ಬೆಂಗಳೂರು: ಸರಿಗಮಪದ ಹನುಮಂತ ಈಗ ಎಲ್ಲರ ಮನೆ ಮಾತಾಗಿದ್ದಾರೆ. ಅವರ ಮುಗ್ಧತೆ ಹಾಗೂ ಹಾಡುಗಾರಿಕೆಗೆ ಕರ್ನಾಟಕವೇ ಇಷ್ಟ ಪಡಲು ಶುರು ಮಾಡಿದೆ. ಇದೀಗ ಹನುಮಂತನ ಫ್ಯಾನ್ ವಿಶಿಷ್ಟವಾದ ಆಸೆಯೊಂದನ್ನು ವ್ಯಕ್ತಪಡಿಸಿದ್ದಾರೆ.
ಬೆಂಗಳೂರಿನ ರುದ್ರಪ್ಪ ಗಾರ್ಡನ್ ಗಲ್ಲಿಯೊಂದರಲ್ಲಿ ‘ಗ್ರೇಟ್ ಲುಕ್ಸ್’ ಎಂಬ ಸಣ್ಣ ಸಲೂನ್ ಶಾಪ್ ಇಟ್ಟುಕೊಂಡಿರುವ ಸಿರಂಜೀವಿ ಎಂಬವರೇ ಹುನುಮಂತ ಅವರ ಅಭಿಮಾನಿ. ಹನುಮಂತರ ಹಾಡುಗಳು ನಮ್ಮ ಮನೆಯ ಎಲ್ಲ ಸದಸ್ಯರಿಗೆ ತುಂಬಾನೇ ಇಷ್ಟ. ಹಳ್ಳಿಗಾಡಿನಿಂದ ಬಂದು ಈ ಮಟ್ಟಕ್ಕೆ ಸಾಧನೆ ಮಾಡಿರೋದು ನಮ್ಮಲ್ಲರಿಗೂ ಸ್ಪೂರ್ತಿ. ನಾನು ಹನುಮಂತಪ್ಪನಿಗೆ ಅಭಿಮಾನಿಯಾಗಿ ನನ್ನ ಸಲೂನ್ ನಲ್ಲಿ ಅವರಿಗೆ ಒಂದು ಮೇಕ್ ಓವರ್ ನೀಡಬೇಕೆಂಬುವುದು ನನ್ನ ಆಸೆ ಎಂದು ಸಿರಂಜೀವಿ ಹೇಳುತ್ತಾರೆ.
ಈ ಸಿರಂಜೀವಿ ತಂದೆ ಸೆಲೂನ್ ಅಲ್ಲಿ ಕೆಲಸ ಮಾಡ್ತಿದ್ರೂ ಈತ ಈ ಕೆಲಸ ಕಲಿತಿರಲಿಲ್ಲ. ಬೇರೆ ಬೇರೆ ಕೆಲಸಗಳನ್ನ ಮಾಡಿಕೊಂಡು ಜೀವನ ಸಾಗಿಸುತ್ತಿದ್ದರು. ಒಮ್ಮೆ ಅಪಘಾತದಲ್ಲಿ ಎರಡೂ ಕೈ ಪ್ರಾಕ್ಚರ್ ಆಗಿದ್ದರಿಂದ ಅನಿವಾರ್ಯವಾಗಿ ಈ ಕೆಲಸ ಕಲಿಬೇಕಾಯ್ತು. ಹಿರಿಯರು ಮಾಡುತ್ತಿದ್ದ ಕೆಲಸವೇ ನನ್ನ ಕೈ ಹಿಡಿದಿತ್ತು. ಕುರಿ ಮೇಯಿಸುತ್ತಿದ್ದ ನಮ್ಮ ಹನುಮಂತ ಈ ಮಟ್ಟಿನ ಸಾಧನೆ ಮಾಡಿರೋದು ನಮ್ಮೆಲ್ಲರಿಗೂ ಮಾದರಿ. ಆದ್ದರಿಂದ ಅವರಿಗೆ ಒಂದು ಸಣ್ಣ ಮೇಕ್ ಓವರ್ ಮಾಡೋ ಆಸೆ ಎಂದು ಸಿರಂಜೀವಿ ಮನವಿ ಮಾಡಿಕೊಂಡಿದ್ದಾರೆ.