ಬೆಂಗಳೂರು: ನಗರಕ್ಕೆ ಬಂದಿದ್ದ ನಟ ಜ್ಯೂ.ಎನ್ಟಿಆರ್ (N. T. Rama Rao Jr.) ನೋಡಲು ಫ್ಯಾನ್ಸ್ ಮುಗಿಬಿದ್ದಿದ್ದಾರೆ. ಈ ವೇಳೆ ಪೊಲೀಸರು ಜನರನ್ನು ನಿಯಂತ್ರಿಸಲು ಲಘು ಲಾಠಿಚಾರ್ಜ್ ಮಾಡಿದ್ದಾರೆ.
ಮಹದೇವಪುರದ (Mahadevapura) ನೂತನ ಕಿಮ್ಸ್ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ಉದ್ಘಾಟನೆಗೆ ಜ್ಯೂ.ಎನ್‌ಟಿಆರ್ ಆಗಮಿಸಿದ್ದರು. ಈ ವೇಳೆ ತಮ್ಮ ನೆಚ್ಚಿನ ನಟನನ್ನು ನೋಡಲು ಫ್ಯಾನ್ಸ್ ಆಸ್ಪತ್ರೆ ಒಳಗಡೆ ನುಗ್ಗಿದ್ದಾರೆ. ಈ ವೇಳೆ ನೂಕುನುಗ್ಗಲು ಉಂಟಾಗಿದೆ. ಇದರಿಂದ ಎಸ್ಕಲೇಟರ್ ಮುರಿದು ಹೋಗಿದೆ. ಇದನ್ನೂ ಓದಿ: ದುರಂಧರ್ 2 ಟ್ರೈಲರ್ ರಿಲೀಸ್ – ರಿವೆಂಜ್ ಮೋಡ್‌ನಲ್ಲಿ ರಣವೀರ್ ಸಿಂಗ್
ಸಾವಿರಾರು ಸಂಖ್ಯೆಯಲ್ಲಿ ಸೇರಿದ್ದ ಅಭಿಮಾನಿಗಳನ್ನು ನಿಯಂತ್ರಿಸಲು ಪೊಲೀಸರು ಹರಸಾಹಸಪಟ್ಟಿದ್ದಾರೆ. ನಿಯಂತ್ರಣಕ್ಕೆ ಬರದಿದ್ದಾಗ, ಲಘ ಲಾಠಿ ಪ್ರಹಾರ ಮಾಡಿ ಜನರನ್ನು ನಿಯಂತ್ರಣಕ್ಕೆ ತಂದಿದ್ದಾರೆ. ಇದನ್ನೂ ಓದಿ: ಬೆದರಿಕೆ, ನಿಂದನೆ ಆರೋಪ – ಬಿಗ್‌ಬಾಸ್ ಮಾಜಿ ಸ್ಪರ್ಧಿ ರಜತ್ ವಿರುದ್ಧ FIR

