ರೇಣುಕಾಸ್ವಾಮಿ ಕೊಲೆ ಪ್ರಕರಣ (Renukaswamy Murder Case) ಸಂಬಂಧ ದರ್ಶನ್‌ಗೆ (Darshan) ಇಂದು (ಡಿ.13) ಜಾಮೀನು ಸಿಕ್ಕಿದೆ. ಈ ಹಿನ್ನೆಲೆ ದರ್ಶನ್ ನಿವಾಸದ ಮುಂದೆ ಅಭಿಮಾನಿಗಳು ಸಂಭ್ರಮಿಸುತ್ತಿದ್ದಾರೆ. ಇದನ್ನೂ ಓದಿ:ನಟ ಅನ್ನೋ ಕಾರಣಕ್ಕೆ ಆರೋಪ ಹೊರಿಸುವುದು ನೋಡಿದರೆ ಬೇಸರವಾಗುತ್ತದೆ: ರಶ್ಮಿಕಾ ಮಂದಣ್ಣ
ನೆಚ್ಚಿನ ನಟ ದಾಸ ದರ್ಶನ್‌ಗೆ ಬೇಲ್ ಸಿಕ್ಕಿರೋದು ಅಭಿಮಾನಿಗಳ ಸಂಭ್ರಮ ಮನೆ ಮಾಡಿದೆ. ಅನೇಕ ಕಡೆಗಳಲ್ಲಿ ದರ್ಶನ್ ಫೋಟೋಗೆ ಹಾಲಿನ ಅಭಿಷೇಕ ಮಾಡಿ ಸಂಭ್ರಮಿಸುತ್ತಿದ್ದಾರೆ. ಆರ್ ಆರ್ ನಗರದ ನಟನ ನಿವಾಸದ ಮುಂದೆ ತೂಗುದೀಪ ನಿಲಯ ನೇಮ್ ಬೋರ್ಡ್ಗೆ ಹೂ ಹಾರ ಹಾಕಿ ಸಂಭ್ರಮಿಸುತ್ತಿರುವ ಫ್ಯಾನ್ಸ್. ಅದಷ್ಟೇ ಅಲ್ಲ, ಬಿಜಿಎಸ್ ಆಸ್ಪತ್ರೆ ಮುಂದೆ ಕೂಡ ಫೋಟೋ ಹಿಡಿದು ಫ್ಯಾನ್ಸ್ ಸಂಭ್ರಮಿಸಿದ್ದಾರೆ.
ದರ್ಶನ್ ಮನೆ ಮುಂದೆ ಅಭಿಮಾನಿಗಳು ಜಮಾಯಿಸಿದ್ದಾರೆ. ಘೋಷಣೆ ಕೂಗಿ ಅಭಿಮಾನಿಗಳು ಖುಷಿ ವ್ಯಕ್ತಪಡಿಸುತ್ತಿದ್ದಾರೆ. ಅದಷ್ಟೇ ಅಲ್ಲ, ಜನರಿಗೆ ಸ್ವೀಟಿ ನೀಡಿ ಸಂಭ್ರಮಿಸುತ್ತಿದ್ದಾರೆ.