ಹಾವೇರಿ: ರಾಕಿಂಗ್ ಸ್ಟಾರ್ ಯಶ್ ಅವರ 34ನೇ ಹುಟ್ಟುಹಬ್ಬವನ್ನ ಹಾವೇರಿ ಜಿಲ್ಲೆಯ ರಾಣೇಬೆನ್ನೂರಿನ ಯಶ್ ಅಭಿಮಾನಿಗಳು ಅಂಗನವಾಡಿ ಶಾಲಾ ಮಕ್ಕಳಿಗೆ ಶಾಲಾ ಬ್ಯಾಗ್ ಹಾಗೂ ನಿರಾಶ್ರಿತ ಜನರಿಗೆ ಹೊದಿಕೆ ನೀಡುವ ಮೂಲಕ ಅರ್ಥಪೂರ್ಣವಾಗಿ ಆಚರಣೆ ಮಾಡಿದ್ದಾರೆ.
ರಾಣೇಬೆನ್ನೂರು ನಗರದ ರೈಲು ನಿಲ್ದಾಣ ಹಾಗೂ ಬಸ್ ನಿಲ್ದಾಣ ಸೇರಿದಂತೆ ದೇವಸ್ಥಾನದ ಬಳಿ ಇರುವ ಐವತ್ತಕ್ಕೂ ಅಧಿಕ ನಿರಾಶ್ರಿತರಿಗೆ ರಾತ್ರಿ ಸುಮಾರು 12 ಗಂಟೆಗೆ ವೇಳೆಗೆ ಯಶ್ ಅಭಿಮಾನಿಗಳು ಹೊದಿಕೆ ನೀಡುವ ಮೂಲಕ ರಾಕಿಭಾಯ್ ಹುಟ್ಟುಹಬ್ಬವನ್ನು ಆಚರಿಸಿ ಖುಷಿಪಟ್ಟರು.
ಬೆಳಗ್ಗೆ ನಗರದಲ್ಲಿರುವ ಸರ್ಕಾರಿ ಅಂಗನವಾಡಿಯ 50 ಮಕ್ಕಳಿಗೆ ಶಾಲಾ ಬ್ಯಾಗ್ ನೀಡುವ ಮೂಲಕ ಅರ್ಥಪೂರ್ಣವಾಗಿ ಯಶ್ ಹುಟ್ಟುಹಬ್ಬವನ್ನು ಆಚರಣೆ ಮಾಡಿದರು. ಯಶ್ ಹುಟ್ಟುಹಬ್ಬ ಆಚರಣೆಯಲ್ಲಿ ರಾಣೇಬೆನ್ನೂರು ಅಭಿಮಾನಿ ಬಳಗದ ಗುಡ್ಡೇಶ್, ಕೃಷ್ಣಾ, ಮಲ್ಲಿಕ್ ಹಾಗೂ ಪ್ರವೀಣ ಚವ್ಹಾಣ್ ಸೇರಿದಂತೆ ಇತರೆ ಅಭಿಮಾನಿಗಳು ಉಪಸ್ಥಿತರಿದ್ದರು.