ಬೆಂಗಳೂರು: ಹ್ಯಾಟ್ರಿಕ್ ಹೀರೋ ಶಿವರಾಜ್‍ಕುಮಾರ್ ಅವರಿಗೆ ಇಂದು ಲಂಡನ್‍ನಲ್ಲಿ ಶಸ್ತ್ರ ಚಿಕಿತ್ಸೆ ನಡೆಯಲಿದೆ. ಶಸ್ತ್ರ ಚಿಕಿತ್ಸೆ ಯಶಸ್ವಿ ಆಗಲಿ ಎಂದು ಅಭಿಮಾನಿಗಳು ಹೋಮ, ಹವನ ಮಾಡಿಸುತ್ತಿದ್ದಾರೆ.
ಇಂದು ಲಂಡನ್‍ನಲ್ಲಿ ಶಿವರಾಜ್ ಕುಮಾರ್ ಭುಜದ ಶಸ್ತ್ರಚಿಕಿತ್ಸೆಗೆ ಒಳಗಾಗುತ್ತಿದ್ದಾರೆ. ಹಾಗಾಗಿ `ಶಿವರಾಜ್ ಕುಮಾರ್ ಸೇನಾ ಸಮಿತಿ’ ಶಸ್ತ್ರಚಿಕಿತ್ಸೆ ಯಶಸ್ವಿ ಆಗಲಿ ಎಂದು ಗವಿಪುರಂ ಶಿವನ ದೇವಸ್ಥಾನದಲ್ಲಿ ಮೃತ್ಯುಂಜಯ ಹೋಮ ಮಾಡಿಸುತ್ತಿದೆ.
ಈ ಹಿಂದೆ ಶಿವರಾಜ್‍ಕುಮಾರ್ ಅವರು ಪಬ್ಲಿಕ್ ಟಿವಿ ಜೊತೆ ಮಾತನಾಡಿ, ಈ ಬಾರಿ ಹುಟ್ಟುಹಬ್ಬಕ್ಕೆ ನಾನು ಇರುವುದಿಲ್ಲ. ಹುಟ್ಟುಹಬ್ಬ ಮಾಡುತ್ತಿಲ್ಲ ಎಂದು ಅಲ್ಲ. ಆ ದಿನ ನನ್ನ ಶಸ್ತ್ರಚಿಕಿತ್ಸೆ ಇದೆ. ನನಗೆ ಭುಜದ ನೋವು ಆಗಾಗ ಕಾಣಿಸುತ್ತಿದೆ. ಹಾಗಾಗಿ ನಾನು ಶಸ್ತ್ರಚಿಕಿತ್ಸೆಗೆ ಹೋಗಬೇಕಾಗುತ್ತದೆ. ಹುಟ್ಟುಹಬ್ಬದ ನಂತರ ಹೋಗೋಣ ಎಂದುಕೊಂಡೆ. ಆದರೆ ನನಗೆ ಬೇರೆ ದಿನ ಅಪಾಯಿಂಟ್‍ಮೆಂಟ್ ಸಿಗಲಿಲ್ಲ. ಇದನ್ನು ಮಿಸ್ ಮಾಡಿದ್ರೆ ಆಗಸ್ಟ್ ವರೆಗೂ ಕಾಯಬೇಕು. ಹಾಗಾಗಿ ನಾನು ಲಂಡನ್‍ಗೆ ಹೋಗಲೇಬೇಕು ಎಂದಿದ್ದರು.
ಬಳಿಕ ಮಾತನಾಡಿ, ಅಗಸ್ಟ್ ವರೆಗೂ ಕಾಯಬೇಕೆಂದರೆ ನೋವು ಜಾಸ್ತಿ ಆಗುತ್ತದೆ. ಆಗ ನನ್ನ ಸಮಸ್ಯೆ ಜಾಸ್ತಿ ಆಗುತ್ತದೆ. ನನಗೆ ಭುಜದ ನೋವಿದೆ. ಶಾರೂಕ್ ಖಾನ್ ಹಾಗೂ ಎಸ್. ಎಂ ಕೃಷ್ಣ ಅವರಿಗೆ ಚಿಕಿತ್ಸೆ ನೀಡಿದ್ದ ವೈದ್ಯರೇ ನನಗೆ ಚಿಕಿತ್ಸೆ ನೀಡುತ್ತಾರೆ ಎಂದು ಹೇಳಿದ್ದರು.