ಬೆಂಗಳೂರು: ವಿಶ್ವದ ನಂಬರ್ ಒನ್ ವೇಗದ ಬೌಲರ್ ಪಟ್ಟ ಅಲಂಕರಿಸಿರುವ ಜಸ್ಪ್ರೀತ್ ಬುಮ್ರಾ ಅವರ ಬೌಲಿಂಗ್ ಶೈಲಿಯನ್ನು ಹಿರಿಯ ವಯಸ್ಸಿನ ಮಹಿಳೆಯೊಬ್ಬರು ಅನುಕರಿಸಿದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
@himsini ಹೆಸರಿನಲ್ಲಿರುವ ಹ್ಯಾಂಡಲ್ ಒಂದು ಬುಮ್ರಾ ಅವರಿಂದ ಪ್ರೇರಣೆಯಾಗಿರುವ ಮಹಿಳೆಯೊಬ್ಬರು ಬುಮ್ರಾ ಬೌಲಿಂಗ್ ಶೈಲಿಯನ್ನು ಅನುಸರಿಸುತ್ತಿರುವ ವಿಡಿಯೋವನ್ನು ಟ್ವೀಟ್ ಮಾಡಿದ್ದರು.
This made my day ???? https://t.co/ZPLq0gSVzk
— Jasprit Bumrah (@Jaspritbumrah93) July 13, 2019
ಈ ಟ್ವೀಟ್ ಅನ್ನು ಬುಮ್ರಾ ಟ್ವೀಟ್ ಮಾಡಿ ಈ ವಿಡಿಯೋ ನೋಡಿ ಸಂತೋಷ ಪಟ್ಟೆ ಎಂದು ಅರ್ಥ ಬರುವ “This made my day” ಎಂದು ಟೈಪ್ ಮಾಡಿ ನಗುವ ಇಮೋಜಿ ಹಾಕಿ ಟ್ವೀಟ್ ಮಾಡಿದ್ದಾರೆ. ಬುಮ್ರಾ ಅವರ ಟ್ವೀಟ್ ಅನ್ನು 69 ಸಾವಿರ ಜನ ಲೈಕ್ ಮಾಡಿದರೆ, 5.3 ಸಾವಿರ ಜನ ರಿಟ್ವೀಟ್ ಮಾಡಿದ್ದಾರೆ.
ಈ ಬಾರಿಯ ವಿಶ್ವಕಪ್ ನಲ್ಲಿ ಬುಮ್ರಾ 18 ವಿಕೆಟ್ ಪಡೆದಿದ್ದಾರೆ. ಐಸಿಸಿ ಏಕದಿನ ಶ್ರೇಯಾಂಕ ಪಟ್ಟಿಯಲ್ಲಿ 814 ಅಂಕಗಳೊಂದಿಗೆ ಬುಮ್ರಾ ಮೊದಲ ಸ್ಥಾನದಲ್ಲಿದ್ದರೆ, 758 ಅಂಕಗಳೊಂದಿಗೆ ನ್ಯೂಜಿಲೆಂಡಿನ ಟ್ರೆಂಟ್ ಬೌಲ್ಟ್ 758 ಅಂಕಗಳೊಂದಿಗೆ 2ನೇ ಸ್ಥಾನದಲ್ಲಿದ್ದಾರೆ.