ಕಪ್ಪು ಬಟ್ಟೆ ಮೇಲೆ MES ಎಂದು ಬರೆದು ಚಪ್ಪಲಿ ಏಟು ಕೊಟ್ಟ ರಾಯಣ್ಣನ ಅಭಿಮಾನಿಗಳು

Advertisements

ಧಾರವಾಡ: ಬೆಳಗಾವಿಯಲ್ಲಿ ಎಂಇಎಸ್ ಪುಂಡಾಟಿಕೆ ಮೆರೆದು ಸಂಗೊಳ್ಳಿ ರಾಯಣ್ಣನ ಮೂರ್ತಿ ಭಗ್ನ ಮಾಡಿದ್ದಕ್ಕೆ ಧಾರವಾಡದಲ್ಲಿ ರಾಯಣ್ಣನ ಅಭಿಮಾನಿಗಳು ಎಂಇಎಸ್ ಎಂದು ಕಪ್ಪು ಬಟ್ಟೆ ಮೇಲೆ ಬರೆದು ಚಪ್ಪಲಿ ಏಟು ಕೊಟ್ಟಿದ್ದಾರೆ.

Advertisements

ಧಾರವಾಡ ಜಿಲ್ಲಾಧಿಕಾರಿ ಕಚೇರಿ ಎದುರು ಎಂಇಎಸ್ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದ ರಾಯಣ್ಣನ ಅಭಿಮಾನಿಗಳು, ಕಪ್ಪು ಬಟ್ಟೆ ಮೇಲೆ ಎಂಇಎಸ್ ಎಂದು ಬರೆದು ಚಪ್ಪಲಿಯಿಂದ ಹೊಡೆದರು. ಇದೇ ವೇಳೆ ಎಂಇಎಸ್ ಅನ್ನು ಬ್ಯಾನ್ ಮಾಡಬೇಕು ಎಂದು ಒತ್ತಾಯಿಸಿದರು. ತಕ್ಷಣ ರಾಯಣ್ಣನ ಮೂರ್ತಿ ಭಗ್ನ ಮಾಡಿದವರನ್ನು ಬಂಧಿಸಿ ಕ್ರಮ ಕೈಗೊಳ್ಳಲು ಜಿಲ್ಲಾಧಿಕಾರಿಗಳ ಮೂಲಕ ಸರ್ಕಾರಕ್ಕೆ ಮನವಿ ಮಾಡಿದರು. ಇದನ್ನೂ ಓದಿ: ಬೆಳಗಾವಿಯಲ್ಲಿ MES ಪುಂಡರ ದಾಂಧಲೆ – ರಾತ್ರಿ ಏನೇನು ಮಾಡಿದ್ದಾರೆ?

Advertisements

ಎಂಇಎಸ್ ಎಂದು ಕಪ್ಪು ಬಟ್ಟೆ ಸುಡುವ ಪ್ರಯತ್ನಕ್ಕೆ ಬಂದಿದ್ದ ಪ್ರತಿಭಟನಾಕಾರರಿಗೆ ಪೊಲೀಸರು ಅವಕಾಶ ನೀಡದ ಹಿನ್ನೆಲೆ ಪ್ರತಿಭಟನಾಕಾರರು ಚಪ್ಪಲಿ ಏಟು ಕೊಟ್ಟರು. ಎಂಇಎಸ್ ಪುಂಡಾಟಿಕೆ ದಿನೇ-ದಿನೇ ಹೆಚ್ಚಾಗುತ್ತಿದ್ದು, ಅವರ ವಿರುದ್ಧ ಸರಿಯಾದ ಕ್ರಮ ತೆಗೆದುಕೊಳ್ಳುವಂತೆ ರಾಯಣ್ಣನ ಅಭಿಮಾನಿಗಳು ಆಗ್ರಹಿಸಿದ್ದಾರೆ. ಈ ಹಿನ್ನೆಲೆ ಎಂಇಎಸ್ ವಿರುದ್ಧ ಸರಿಯಾದ ಕ್ರಮವನ್ನು ತೆಗೆದುಕೊಳ್ಳುವುದಾಗಿ ಭರವಸೆಯನ್ನು ನೀಡಲಾಗಿದೆ.

Advertisements
Advertisements
Exit mobile version