ಬಾಲಿವುಡ್ (Bollywood) ರಂಗದ ಸ್ಟಾರ್ ಜೋಡಿಗಳಲ್ಲಿ ಒಂದಾಗಿರುವ ಐಶ್ವರ್ಯಾ ರೈ- ಅಭಿಷೇಕ್ ಬಚ್ಚನ್‌ಗೆ (Abhishek bachchan) ಅಪಾರ ಅಭಿಮಾನಿಗಳ ಬಳಗವಿದೆ. ಇಬ್ಬರೂ ಸಿನಿಮಾ ರಂಗದಲ್ಲಿ ಆಕ್ಟೀವ್ ಆಗಿದ್ದಾರೆ. ಸದ್ಯ ಐಶ್ವರ್ಯಾ ರೈ ಅವರು ಮಣಿರತ್ನಂ (Maniratnam) ಸಿನಿಮಾ ಮೂಲಕ ನಟಿ ಸದ್ದು ಮಾಡ್ತಿದ್ದಾರೆ. ಐಶ್ ನಟನೆ ನೋಡಿ ಫ್ಯಾನ್ಸ್, ಪತಿ ಅಭಿಷೇಕ್ ಬಚ್ಚನ್ ಮನವಿವೊಂದನ್ನ ಮಾಡಿದ್ದಾರೆ.
ಸಿನಿಮಾ ಸೆಟ್‌ವೊಂದರಲ್ಲಿ ಐಶ್-ಅಭಿಷೇಕ್ ನಡುವೆ ಪ್ರೇಮಾಂಕುರವಾಗಿ 2017ರಲ್ಲಿ ಹಸೆಮಣೆ ಏರಿದ್ದರು. ಆರಾಧ್ಯ ಎಂಬ ಮುದ್ದಾದ ಮಗಳಿದ್ದಾರೆ. ಸ್ಟಾರ್ ನಟಿಯಾಗಿದ್ದಾಗಲೇ ಹಸೆಮಣೆ ಏರಿದ್ದ ನಟಿ ಐಶ್ವರ್ಯಾ ಮೇಲೆ ಇಂದಿಗೂ ಅಭಿಮಾನಿಗಳಿಗೆ ಕ್ರೇಜ್ ಇದೆ. ಅವರ ಹೆಚ್ಚೆಚ್ಚು ಸಿನಿಮಾಗಳನ್ನ ನೋಡಲು ಎದುರು ನೋಡ್ತಿದ್ದಾರೆ. ಸದ್ಯ ‘ಪೊನ್ನಿಯನ್ ಸೆಲ್ವನ್ 2’ ಸಿನಿಮಾ ವಿಷ್ಯವಾಗಿ ಐಶ್ ಸದ್ದು ಮಾಡ್ತಿದ್ದಾರೆ. ಇದನ್ನೂ ಓದಿ:ರಶ್ಮಿಕಾಳನ್ನ ನೋಡಲು ಒಬ್ಬಳೇ ಓಡೋಡಿ ಬಂದ ತಂಗಿ ಶಿಮನ್ ಮಂದಣ್ಣ
ಸೋಷಿಯಲ್ ಮೀಡಿಯಾದಲ್ಲಿ ಅಭಿಮಾನಿಯೊಬ್ಬ ಅಭಿಷೇಕ್‌ಗೆ ಪ್ರಶ್ನೆಯೊಂದನ್ನ ಕೇಳಿದ್ದಾರೆ. ಐಶ್ವರ್ಯಾ ರೈ ಅವರಿಗೆ ಹೆಚ್ಚು ಸಿನಿಮಾಗಳನ್ನ ಮಾಡಲು ಬಿಡಿ, ನೀವು ಆರಾಧ್ಯಳನ್ನ ನೋಡಿಕೊಳ್ಳಿ ಎಂದು ಸಲಹೆ ನೀಡಿದ್ದಾರೆ. ಅದಕ್ಕೆ ನಟ ಕೂಡ ರಿಯಾಕ್ಟ್ ಮಾಡಿದ್ದಾರೆ.
As you should! Now let her sign more movies and you take care of Aaradhya ????????
— Unpaid PS2 marketing manager (@SilamSiva) April 29, 2023
ಐಶ್ವರ್ಯಾಗೆ ಹೆಚ್ಚು ಸಿನಿಮಾಗಳನ್ನ ಮಾಡಲು ಬಿಡಬೇಕಾ ಸರ್? ಯಾವುದಕ್ಕೂ ಅವರು ನನ್ನ ಅನುಮತಿ ಪಡೆಯುವ ಅಗತ್ಯವಿಲ್ಲ. ಅದರಲ್ಲೂ ಅವರು ಇಷ್ಟ ಪಡುವ ವಿಚಾರದಲ್ಲಿ ನನ್ನ ಅನುಮತಿ ಬೇಕಿಲ್ಲ ಎಂದು ನೇರವಾಗಿ ಅಭಿಷೇಕ್ ಬಚ್ಚನ್ ಹೇಳಿದ್ದಾರೆ. ಈ ಮೂಲಕ ಅವರ ಇಷ್ಟ, ಅವರ ಆಯ್ಕೆ ಎಂದು ನಟ ತಿಳಿಸಿದ್ದಾರೆ.
Let her sign??? Sir, she certainly doesn’t need my permission to do anything. Especially something she loves.
— Abhishek ???????????????????????????????? (@juniorbachchan) April 29, 2023
ಅಭಿಷೇಕ್ ಬಚ್ಚನ್ ಅವರು ಪತ್ನಿ ಐಶ್ವರ್ಯಾ ಬೆಂಬಲಿಸುವ ರೀತಿ ನೋಡಿ ಫ್ಯಾನ್ಸ್ ಖುಷಿಪಟ್ಟಿದ್ದಾರೆ. ಗುರು, ಧೂಮ್ 2, ರಾವಣ್, ಕುಚ್ ನಾ ಕಹೋ, ಸಿನಿಮಾಗಳನ್ನ ಒಟ್ಟಾಗಿ ನಟಿಸಿರುವ ಈ ಜೋಡಿ ಮತ್ತೆ ತೆರೆಯ ಮೇಲೆ ಒಟ್ಟಾಗಿ ಬರಲಿ ಎಂದು ಅಭಿಮಾನಿಗಳು ಆಶಿಸುತ್ತಿದ್ದಾರೆ.