ಮುಂಬೈ: ನಿನ್ನ ಗೆಳತಿಯನ್ನು ಕೊಲ್ಲುತ್ತೇನೆಂದು ಬಾಲಿವುಡ್ ಚಾಕ್ಲೇಟ್ ಬಾಯ್ ವರುಣ್ ಧವನ್‍ಗೆ ಮಹಿಳಾ ಅಭಿಮಾನಿಯೊಬ್ಬರು ಜೀವ ಬೆದರಿಕೆ ಹಾಕಿದ್ದಾರೆ ಎಂದು ರಾಷ್ಟ್ರೀಯ ಮಾಧ್ಯಮಗಳು ವರದಿ ಮಾಡಿವೆ.
ವರುಣ್ ಧವನ್ ತಮ್ಮ ಅಭಿಮಾನಿಗಳೊಂದಿಗೆ ನಿರಂತರ ಸಂಪರ್ಕದಲ್ಲಿರುತ್ತಾರೆ. ಸಾಮಾಜಿಕ ಜಾಲತಾಣ ಮತ್ತು ಚಿತ್ರೀಕರಣದ ಬಿಡುವಿನ ಸಮಯದಲ್ಲಿಯೂ ಅಭಿಮಾನಿಗಳೊಂದಿಗೆ ಉತ್ತಮ ಬಾಂಧವ್ಯವನ್ನು ಹೊಂದಿದ್ದಾರೆ. ಆದ್ರೆ ಇದೀಗ ಮಹಿಳಾ ಅಭಿಮಾನಿಯೊಬ್ಬರು ಬೆದರಿಕೆ ಹಾಕುವ ಮೂಲಕ ಸುದ್ದಿಯಾಗಿದ್ದಾರೆ.
ಬೆದರಿಕೆ ಹಾಕಿದ್ಯಾಕೆ?
ಮಹಿಳಾ ಅಭಿಮಾನಿ ತನ್ನ ನೆಚ್ಚಿನ ನಟನ ವರುಣ್ ನನ್ನು ನೋಡಲು ಅವರ ನಿವಾಸಕ್ಕೆ ಆಗಮಿಸಿದ್ದಾರೆ. ಆದರೆ ಭದ್ರತಾ ಸಿಬ್ಬಂದಿ, ವರುಣ್ ಮನೆಯಲಿಲ್ಲ. ಹಾಗಾಗಿ ನಿಮಗೆ ಅವರನ್ನು ಭೇಟಿ ಮಾಡೋದಕ್ಕೆ ಆಗಲ್ಲ ಎಂದು ಹೇಳಿದ್ದಾರೆ. ಆದ್ರೂ ಹಠ ಬಿಡದ ಅಭಿಮಾನಿ ವರುಣ್ ನಿವಾಸದ ಮುಂದೆ ಹಲವು ಗಂಟೆಗಳ ಕಾಲ ಕಾಯುತ್ತಾ ನಿಂತಿದ್ದಾರೆ. ಭದ್ರತಾ ಸಿಬ್ಬಂದಿ ವರುಣ್ ಧವನ್ ‘ಕಳಂಕ್’ ಸಿನಿಮಾದ ಪ್ರಚಾರದಲ್ಲಿ ತೊಡಗಿಕೊಂಡಿದ್ದಾರೆ ಎಂದು ಮನವರಿಕೆ ಮಾಡಲು ಪ್ರಯತ್ನಿಸಿದ್ದಾರೆ. ಕಾದು ಕಾದು ಸುಸ್ತಾದ ಅಭಿಮಾನಿ ಗಲಾಟೆ ಮಾಡಿ, ವರುಣ್ ಗೆಳತಿ ನತಾಶಾ ದಲಾಲ್ ರನ್ನು ಕೊಲ್ಲುವುದಾಗಿ ಬೆದರಿಕೆ ಹಾಕಿ ತೆರಳಿದ್ದಾರೆ.
ವರುಣ್ ಧವನ್ ಗೆಳತಿ ನತಾಶಾ ಜೊತೆ ಸಾರ್ವಜನಿಕ ಸಮಾರಂಭದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಈ ವರ್ಷದ ಕೊನೆಗೆ ಇಬ್ಬರು ಮದುವೆ ಆಗಲಿದ್ದಾರೆ ಎಂಬ ಸುದ್ದಿಗಳು ಬಾಲಿವುಡ್ ಅಂಗಳದಲ್ಲಿ ಹರಿದಾಡುತ್ತಿದೆ. ಸದ್ಯ ವರುಣ್ ಅಭಿನಯದ ‘ಕಳಂಕ್’ ಸಿನಿಮಾ ಬಿಡುಗಡೆಗೆ ಸಿದ್ಧವಾಗಿದೆ.