ಇತ್ತೀಚಿನ ದಿನಗಳಲ್ಲಿ ಅಕ್ಷಯ್ ಕುಮಾರ್ ನಟನೆಯ ಸಿನಿಮಾಗಳು ಬಾಕ್ಸ್ ಆಫೀಸಿನಲ್ಲಿ ಮಕಾಡೆ ಮಲಗುತ್ತಿವೆ. ಕೆಲ ದಿನಗಳ ಹಿಂದೆಯಷ್ಟೇ ರಿಲೀಸ್ ಆಗಿರುವ ಸಾಮ್ರಾಟ್ ಪೃಥ್ವಿರಾಜ್ ಸಿನಿಮಾ ನಿರ್ಮಾಪಕರಿಗೆ ಸಾಕಷ್ಟು ನಷ್ಟವನ್ನುಂಟು ಮಾಡಿದೆ. ಸರಿಯಾದ ತಯಾರಿ ಮತ್ತು ಪಾತ್ರಗಳ ಆಯ್ಕೆಯನ್ನು ಮುಂದಿಟ್ಟುಕೊಂಡು ಸೋಲಿನ ವಿಮರ್ಶೆ ಮಾಡಲಾಗುತ್ತಿದೆ. ಈ ನಡುವೆ ಅಕ್ಷಯ್ ಕುಮಾರ್ ಮತ್ತೊಂದು ಬಯೋಪಿಕ್ ಮಾಡಲು ಮುಂದಾಗಿದ್ದಾರೆ.
Advertisement
ಅಕ್ಷಯ್ ಕುಮಾರ್ ನಟನೆಯ ಮತ್ತೊಂದು ಬಯೋಪಿಕ್ ‘ಕ್ಯಾಪ್ಸೋಲ್ ಗಿಲ್’ ಸಿನಿಮಾದ ಪೋಸ್ಟರ್ ರಿಲೀಸ್ ಆಗಿದ್ದು, ಸಿನಿಮಾದ ಪೋಸ್ಟರ್ ಬಿಡುಗಡೆ ಆಗುತ್ತಿದ್ದಂತೆಯೇ ಸಖತ್ ಟ್ರೋಲ್ ಗೆ ಒಳಗಾಗಿದ್ದಾರೆ ಅಕ್ಷಯ್ ಕುಮಾರ್. ಅದು ಸಿಂಗ್ ಪಾತ್ರವಾಗಿದ್ದರಿಂದ ಕೃತಕ ಗಡ್ಡ ಮೀಸೆ ಅಂಟಿಸಲಾಗಿದೆ. ಅವೆರಡೂ ಅಕ್ಷಯ್ ಕುಮಾರ್ ಗೆ ಒಪ್ಪಿಲ್ಲವಾದರಿಂದ ಮತ್ತು ಪಾತ್ರಕ್ಕಾಗಿ ಅವರು ಸಮಯ ಕೊಡದೇ ನಟಿಸುವುದರಿಂದ ಪಾತ್ರಗಳು ಅವರಿಗೆ ಒಪ್ಪುವುದಿಲ್ಲ ಎಂದು ಕಾಮೆಂಟ್ ಮಾಡಿದ್ದಾರೆ. ಇದನ್ನೂ ಓದಿ:ಸೀರೆಯಲ್ಲಿ ಮಿಂಚಿದ ಉರ್ಫಿ ಜಾವೇದ್: ಹೀಗೂ ಸೀರೆ ಉಡಬಹುದಾ ಎಂದ ಫ್ಯಾನ್ಸ್
Advertisement
Advertisement
ಅಮೀರ್ ಖಾನ್ ಸೇರಿದಂತೆ ಹಲವು ಕಲಾವಿದರು ಕೃತಕವಾಗಿ ಯಾವುದೇ ಪಾತ್ರಗಳಲ್ಲಿ ಕಾಣಿಸುವುದಿಲ್ಲ. ಕಾರಣ, ಅವರ ತಯಾರಿಯೇ ಆಗಿರುತ್ತದೆ. ಆದರೆ, ಅಕ್ಷಯ್ ಆ ರೀತಿಯ ತಯಾರಿ ಮಾಡಿಕೊಳ್ಳುವುದೇ ಇಲ್ಲ. ಹಾಗಾಗಿ ಪಾತ್ರಗಳಿಗೆ ಒಪ್ಪುವುದಿಲ್ಲ. ಇನ್ಮುಂದೆ ನೀವು ಬಯೋಪಿಕ್ ಮಾಡಬೇಡಿ ಎಂದು ಸ್ವತಃ ಅಕ್ಷಯ್ ಅಭಿಮಾನಿಗಳೇ ಕಾಮೆಂಟ್ ಮಾಡಿದ್ದಾರೆ.