ಮೈಸೂರು: ಚಾಂಪಿಯನ್ಸ್ ಟ್ರೋಫಿ ಫೈನಲ್ ಪಂದ್ಯಕ್ಕೆ ಕ್ಷಣಗಣನೆ ಶುರುವಾಗಿದ್ದು, ಭಾರತ ಹಾಗೂ ನ್ಯೂಜಿಲೆಂಡ್ ತಂಡಗಳ ನಡುವೆ ಟ್ರೋಫಿಗಾಗಿ ಹಣಾಹಣಿ ನಡೆಯಲಿದೆ. ಟೀಂ ಇಂಡಿಯಾ ಗೆಲುವಿಗಾಗಿ ಮೈಸೂರಿನಲ್ಲಿ (Mysuru) ಕ್ರಿಕೆಟ್ ಅಭಿಮಾನಿಗಳು ದೇವರಿಗೆ ವಿಶೇಷ ಪೂಜೆ ಸಲ್ಲಿಸಿದರು.
ಕ್ರಿಕೆಟ್ ಪ್ರೇಮಿಗಳಿಗಿಂದು ಸೂಪರ್ ಸಂಡೇಯಾಗಿದ್ದು, ಚಾಂಪಿಯನ್ಸ್ ಟ್ರೋಫಿ ಪಂದ್ಯ ವೀಕ್ಷಿಸಲು ಅಭಿಮಾನಿಗಳು ತುದಿಗಾಲಿನಲ್ಲಿ ನಿಂತಿದ್ದಾರೆ. ಭಾರತದ ಗೆಲುವಿಗಾಗಿ ಮೈಸೂರಿನಲ್ಲಿ ಅಭಿಮಾನಿಗಳು ದೇವರ ಮೊರೆ ಹೋಗಿದ್ದಾರೆ. ಅಗ್ರಹಾರದ ಗಣಪತಿ ದೇಗುಲದಲ್ಲಿ 101 ಈಡುಗಾಯಿ ಹೊಡೆದು ಹರಕೆ ಪೂರೈಸಿದರು. ಇದನ್ನೂ ಓದಿ: Champions Trophy 2025: ಮತ್ತೆರಡು ದಾಖಲೆಗಳ ಹೊಸ್ತಿಲಲ್ಲಿ ಚೇಸಿಂಗ್ ಮಾಸ್ಟರ್ ಕೊಹ್ಲಿ
ಅಭಿಮಾನಿಗಳು ಟೀಂ ಇಂಡಿಯಾ ಆಟಗಾರರ ಪೋಸ್ಟರ್ ಹಿಡಿದು ಘೋಷಣೆ ಕೂಗಿದರು. ನಾಯಕ ರೋಹಿತ್ ಶರ್ಮಾ, ವಿರಾಟ್ ಕೊಹ್ಲಿ, ಕನ್ನಡಿಗ ಕೆ.ಎಲ್.ರಾಹುಲ್ ಪೋಸ್ಟರ್ ಹಿಡಿದು ಘೋಷಣೆ ಹಾಕಿದರು. ಬಳಿಕ ಟೀಂ ಇಂಡಿಯಾ ಆಟಗಾರರಿಗೆ ಶಕ್ತಿ ನೀಡುವಂತೆ ವಿಘ್ನ ನಿವಾರಕನಿಗೆ ಪ್ರಾರ್ಥನೆ ಸಲ್ಲಿಸಿದರು. ಇದನ್ನೂ ಓದಿ: ಚಾಂಪಿಯನ್ಸ್ ಪಟ್ಟಕ್ಕಾಗಿ ದುಬೈನಲ್ಲಿ ಗುದ್ದಾಟ – ಟ್ರೋಫಿ ಗೆದ್ದು ಇತಿಹಾಸ ನಿರ್ಮಿಸಲು ಟೀಂ ಇಂಡಿಯಾ ಸನ್ನದ್ಧ
ಹೈವೋಲ್ಟೇಜ್ ಪಂದ್ಯಕ್ಕೆ ಕೌಂಟ್‌ಡೌನ್ ಶುರುವಾಗಿದೆ. ಐಸಿಸಿ ಚಾಂಪಿಯನ್ಸ್ ಟ್ರೋಫಿಯ ಫೈನಲ್‌ನಲ್ಲಿಂದು ಭಾರತ ಪಡೆ ನ್ಯೂಜಿಲೆಂಡ್ ತಂಡವನ್ನ ಎದುರಿಸಲಿದೆ. 25 ವರ್ಷಗಳ ಬಳಿಕ ಎರಡು ತಂಡಗಳು ಫೈನಲ್‌ನಲ್ಲಿ ಮುಖಾಮುಖಿಯಾಗುತ್ತಿದ್ದು, ವಿಶ್ವ ಕ್ರಿಕೆಟ್ ಚಾಂಪಿಯನ್‌ಶಿಪ್‌ಗಾಗಿ ಎರಡು ತಂಡಗಳು ಸೆಣಸಾಡಲಿವೆ. ಇದನ್ನೂ ಓದಿ: ಬೆಂಗಳೂರಲ್ಲಿ ಪ್ರೇಯಸಿ, ಆಕೆಯ ಮಗನನ್ನ ಹತ್ಯೆ ಮಾಡಿದ್ದ ಆರೋಪಿಗೆ ಜೀವಾವಧಿ ಶಿಕ್ಷೆ
ಇಡೀ ವಿಶ್ವದ ಚಿತ್ತವೇ ಇವತ್ತು ದುಬೈನತ್ತ ನೆಟ್ಟಿದೆ. ಚಾಂಪಿಯನ್ಸ್ ಪಟ್ಟಕ್ಕಾಗಿ ಇಂದು ದುಬೈ ರಣಾಂಗಣದಲ್ಲಿ ಮಹಾಕದನವೇ ನಡೆಯಲಿದೆ. ಒಂದೆಡೆ ಸೋಲಿಗೆ ಪ್ರತೀಕಾರವಾದರೆ, ಮತ್ತೊಂದೆಡೆ 12 ವರ್ಷಗಳ ಬಳಿಕ ಚಾಂಪಿಯನ್ ಪಟ್ಟಕ್ಕೇರಲು ಟೀಂ ಇಂಡಿಯಾ ಸನ್ನದ್ಧವಾಗಿದೆ.