ಬಾಲಿವುಡ್ (Bollywood) ನಟಿ, ಸುದೀಪ್ ನಟನೆಯ ವಿಕ್ರಾಂತ್ ರೋಣ (Vikrant Rona) ಸಿನಿಮಾದಲ್ಲಿ ‘ರಾ ರಾ ರಕ್ಕಮ್ಮ’ (Rakkamma) ಹಾಡಿಗೆ ಹೆಜ್ಜೆ ಹಾಕಿರುವ ಜಾಕ್ವೆಲಿನ್ ಫರ್ನಾಂಡಿಸ್ (Jacqueline Fernandez) ನಿನ್ನೆಯಷ್ಟೇ ‘ಟೆಲ್ ಇಟ್ ಲೈಕ್ ಎ ವುಮೆನ್’ ಸಿನಿಮಾದ ಡಿನ್ನರ್ ಪಾರ್ಟಿಗೆ ಆಗಮಿಸಿದ್ದರು. ಈ ಪಾರ್ಟಿಗೆ ಬಂದಾಗ ಅವರು ಧರಿಸಿದ್ದ ಡ್ರೆಸ್ (Dress) ಎಲ್ಲರ ಗಮನ ಸೆಳೆದಿತ್ತು. ವಿಶೇಷ ರೀತಿಯ ವಿನ್ಯಾಸ ಹೊಂದಿದ್ದ ಈ ಬಟ್ಟೆ ತೊಟ್ಟ ಚಿಟ್ಟಿಕಂಡು ಫ್ಯಾನ್ಸ್ ಫಿದಾ ಆಗಿದ್ದಾರೆ.
Advertisement
ಆ ಫೋಟೋವನ್ನು ಅವರು ಇನ್ಸ್ಟಾಗ್ರಾಮ್ ನಲ್ಲಿ ಫೋಸ್ಟ್ ಮಾಡಿದ್ದು, ಭಾರೀ ಮೆಚ್ಚುಗೆ ವ್ಯಕ್ತವಾಗಿದೆ. ಕೆಲವರು ಈ ಡ್ರೆಸ್ ಬಗ್ಗೆ ನೆಗೆಟಿವ್ ಕಾಮೆಂಟ್ ಕೂಡ ಮಾಡಿದ್ದಾರೆ. ನೀಲಿ ಬಣ್ಣದ ಬಟ್ಟೆಯಲ್ಲಿ ಕಂಗೊಳಿಸಿರುವ ಜಾಕ್ವೆಲಿನ್ ಸಖತ್ ಹಾಟ್ ಹಾಟ್ ಆಗಿ ಕಂಡಿದ್ದಾರೆ. ಹೀಗಾಗಿ ಫೋಟೋ ಕೂಡ ವೈರಲ್ ಆಗಿದೆ. ಇದನ್ನೂ ಓದಿ: ದಾಂಪತ್ಯ ಜೀವನಕ್ಕೆ ಕಾಲಿಡಲು ಸಜ್ಜಾದ `ಜೊತೆ ಜೊತೆಯಲಿ’ ಶಿಲ್ಪಾ ಅಯ್ಯರ್
Advertisement
Advertisement
ಟೆಲ್ ಇಟ್ ಲೈಕ್ ಎ ವುಮೆನ್ ಸಿನಿಮಾ ತಂಡ ವಿಶೇಷವಾದ ಪಾರ್ಟಿಯನ್ನು ಆಯೋಜನೆ ಮಾಡಲಾಗಿತ್ತು. ಈ ಸಿನಿಮಾಗೆ ಆಸ್ಕರ್ ಪ್ರಶಸ್ತಿ ಕೂಡ ಬಂದಿದ್ದು, ಹಲವು ಕಡೆ ಪ್ರದರ್ಶನ ಮತ್ತು ಪಾರ್ಟಿಗಳನ್ನು ಮಾಡುತ್ತಿದ್ದಾರೆ. ಕೆಲವು ಸೆಲಿಬ್ರಿಟಿಗಳನ್ನು ಆಹ್ವಾನಿಸುತ್ತಿದ್ದಾರೆ. ಇಂಥದ್ದೊಂದು ಆಹ್ವಾನ ಜಾಕ್ವೆಲಿನ್ ಗೆ ಬಂದಿದೆ. ಹಾಗಾಗಿ ಪಾಲ್ಗೊಂಡಿದ್ದಾರೆ. ಆ ನೆನಪುಗಳನ್ನು ಅವರು ಹಂಚಿಕೊಂಡಿದ್ದಾರೆ.
Advertisement
ಜಾಕ್ವೆಲಿನ್ ಫರ್ನಾಂಡಿಸ್ ಗೆ ಒಂದು ಕಡೆ ಈ ರೀತಿಯ ಗೌರವಗಳು ದೊರೆಯುತ್ತಿದ್ದರೆ, ಮತ್ತೊಂದು ಕಡೆ ಜೈಲಿನಲ್ಲಿರುವ ಸುಕೇಶ್ ಚಂದ್ರಶೇಖರ್ ಕಡೆಯಿಂದ ನಾನಾ ರೀತಿಯ ಸಂದೇಶಗಳು ಬರುತ್ತಿವೆ. ಮೊನ್ನೆಯಷ್ಟೇ ಇನ್ನೂ ಜಾಕ್ವೆಲಿನ್ ನನ್ನು ಪ್ರೀತಿಸುತ್ತಿರುವ ವಿಚಾರವನ್ನು ಸುಕೇಶ್ ಹಂಚಿಕೊಂಡಿದ್ದಾರೆ. ಪ್ರೇಮಿಗಳ ದಿನಕ್ಕೆ ವಿಶ್ ಕೂಡ ಮಾಡಿದ್ದರು. ಈ ಎಲ್ಲ ಸಂಗತಿಗಳನ್ನು ಜಾಕ್ವೆಲಿನ್ ಬ್ಯಾಲೆನ್ಸ್ ಮಾಡಿಕೊಂಡು ಹೋಗುತ್ತಿದ್ದಾರೆ.