ಬಾಂಧವ್ಯವನ್ನೇ ಹೊಸಕಿ ಹಾಕಿತ್ತು. ಆಡಿಯೋ ಬಂದಾಗಿನಿಂದ ವೈಷ್ಣವಿ ಗೌಡ ಯಾರ ಕಣ್ಣಿಗೂ ಬಿದ್ದಿರಲಿಲ್ಲ. ಮಗಳು ತುಂಬಾ ನೊಂದುಕೊಂಡಿದ್ದಾಳೆ. ಅವಳು ಅದರಿಂದ ಆಚೆ ಬರಲು ಸಾಕಷ್ಟು ಸಮಯ ಬೇಕು. ನಡೆದಿರುವ ಘಟನೆಯನ್ನು ಇಷ್ಟು ಬೇಗ ಅವಳು ಮರೆಯಲು ಸಾಧ್ಯವಿಲ್ಲ ಎಂದು ವೈಷ್ಣವಿ ತಾಯಿ ಮೊನ್ನೆಯಷ್ಟೇ ಹೇಳಿದ್ದರು. ಇದನ್ನೂ ಓದಿ: ಅಭಿಮಾನಿಗಳಿಗೆ ಗುಡ್ ನ್ಯೂಸ್ ಕೊಟ್ರು ಅನಿರುದ್ಧ್-ಅನು ಜೋಡಿ
ಆದರೆ, ವೈಷ್ಣವಿ ತುಂಬಾ ಗಟ್ಟಿಗಿತ್ತಿ. ಆಗಿರುವ ಎಲ್ಲ ಘಟನೆಗೆ ಕೇವಲ ಮೂರೇ ಮೂರು ದಿನಕ್ಕೆ ಗೋಲಿ ಹೊಡೆದು, ಟ್ಯಾಟೋ ಅಂಗಡಿಗೆ ಬಂದಿದ್ದಾರೆ. ಚಂದಾದ ಟ್ಯಾಟೋ ಹಾಕಿಸಿಕೊಂಡು ‘ದಿ ರೈಸಿಂಗ್ ವುಮನ್ʼ ಎಂದು ಸೋಷಿಯಲ್ ಮೀಡಿಯಾದಲ್ಲಿ ಬರೆದುಕೊಂಡಿದ್ದಾರೆ. ಈ ಮೂಲಕ ತಮ್ಮ ತಾಯಿ ಅಂದುಕೊಂಡಷ್ಟು ತಾವು ಅಧೈರ್ಯಳಲ್ಲ ಎನ್ನುವುದನ್ನು ತೋರಿಸಿದ್ದಾರೆ.
ಅಲ್ಲದೇ, ವೈಷ್ಣವಿ ಗೌಡ (Vaishnavi Gowda) ತಮ್ಮ ಅಭಿಮಾನಿಗಳಿಗೆ ಗುಡ್ ನ್ಯೂಸ್ ಕೊಟ್ಟಿದ್ದಾರೆ. ಮತ್ತೆ ಸನ್ನಿಧಿ ಅಲಿಯಾಸ್ ವೈಷ್ಣವಿ ಗೌಡ ಕಿರುತೆರೆಯತ್ತ ಮುಖ ಮಾಡಿದ್ದಾರೆ. ಹೊಚ್ಚ ಹೊಸ ಪಾತ್ರದ ಮೂಲಕ ಟಿವಿ ಪರದೆಯಲ್ಲಿ ಮಿಂಚಲು ರೆಡಿಯಾಗಿದ್ದಾರೆ. ಸ್ವಪ್ನ ಕೃಷ್ಣ ನಿರ್ದೇಶನದ ಸೀತಾರಾಮ ಧಾರಾವಾಹಿಯಲ್ಲಿ ನಾಯಕಿಯಾಗಿ ವೈಷ್ಣವಿ ಎಂಟ್ರಿ ಕೊಡ್ತಿದ್ದಾರೆ. ʻಮಂಗಳಗೌರಿ ಮದುವೆʼ(Mangala Gowri Maduve) ಖ್ಯಾತಿಯ ಗಗನ್ಗೆ ಜೋಡಿಯಾಗಿ ನಟಿ ಬರುತ್ತಿದ್ದಾರೆ. ಸಿನಿಮಾ ಮತ್ತು ಸೀರಿಯಲ್ ಎರಡನ್ನ ನಟಿ ಬ್ಯಾಲೆನ್ಸ್ ಮಾಡ್ತಿದ್ದಾರೆ. ಇದು ನಿಜಕ್ಕೂ ವೈಷ್ಣವಿ ಫ್ಯಾನ್ಸ್ಗೆ ಡಬಲ್ ನ್ಯೂಸ್ ಎಂದೇ ಹೇಳಬಹುದು.