ಮೈಸೂರು: ಪ್ರಧಾನಿ ನರೇಂದ್ರ ಮೋದಿ (Narendra Modi) ಅವರ ರೋಡ್ ಶೋ (Road Show) ವೇಳೆ ಅಭಿಮಾನಿಯೊಬ್ಬರು ಹೂವಿನ ಜೊತೆಗೆ ಮೊಬೈಲ್ (Mobile) ಎಸೆದ ಘಟನೆ ಮೈಸೂರಿನಲ್ಲಿ (Mysuru) ನಡೆದಿದೆ.
ಮೈಸೂರಿನಲ್ಲಿ ಸುಮಾರು 4 ಕಿ.ಮೀವರೆಗೆ ಮೋದಿ ರೋಡ್ ಶೋ ನಡೆಸಿದರು. ಈ ವೇಳೆ ಪ್ರಧಾನಿ ಮೋದಿ ಅವರು ಕೇಸರಿ ಶಾಲು ಧರಿಸಿ ಗಮನ ಸೆಳೆದರು. ರೋಡ್ ಶೋದ ರಸ್ತೆ ಇಕ್ಕೆಲೆಗಳಲ್ಲಿ ಕೇಸರಿ ಕಾರ್ಯಕರ್ತರು, ಅಭಿಮಾನಿಗಳು ಮೋದಿ ನೋಡಿ ಪುಳಕಿತರಾದರು. ದಾರಿಯುದ್ಧಕ್ಕೂ ಹೂಮಳೆ ಸುರಿಸಿದರು. ಹೂ ಹಾಕುವಾಗ ಅಭಿಮಾನಿಯೊಬ್ಬನ ಮೊಬೈಲ್ ಅಚಾನಕ್ ತೂರಿ ಬಂದ ಘಟನೆ ನಡೆದಿದೆ. ಆದರೆ ಮೊಬೈಲ್ ಪ್ರಚಾರ ವಾಹನದ ಮೇಲ್ಗಡೆ ಬಿದ್ದಿದ್ದು, ಯಾವುದೇ ತೊಂದರೆ ಸಂಭವಿಸಿಲ್ಲ. ಇದನ್ನೂ ಓದಿ: ಮೈಸೂರಿನಲ್ಲಿ ಮೋದಿ ಮೇನಿಯಾ – 4 ಕಿ.ಮೀ. ಭರ್ಜರಿ ರೋಡ್ ಶೋಗೆ ಜನಸಾಗರ
Advertisement
Advertisement
ಇತ್ತೀಚೆಗಷ್ಟೇ ಕೇರಳದ ಕೊಚ್ಚಿ ನಗರದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರ ರೋಡ್‌ಶೋ ವೇಳೆ ಮೊಬೈಲ್ ಎಸೆಯಲಾಗಿತ್ತು. ಈ ವೇಳೆ ಅಲ್ಲಿದ್ದ ಭದ್ರತಾ ಸಿಬ್ಬಂದಿ ಇದನ್ನು ಗಮನಿಸಿದ್ದಾರೆ. ತಕ್ಷಣ ಕಾರ್ಯಪ್ರವೃತ್ತರಾಗಿ ಮೋದಿಗೆ ತಗಲದಂತೆ ನೋಡಿಕೊಂಡಿದ್ದಾರೆ. ಈ ಬಳಿಕ ತನಿಖೆ ನಡೆಸಿದ್ದಾಗ ಪ್ರಧಾನಿಯವರ ಮೇಲೆ ಹೂವಿನ ದಳಗಳನ್ನು ಸುರಿಸುವುದಕ್ಕೆ ಯತ್ನಿಸುತ್ತಿದ್ದಾಗ ವ್ಯಕ್ತಿಯೊಬ್ಬರ ಕೈಯಿಂದ ಫೋನ್ ಕೈತಪ್ಪಿ ಹೋಗಿತ್ತು ಎಂದು ತಿಳಿದುಬಂದಿದೆ. ಇದನ್ನೂ ಓದಿ: ಮೋದಿ ನೋಡಲು 6 ತಿಂಗಳ ಮಗುವಿನೊಂದಿಗೆ ಬೆಂಗಳೂರಿನಿಂದ ಬಂದ ಮಹಿಳೆ
Advertisement