`ಪಠಾಣ್’ ಸೂಪರ್ ಸ್ಟಾರ್ ಶಾರುಖ್ ಖಾನ್ಗೆ (Sharukh Khan) ಅಪಾರ ಅಭಿಮಾನಿಗಳಿದ್ದಾರೆ. ಅವರ ಮನ್ನತ್ ನಿವಾಸದ ಮುಂದೆ ಸದಾ ಜಾತ್ರೆಯಂತೆ ಅಭಿಮಾನಿಗಳು ಒಟ್ಟಾಗಿರುತ್ತಾರೆ. ಶಾರುಖ್ನ ಮೀಟ್ ಮಾಡಲೆಂದೇ ಮನೆಯ ಬಳಿ ಫ್ಯಾನ್ಸ್ ಕಾಯುತ್ತಿರುತ್ತಾರೆ. ಇದೀಗ ನೆಚ್ಚಿನ ನಟ ಶಾರುಖ್ನ ನೋಡಲು ಮನೆಗೆ ನುಗ್ಗಿದ ಅಭಿಮಾನಿ ವಿರುದ್ಧ ಪ್ರಕರಣ ದಾಖಲಾಗಿದೆ.
ನಟ-ನಟಿಯರನ್ನ ಮೀಟ್ ಮಾಡೋಕೆ ಫ್ಯಾನ್ಸ್ (Fans)ನಾನಾ ತರಹದ ಕಸರತ್ತು ನಡೆಸುತ್ತಾರೆ. ಇದಕ್ಕಾಗಿ ಅವರು ಯಾವ ಹಂತಕ್ಕೆ ಹೋಗೋಕೂ ರೆಡಿ ಇರುತ್ತಾರೆ. ಈಗಲೂ ಹಾಗೆಯೇ ಆಗಿದೆ. ಶಾರುಖ್ ಖಾನ್ ಅವರನ್ನು ಭೇಟಿ ಮಾಡೋಕೆ ಗುಜರಾತ್ನಿಂದ (Gujrat) ಇಬ್ಬರು ಬಂದಿದ್ದಾರೆ. ಮನ್ನತ್ ನಿವಾಸದ ಹೊರಗೆ ಅವರು ಪಠಾಣ್ ಹೋರೋಗಾಗಿ ಕಾದು ನಿಂತಿದ್ದರು. ಆದರೆ, ಶಾರುಖ್ ಬರುವ ಸೂಚನೆ ಸಿಕ್ಕಿಲ್ಲ. ಹೀಗಾಗಿ, ಅವರು ಮನೆಯ ಗೋಡೆ ಏರಿ ನಿವಾಸದ ಆವರಣಕ್ಕೆ ಜಿಗಿದಿದ್ದಾರೆ. ಇದನ್ನೂ ಓದಿ: ಸದ್ದಿಲ್ಲದೇ ʻಟೋಬಿʼ ಚಿತ್ರದ ಶೂಟಿಂಗ್ ಮುಗಿಸಿದ ರಾಜ್ ಬಿ ಶೆಟ್ಟಿ
ಇದನ್ನು ನೋಡಿದ ಭದ್ರತಾ ಸಿಬ್ಬಂದಿ, ಅವರನ್ನು ಹಿಡಿದು ಪೊಲೀಸರಿಗೆ ನೀಡಿದ್ದಾರೆ. ಇಬ್ಬರ ವಿರುದ್ಧ ಕೇಸ್ ದಾಖಲು ಮಾಡಿಕೊಂಡಿದ್ದಾರೆ. ಓರ್ವ 20 ವರ್ಷದವನು, ಮತ್ತೋರ್ವ 22 ವರ್ಷದವನು. `ನಾವು ಶಾರುಖ್ ಖಾನ್ ಅಭಿಮಾನಿಗಳು. ಅವರನ್ನು ಭೇಟಿ ಆಗೋಕೆ ಈ ರೀತಿ ಮಾಡಿದೆವು’ ಎಂದು ಅವರು ಹೇಳಿಕೊಂಡಿದ್ದಾರೆ. ಇದರ ಹಿಂದೆ ಬೇರೆ ಯಾವುದಾದರೂ ಉದ್ದೇಶ ಇದೆಯೇ ಎಂಬುದರ ಬಗ್ಗೆ ತನಿಖೆ ನಡೆಯುತ್ತಿದೆ.
ಶಾರುಖ್ ಖಾನ್ ಹಲವು ವರ್ಷಗಳ ಬಳಿಕ ಪಠಾಣ್ ಚಿತ್ರದ ಮೂಲಕ ಸೂಪರ್ ಸಕ್ಸಸ್ ಸಿಕ್ಕಿದೆ. ವಿಶ್ವದೆಲ್ಲೆಡೆ 1000 ಕೋಟಿ ರೂ. ಬಾಚಿದ್ರೆ ಹಿಂದಿ ಬಾಕ್ಸಾಫೀಸ್ನಲ್ಲಿ ಪಠಾಣ್ 509 ಕೋಟಿ ರೂ. ಕಲೆಕ್ಷನ್ ಮಾಡಿ ಗೆದ್ದು ಬೀಗಿದೆ.