ಬೆಳಗಾವಿ: ಅಭಿಮಾನಿಗಳು ನೆಚ್ಚಿನ ನಟ-ನಟಿಯರ ಹೆಸರುಗಳನ್ನ ತಮ್ಮ ಮೈಮೇಲೆ ಹಚ್ಚೆ ಹಾಕಿಸಿಕೊಳ್ಳೋದು ಸಾಮಾನ್ಯ. ಆದ್ರೆ ಚುಣಾವಣೆ ಹತ್ತಿರ ಬರುತ್ತಿದ್ದಂತೆಯೇ ಅಭಿಮಾನಿಗಳಿಗೆ ತಮ್ಮ ನಾಯಕರ ಪರವಾಗಿ ಎಲ್ಲಿಲ್ಲದ ಪ್ರೀತಿ ಬಂದು ಬಿಡುತ್ತೆ ಅನ್ನೋದಕ್ಕೆ ಇಲ್ಲೊಂದು ಜೀವಂತ ಉದಾಹರಣೆ ಇದೆ.
ಇಲ್ಲೊಬ್ಬ ಅಭಿಮಾನಿ ತನ್ನ ಕೈಯಲ್ಲಿ ನಾಯಕನ ಹೆಸರನ್ನು ಬ್ಲೇಡ್ ನಿಂದ ಕೊಯ್ದುಕೊಳ್ಳುವ ಮೂಲಕ ಹುಚ್ಚು ಅಭಿಮಾನವನ್ನು ವ್ಯಕ್ತಪಡಿಸಿದ್ದಾನೆ. ಜಿಲ್ಲೆಯ ಹುಕ್ಕೇರಿ ತಾಲೂಕಿನ ಹರಗಾಪುರ ಗ್ರಾಮದ ಬಿಜೆಪಿ ಯುವ ಮುಖಂಡ ಪವನ್ ಪಾಟೀಲ್ ಎಂಬಾತ ಹುಕ್ಕೇರಿ ಮತ ಕ್ಷೇತ್ರದ ಶಾಸಕ ಉಮೇಶ್ ಕತ್ತಿ ಹೆಸರನ್ನು `ಕತ್ತಿ ಸಾಹುಕಾರ್’ ಅಂತ ಬರೆದುಕೊಳ್ಳುವುದರ ಮೂಲಕ ತನ್ನ ಹುಚ್ಚು ಅಭಿಮಾನವನ್ನು ವ್ಯಕ್ತಪಡಿಸಿದ್ದಾನೆ.
ಪವನ್ ಪಾಟೀಲ್ ತನ್ನ ಮನೆ ದೇವರಾದ ಮಂಗಸೂಳಿ ಮಲ್ಲಯ್ಯ ಮತ್ತು ಶ್ರೀಶೈಲ ಮಲ್ಲಿಕಾರ್ಜುನ ದೇವರಿಗೆ ಹರಕೆ ಹೊತ್ತು ತನ್ನ ಎಡಗೈ ಮೇಲೆ ಕತ್ತಿಸಾಹುಕಾರ್ ಎಂದು ಬರೆದುಕೊಂಡಿದ್ದಾನೆ ಎನ್ನಲಾಗಿದೆ.
ಸದ್ಯ ಪವನ್ ಪಾಟೀಲ್ ಅವರ ಫೋಟೊಗಳು ಈಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಎಲ್ಲೆಡೆ ಚರ್ಚೆಗೆ ಗ್ರಾಸವಾಗಿದೆ.