ಖಾಸಗಿ ಸಂಸ್ಥೆಯೊಂದು ಕನ್ನಡದ ಟಾಪ್ ನಟಿಯರು ಯಾದಿಯನ್ನು ಇಂದು ಬಿಡುಗಡೆ ಮಾಡಿದೆ. ಈ ಯಾದಿಯಲ್ಲಿ ನಟಿ ರಾಧಿಕಾ ಪಂಡಿತ್ ಅವರಿಗೆ ಮೂರನೇ ಸ್ಥಾನ ಸಿಕ್ಕಿದೆ. ಹಲವು ವರ್ಷಗಳಿಂದ ಅವರು ಸಿನಿಮಾ ಮಾಡದೇ ಇದ್ದರೆ ಇನ್ನೂ ಅಭಿಮಾನಿಗಳು ಅವರನ್ನು ಆರಾಧಿಸುತ್ತಿದ್ದಾರೆ. ಜೊತೆಗೆ ಆದಷ್ಟು ಬೇಗ ರಾಧಿಕಾ ಸಿನಿಮಾ ರಂಗಕ್ಕೆ ಮರಳಲಿ ಎಂದು ಮನವಿ ಮಾಡಿದ್ದಾರೆ.
ಇಂದು ಖಾಸಗಿ ಸಂಸ್ಥೆಯು ಬಿಡುಗಡೆ ಮಾಡಿರುವ ಪಟ್ಟಿಯಲ್ಲಿ ಇಬ್ಬರು ಅಚ್ಚರಿಯ ನಟಿಯರು ಕಾಣಿಸಿಕೊಂಡಿದ್ದು ಕಳೆದ ಎಂಟು ವರ್ಷಗಳಿಂದ ಸಿನಿಮಾ ರಂಗದಿಂದಲೇ ದೂರು ಇರುವ ರಮ್ಯಾ ಕೂಡ ಟಾಪ್ 4ನೇ ಸ್ಥಾನದಲ್ಲಿದ್ದಾರೆ. ಹೀಗಾಗಿ ರಾಧಿಕಾ ಪಂಡಿತ್ ಮತ್ತು ರಮ್ಯಾ ಅವರನ್ನು ಅಭಿಮಾನಿಗಳು ಮರೆಯುವುದಕ್ಕೆ ಸಾಧ್ಯವೇ ಇಲ್ಲ ಎನ್ನುವುದನ್ನು ಈ ಇಬ್ಬರೂ ಕಲಾವಿದರು ನಿರೂಪಿಸಿದ್ದಾರೆ. ಇಬ್ಬರಿಗೂ ವಾಪಸ್ಸು ಸಿನಿಮಾ ರಂಗಕ್ಕೆ ಬರುವಂತೆ ಅಭಿಮಾನಿಗಳು ಮನವಿ ಮಾಡಿದ್ದಾರೆ. ಇದನ್ನೂ ಓದಿ:ಮಾದೇವನಿಗೆ ಸೋನಲ್ ಮೊಂಥೆರೋ ಜೋಡಿ
ಸದ್ಯ ಓಡುತ್ತಿರುವ ಕುದುರೆಗಳಾದ ರಶ್ಮಿಕಾ ಮಂದಣ್ಣ ಟಾಪ್ 1ರ ಸ್ಥಾನದಲ್ಲಿದ್ದರೆ, ಟಾಪ್ 2 ನೇ ಸ್ಥಾನವನ್ನು ರಚಿತಾ ರಾಮ್ ಪಡೆದುಕೊಂಡಿದ್ದಾರೆ. ಕೆಲ ವರ್ಷಗಳಿಂದ ರಶ್ಮಿಕಾ ಕನ್ನಡದಲ್ಲಿ ಸಿನಿಮಾ ಮಾಡದೇ ಇದ್ದರೂ, ನಂಬರ್ 1 ಸ್ಥಾನವನ್ನು ಗಳಿಸಿದ್ದಾರೆ. ಹೀಗಾಗಿ ಅಭಿಮಾನಿಗಳು ಯಾವತ್ತೂ ತಮ್ಮ ನೆಚ್ಚಿನ ಕಲಾವಿದರನ್ನು ಮರೆಯುವುದಿಲ್ಲ ಎನ್ನುವುದಕ್ಕೆ ಇದು ಸಾಕ್ಷಿಯಾಗಿದೆ.