ಕೊಲೆ ಪ್ರಕರಣದ ಸಂಬಂಧ ನ್ಯಾಯಾಂಗ ಬಂಧನದಲ್ಲಿದ್ದ ದರ್ಶನ್‌ಗೆ (Darshan) ಇಂದು (ಅ.30) 6 ವಾರಗಳ ಕಾಲ ಜಾಮೀನು (Bail) ಸಿಕ್ಕ ಹಿನ್ನೆಲೆ ಜೈಲಿನಿಂದ ಬಿಡುಗಡೆಯಾಗಿದ್ದಾರೆ. ಇದೇ ಖುಷಿಯಲ್ಲಿ ಬೆಂಗಳೂರಿನ ಮಹಾಲಕ್ಷ್ಮಿ ಲೇಔಟ್‌ನಲ್ಲಿ ಪಟಾಕಿ ಸಿಡಿಸಿ ಅಭಿಮಾನಿಗಳು ಸಂಭ್ರಮಿಸಿದ್ದಾರೆ. ಇದನ್ನೂ ಓದಿ:ಮತ್ತೊಂದು ಮೈಲಿಗಲ್ಲು ಸೃಷ್ಟಿಸಲು ‘ಕಾಂತಾರ’ ಸ್ಟಾರ್ ರೆಡಿ- ಹನುಮಂತನ ಪಾತ್ರದಲ್ಲಿ ರಿಷಬ್ ಶೆಟ್ಟಿ ಮೋಡಿ
ದರ್ಶನ್ ಜೈಲಿನಿಂದ ಬಿಡುಗಡೆಯಾಗಿದ್ದೇ ತಡ ಡಿಬಾಸ್ ಅಭಿಮಾನಿಗಳ ಖುಷಿ ಮುಗಿಲು ಮುಟ್ಟಿದೆ. ಹಾಗಾಗಿ ಬೆಂಗಳೂರಿನ ಮಹಾಲಕ್ಷ್ಮಿ ಲೇಔಟ್‌ನಲ್ಲಿ ನಟನ 20 ಅಡಿ ಮತ್ತು 10 ಅಡಿ ಎತ್ತರದ ಕಟೌಟ್ ನಿರ್ಮಿಸಿದ್ದಾರೆ. ಜೊತೆಗೆ ಪಟಾಸಿ ಸಿಡಿಸಿ ನಟನ ಹೆಸರಲ್ಲಿ ಅನ್ನದಾನ ಮತ್ತು ಸಿಹಿ ತಿನಿಸುಗಳನ್ನು ಏರಿಯಾದ ಜನರಿಗೆ ಫ್ಯಾನ್ಸ್ ಹಂಚಿದ್ದಾರೆ.
ಇನ್ನೂ ದರ್ಶನ್ ಕುಟುಂಬದಲ್ಲೂ ಸಂಭ್ರಮ ಮನೆ ಮಾಡಿದೆ. ಆರ್‌ಆರ್ ನಗರ ನಟನ ನಿವಾಸದ ಬಳಿ ಪೊಲೀಸ್ ಭದ್ರತೆ ನೀಡಲಾಗಿದೆ. ದೀಪಾವಳಿ ಸಂದರ್ಭದಲ್ಲಿ ದರ್ಶನ್ ಪುತ್ರನಿಗೂ ಡಬಲ್ ಧಮಾಕ ಸಿಕ್ಕಂತಾಗಿದೆ. ತಂದೆಯ ಜೊತೆ ಅ.31ರಂದು ಹುಟ್ಟುಹಬ್ಬ ಮತ್ತು ದೀಪಾವಳಿ ಹಬ್ಬದ ಡಬಲ್ ಸೆಲೆಬ್ರೇಶನ್ ಮಾಡಲಿದ್ದಾರೆ ವಿನೀಶ್.