ಕೆಜಿಎಫ್ 2 ಸಿನಿಮಾದ ನಿರ್ಮಾಪಕ ವಿಜಯ್ ಕಿರಗಂದೂರ್ ಅವರಿಗೆ ಖುದ್ದು ಪ್ರಧಾನಿ ನರೇಂದ್ರ ಮೋದಿ ಅವರೇ ಪತ್ರ ಬರೆದು, ಸಿನಿಮಾದ ಅಪ್ ಡೇಟ್ ಕೇಳಿ ಬೆಚ್ಚಿ ಬೀಳಿಸಿದ್ದಾರೆ. ಹೌದು, “ಕೆಜಿಎಫ್ 2 ಸಿನಿಮಾದ ಅಪ್ ಡೇಟ್ ಏನು? ಮಿಲಿಯನ್ ಗಟ್ಟಲೇ ಅಭಿಮಾನಿಗಳು ಈ ಸಿನಿಮಾದ ಕುರಿತು ತಿಳಿದುಕೊಳ್ಳಲು ಕಾತುರರಾಗಿದ್ದಾರೆ. ಕೂಡಲೇ ಅಪ್ ಡೇಟ್ ನೀಡಬೇಕು” ಎಂದು ಪ್ರಧಾನ ಮಂತ್ರಿಗಳ ಲೆಟರ್ ಹೆಡ್ ನಲ್ಲಿಯ ಪತ್ರ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಯಿತು. ಇದನ್ನೂ ಓದಿ : ಅಶರೀರವಾಣಿ ಆಲ್ಬಂಗೆ ನೀನಾಸಂ ಸತೀಶ್ ಸಿಂಗರ್ : ಮಗಳೊಂದಿಗೆ ಹಾಡಿದ ಸ್ಟಾರ್ ನಟ
Advertisement
ಸುಮ್ಮನೆ ಇದ್ದರೆ ಈ ಪತ್ರಕ್ಕೆ ಅಷ್ಟೊಂದು ಮಹತ್ವ ಬರುತ್ತಿತ್ತೋ ಇಲ್ಲವೋ? ಆದರೆ, ಹೊಂಬಾಳೆ ಫಿಲ್ಮ್ಸ್ ಟಿಟ್ವರ್ ಖಾತೆಯಿಂದ ಅದಕ್ಕೆ ಪ್ರತಿಕ್ರಿಯೆ ಕೂಡ ಬಂತು. ಹಾಗಾಗಿ ಅಭಿಮಾನಿಗಳಿಗೆ ಕುತೂಹಲ ಹೆಚ್ಚಾಯಿತು. ಅರೇ, ಪ್ರಧಾನಿ ಅವರೇ ಅಪ್ ಡೇಟ್ ಕೇಳಿದ್ರಾ ಎನ್ನುವ ಅಚ್ಚರಿ ಬೇರೆ. ಇದನ್ನೂ ಓದಿ : ನಾನು ರಾಧಿಕಾ ಕುಮಾರಸ್ವಾಮಿ’.. ನಿಮ್ಮೊಂದಿಗೆ..
Advertisement
Advertisement
ಪ್ರಧಾನಿ ಅವರ ಲೆಟರ್ ಹೆಡ್ ಬಳಿಸಿಕೊಂಡು ವೈರಲ್ ಆದ ಪತ್ರದ ಅಸಲಿಯತ್ತೇ ಬೇರೆಯಿದೆ. ಯಾರೋ ಫ್ಯಾನ್ಸ್ ಈ ಕಿರಿಕ್ ಕೆಲಸ ಮಾಡಿದ್ದು, ಈಗಲಾದರೂ ನಿರ್ಮಾಪಕರು ಉತ್ತರಿಸುತ್ತಾರಾ ಎನ್ನುವುದು ಅದರ ಹಿಂದಿನ ಉದ್ದೇಶವಾಗಿತ್ತು. ಸಿನಿಮಾ ಟೀಮ್ ಕೂಡ ಅದನ್ನು ಫನ್ನಿಯಾಗಿ ತಗೆದುಕೊಂಡಿದ್ದರು. ಇದನ್ನೂ ಓದಿ : ಜೈಲಿನಲ್ಲಿ ಚೇತನ್ ಕೂಲ್ ಆಗಿದ್ದಾರೆ : ಪತ್ನಿ ಮೇಘಾ
Advertisement
ಕೆಜಿಎಫ್ 2 ಸಿನಿಮಾದ ಬಿಡುಗಡೆ ದಿನಾಂಕ ಹೊರತಾಗಿ ಬೇರೆ ಯಾವ ಸುದ್ದಿಯನ್ನೂ ಈವರೆಗೂ ಚಿತ್ರತಂಡದಿಂದ ಬಂದಿಲ್ಲ. ಹಾಗಾಗಿ ಅಭಿಮಾನಿಗಳಿಗೆ ಬೇಸರವಾಗಿ ಈ ಮಾರ್ಗದ ಮೂಲಕ ಅಪ್ ಡೇಟ್ ಕೇಳುವ ಪ್ರಯತ್ನ ಮಾಡಿದ್ದಾರೆ.